ಡೇರ್ಡೆವಿಲ್ಸ್ಗೆ ಬೆದರಿದ ಲಯನ್ಸ್
ಝಹೀರ್ ಖಾನ್ ಬಳಗಕ್ಕೆ ಪಂಚಮ ಜಯ
ರಾಜ್ಕೋಟ್, ಮೇ 3: ಡೆಲ್ಲಿ ಡೇರ್ಡೆವಿಲ್ಸ್ ತಂಡ ಐಪಿಎಲ್ನ 31ನೆ ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಎಂಟು ವಿಕೆಟ್ಗಳ ಭರ್ಜರಿ ಜು ಗಳಿಸಿ ಅಂಕಪಟ್ಟಿಯಲ್ಲಿ 2ನೆ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೆಶನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 150 ರನ್ಗಳ ಗೆಲುವಿನ ಸವಾಲು ಪಡೆದ ಡೆಲ್ಲಿ ಇನ್ನೂ 16 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ಗುರಿ ತಲುಪಿತು.
ಆರಂಭಿಕ ದಾಂಡಿಗರಾದ ರಿಶಬ್ ಪಂತ್ 69 ರನ್(40ಎ, 9ಬೌ,2ಸಿ), ಕ್ವಿಂಟನ್ ಡಿ ಕಾಕ್ 46 ರನ್(45ಎ, 4ಬೌ,1ಸಿ) , ಸಂಜು ಸ್ಯಾಮ್ಸನ್ ಔಟಾಗದೆ 19 ರನ್(13ಎ, 1ಬೌ,1ಸಿ) ಮತ್ತು ಜೆ.ಪಿ.ಡುಮಿನಿ ಔಟಾಗದೆ 13 ರನ್(7ಎ, 2ಬೌ) ಗಳಿಸಿ ತಂಡಕ್ಕೆ ಸುಲಭದ ಗೆಲುವು ತಂದುಕೊಟ್ಟರು.
ಗುಜರಾತ್ 149/7; ಡೆಲ್ಲಿ ಡೇರ್ಡೆವಿಲ್ಸ್ ಆಟಗಾರರ ಸಂಘಟಿತ ಗುಜರಾತ್ ಲಯನ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 149 ರನ್ ಗಳಿಸಿತ್ತು.
ಶಹ್ಬಾಝ್ ನದೀಮ್ (23ಕ್ಕೆ 2), ಕ್ರಿಸ್ ಮೊರೀಸ್, ಝಹೀರ್ ಖಾನ್, ಮುಹಮ್ಮದ್ ಶಮಿ, ಅಮಿತ್ ಮಿಶ್ರಾ ಅವರ ಸಂಘಟಿತ ಬೌಲಿಂಗ್ ಪ್ರಹಾರಕ್ಕೆ ಬೆದರಿದ ಗುಜರಾತ್ ಲಯನ್ಸ್ನ ಆಟಗಾರರು ದೊಡ್ಡ ಮೊತ್ತದ ಸವಾಲನ್ನು ಸೇರಿಸುವಲ್ಲಿ ವಿಫಲರಾದರು.
ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಮಾತ್ರ ಅರ್ಧಶತಕ ದಾಖಲಿಸಿದರು.
ಟಾಸ್ ಜಯಿಸಿದ ಡೆಲ್ಲಿ ತಂಡದ ನಾಯಕ ಝಹೀರ್ ಖಾನ್ ಅವರು ಗುಜರಾತ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿದರು. ಗುಜರಾತ್ನ ಸ್ಕೋರ್ 4 ಓವರ್ಗಳಲ್ಲಿ 24ಕ್ಕೆ ತಲುಪುವ ಹೊತ್ತಿಗೆ 3 ವಿಕೆಟ್ ಕಳೆದುಕೊಂಡಿತು. ಆರಂಭಿಕ ದಾಂಡಿಗರಾದ ಬ್ರೆಂಡನ್ ಮೆಕಲಮ್(1), ಡ್ವೇಯ್ನೆ ಸ್ಮಿತ್ (15) ಮತ್ತು ಆ್ಯರೊನ್ ಫಿಂಚ್(5) ಔಟಾಗಿ ಪೆವಿಲಿಯನ್ ಸೇರಿದರು.
ನಾಯಕ ಸುರೇಶ್ ರೈನಾ(24), ಮತ್ತು ದಿನೇಶ್ ಕಾರ್ತಿಕ್ ನಾಲ್ಕನೆ ವಿಕೆಟ್ಗೆ ಜೊತೆಯಾಗಿ 51 ರನ್ ಸೇರಿಸಿದರು. ಇವರ ಬ್ಯಾಟಿಂಗ್ ನೆರವಿನಲ್ಲಿ ಗುಜರಾತ್ ಸ್ಕೋರ್ 11 ಓವರ್ಗಳಲ್ಲಿ 75ಕ್ಕೆ ತಲುಪಿತು. ರೈನಾ ಔಟಾದ ಬಳಿಕ ಕಾರ್ತಿಕ್ ಮತ್ತು ರವೀಂದ್ರ ಜಡೇಜ ಹೋರಾಟ ಮುಂದುವರಿಸಿ ಸ್ಕೋರ್ನ್ನು 17.3 ಓವರ್ಗಳಲ್ಲಿ 127ಕ್ಕೆ ತಲುಪಿಸಿದರು. ಅಷ್ಟರಲ್ಲಿ 53 ರನ್ (43ಎ, 5ಬೌ) ಗಳಿಸಿದ ಕಾರ್ತಿಕ್ ಅವರು ಶಮಿ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ಫಾಕ್ನರ್(7) ಮತ್ತು ಇಶಾನ್ ಕಿಶನ್ ವಿಫಲರಾದರು. ರವೀಂದ್ರ ಜಡೇಜ ಔಟಾಗದೆ 36 ರನ್(26ಎ, 4ಬೌ,1ಸಿ) ಗಳಿಸಿ ಅಜೇಯರಾಗಿ ಉಳಿದರು.