ಮುಲ್ಕಿ: ಮಾರಡ್ಕ ಶ್ರೀ ಮಾರಿಯಮ್ಮ ದೇವಳದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಮುಲ್ಕಿ, ಮೇ3: ಸಮಾಜಮುಖಿ ಕಾಯಕ್ರಮಗಳು ಮತ್ತು ದೇವರ ಮೇಲಿನ ಶ್ರದ್ಧೆ, ಭಕ್ತಿ ಪ್ರಾಮಾಣಿಕ ಪ್ರಯತ್ನಗಳಿಂದ ಎಲ್ಲರ ಅಭಿವೃದ್ಧಿ ಸಾಧ್ಯ ಎಂದು ಯುವಜನ ಕ್ರೀಡಾ ಹಾಗೂ ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದ್ದಾರೆ.
ಕಿನ್ನಿಗೋಳಿ ಸಮೀಪದ ಮಾರಡ್ಕ ಶ್ರೀ ಮಾರಿಯಮ್ಮ ದೇವಳದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವರ್ಷವಾಧಿ ಮಾರಿಪೂಜೆ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಟೀಲು ದೇವಳದ ಅರ್ಚಕ ಅನಂತಪದ್ಮನಾ ಆಸ್ರಣ್ಣ ಆಶೀರ್ವಚನಗೈದರು. ಕಟೀಲು ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಎಮ್.ಬಾಲಕೃಷ್ಣ ಶೆಟ್ಟಿ ಧಾರ್ಮಿಕ ಉಪನ್ಯಾಸ ನೀಡಿದರು.
ಈ ಸಂದರ್ಭ ರಾಜ್ಯಮಟ್ಟದ ಪ್ರಶಸ್ತಿ ವಿಜೇತೆ ಗೀತಾ ಎಸ್. ಪಾಂಗಳರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಜಿಪಂ ಮಾಜಿ ಸದಸ್ಯ ಈಶ್ವರ್ ಕಟೀಲ್, ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಅಧ್ಯಕ್ಷ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ, ಜಿಪಂ ಸದಸ್ಯೆ ಕಸ್ತೂರಿ ಪಂಜ, ತಾಪಂ ಸದಸ್ಯೆ ಶುಭಲತಾ ಶೆಟ್ಟಿ, ಮೆನ್ನಬೆಟ್ಟು ಗ್ರಾಪಂ ಅಧ್ಯಕ್ಷೆ ಸರೋಜಿನಿ ಗುಜರನ್, ಉಪಾಧ್ಯಕ್ಷ ಮೋರ್ಗನ್ ವಿಲಿಯಂ, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಎಸ್ಸೆಸ್ಸೆಫ್ ಕಿನ್ನಿಗೋಳಿ ವಲಯಾಧ್ಯಕ್ಷ ಅಶ್ರಫ್ ರಝ ಅಮ್ಜಾಧಿ, ಇಂಜಿನಿಯರ್ ರಿಜ್ವಾನ್ ಅಹಮದ್ ಪುನರೂರು ಉಪಸ್ಥಿತರಿದ್ದರು.







