ಮೇ ತಿಂಗಳ ಪಡಿತರ ಬಿಡುಗಡೆ ಬಿಪಿಎಲ್ ಕಾರ್ಡ್‌ಗೆ ಪ್ರತಿ ಸದಸ್ಯರಿಗೆ 4 ಕೆಜಿ ಅಕ್ಕಿ
ಬೆಂಗಳೂರು, ಮೇ 3: ರಾಜ್ಯದಲ್ಲಿ ಸಾರ್ವಜನಿಕ ವಿತರಣಾ ಪದ್ಧತಿಯಡಿಯಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಚೀಟಿದಾರರಿಗೆ ವಿತರಿಸುವ ಸಂಬಂಧ 2016 ಮೇ ಮಾಹೆಗೆ ಆಹಾರ ಧಾನ್ಯಗಳನ್ನು ಈ ಕೆಳಕಂಡ ಪ್ರಮಾಣ ಹಾಗೂ ದರದಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ.
ರಾಜ್ಯದ ಎಲ್ಲ ಜಿಲ್ಲೆಗಳ ಎಎವೈ ಪಡಿತರ ಚೀಟಿಗಳಿಗೆ 29 ಕೆ.ಜಿ. ಅಕ್ಕಿ ಹಾಗೂ 6 ಕೆ.ಜಿ. ಗೋಧಿ ಹಾಗೂ ಬಿಪಿಎಲ್ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 4 ಕೆ.ಜಿ. ಅಕ್ಕಿ ಹಾಗೂ 1 ಕೆ.ಜಿ. ಗೋಧಿ ವಿತರಣಾ ಪ್ರಮಾಣ ನಿಗದಿಪಡಿಸಿ ಹಂಚಿಕೆ ಮಾಡಲಾಗಿದೆ. ಎಎವೈ ಮತ್ತು ಬಿಪಿಎಲ್‌ನ ಪ್ರತಿ ಪಡಿತರ ಚೀಟಿಗೆ ತಾಳೆ ಎಣ್ಣೆ 1 ಲೀ. 25ರೂ.ನಂತೆ ಅಯೋಡಿನ್‌ಯುಕ್ತ ಉಪ್ಪುಒಂದು ಕೆ.ಜಿ. 2 ರೂ.ನಂತೆ ಹಂಚಿಕೆ ಮಾಡಲಾಗಿದೆ. ನೋಂದಣಿಯಾದ ಎಪಿಎಲ್ ಪಡಿತರ ಚೀಟಿಯ ಏಕ ಸದಸ್ಯ ಕುಟುಂಬಕ್ಕೆ 4 ಕೆ.ಜಿ. ಆಹಾರಧಾನ್ಯವನ್ನು (3 ಕೆ.ಜಿ. ಅಕ್ಕಿ, 1 ಕೆ.ಜಿ. ಗೋಧಿ), ಒಂದಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬಕ್ಕೆ 10 ಕೆ.ಜಿ. ಆಹಾರ ಧ್ಯಾನವನ್ನು (5 ಕೆ.ಜಿ. ಅಕ್ಕಿ, 5 ಕೆ.ಜಿ. ಗೋಧಿ) ಪ್ರತಿ ಕೆ.ಜಿ. ಅಕ್ಕಿಗೆ 15ರೂ., ಪ್ರತಿ ಕೆ.ಜಿ. ಗೋಧಿಗೆ 10ರೂ. ದರದಲ್ಲಿ ಹಂಚಿಕೆ ಮಾಡಲಾಗಿದೆ.
ಎಎವೈ, ಬಿಪಿಎಲ್‌ನ ಏಕಸದಸ್ಯ, ದ್ವಿಸದಸ್ಯ ಅನಿಲ ರಹಿತ ಪಡಿತರ ಚೀಟಿಗಳಿಗೆ 3 ಲೀನಂತೆ, 3 ಮತ್ತು ಹೆಚ್ಚಿನ ಸದಸ್ಯರಿರುವ ಪಡಿತರ ಚೀಟಿಗಳಿಗೆ ಲೀ.ನಂತೆ, ಗ್ರಾಮಾಂತರ ಪ್ರದೇಶದ ಎಪಿಎಲ್ ಅನಿಲ ರಹಿತ ಪಡಿತರ ಚೀಟಿಗಳಿಗೆ 2 ಲೀ.ನಂತೆ ಸೀಮೆಎಣ್ಣೆ ವಿತರಣೆ ಪ್ರಮಾಣವನ್ನು ನಿಗದಿಪಡಿಸಿ ಪ್ರತಿ ಲೀ.ಗೆ 18ರೂ. ದರದಲ್ಲಿ ವಿತರಿಸಲು ಹಂಚಿಕೆ ನೀಡಲಾಗಿದೆ.





