ನಿಮಗಿರುವುದು ತಲೆನೋವೇ ಅಥವಾ ಮೈಗ್ರೇನ್ ಸಮಸ್ಯೆಯೆ?
35 ವರ್ಷದ ನೀರು ಪುರೋಹಿತ್ ಸರಳ ಮೃದು ಸ್ವಭಾವದ ಮಹಿಳೆ. ಆದರೆ ತಿಂಗಳಿಗೊಮ್ಮೆ ಆಕ್ರೋಶಭರಿತರಾಗಿ ಮಕ್ಕಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಆಗಾಗ್ಗೆ ಅನಾರೋಗ್ಯದಿಂದಾಗಿ ಕೆಲಸಕ್ಕೆ ರಜೆ ಹಾಕುತ್ತಾಳೆ. ನಂತರ ಕೆಲಸಕ್ಕೇ ರಾಜೀನಾಮೆ ನೀಡಿದರು. ಕಳೆದ 12 ವರ್ಷಗಳಿಂದ ನೀರು ಮೈಗ್ರೇನಿನಿಂದ ಬಳಲುತ್ತಿದ್ದಾರೆ. 23 ವರ್ಷ ವಯಸ್ಸಿನಲ್ಲೇ ಆಕೆಗೆ ಮೈಗ್ರೇನ್ ಬಂದಿದೆ. ಕನಿಷ್ಠ ಎರಡು ದಿನ ತಾಳಲಾಗದ ನೋವು ಇರುತ್ತದೆ. ಯಾರಾದರೂ ಸ್ವಲ್ಪ ಕಿರಿಕಿರಿ ಮಾಡಿದರೂ ತಲೆನೋವು ಜೋರಾಗಿಬಿಡುತ್ತಿತ್ತು. ನೋವು ಕಡಿಮೆಯಾಗುವವರೆಗೆ ತಲೆ ಸುತ್ತ ಬಟ್ಟೆ ಕಟ್ಟಿ ಮಲಗಿಯೇ ಇರಬೇಕು.
ವಿಶ್ವ ಆರೋಗ್ಯ ಸಂಘಟನೆಯ ಪ್ರಕಾರ ತಲೆನೋವು ಸಮಸ್ಯೆಗಳು, ಮೈಗ್ರೇನ್ ಶೇ 30ಕ್ಕೂ ಅಧಿಕ ವಯಸ್ಕ ಜನರಿಗೆ ಜಾಗತಿಕವಾಗಿ ಬಾಧಿಸುತ್ತಿದೆ. ಜಾಗತಿಕವಾಗಿ ಹೆಚ್ಚು ಕಂಡು ಬರುವ ತಲೆನೋವು ಮೈಗ್ರೇನ್ ಆಗಿದ್ದರೂ ಅದನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವವರು ಕಡಿಮೆ. ಅದನ್ನು ಸಣ್ಣ ತಲೆನೋವು ಎಂದು ಜನರು ಬಿಟ್ಟುಬಿಡುತ್ತಾರೆ. ಹಾಗೆ ಮಾಡುವುದರಿಂದ ಅಂತಿಮವಾಗಿ ಚಿಕಿತ್ಸೆ ನೀಡಲಾಗದ ರೋಗವಾಗಿ ಅದು ಪರಿವರ್ತನೆಯಾಗುತ್ತದೆ.
ಮೈಗ್ರೇನ್ ಮತ್ತು ತಲೆನೋವಿನ ವ್ಯತ್ಯಾಸ
ನಟಿ ಜೆನ್ನಿಫರ್ ಮಾರಿಸನ್ ಹೇಳುವ ಪ್ರಕಾರ, ಆರಂಭದಲ್ಲಿಯೇ ಮೈಗ್ರೇನ್ ಬಗ್ಗೆ ತಿಳಿದಿದ್ದರೆ ಅದನ್ನು ನಿವಾರಿಸುವುದು ಸರಳವಾಗಿರುತ್ತಿತ್ತು. ನನ್ನ ದೃಷ್ಟಿ ಮಂದವಾಗುವ ಮೂಲಕ ಸಮಸ್ಯೆ ಆರಂಭವಾಯಿತು. ಹಾಗಿದ್ದರೂ ಮೈಗ್ರೇನ್ ಎಂದು ಗೊತ್ತಾಗಲಿಲ್ಲ. ನನಗೆ ಏನಾಗುತ್ತಿದೆ ಎಂದು ಭಯವಾಗುತ್ತಿತ್ತು. ಹೀಗೆ ಮಾರಿಸನ್ ಅವರಂತೆಯೇ ಮೈಗ್ರೇನ್ ರೋಗದ ಚಿಹ್ನೆಗಳನ್ನು ಅಲಕ್ಷಿಸುತ್ತಾರೆ. ವೈದ್ಯರ ಪ್ರಕಾರ ಮೈಗ್ರೇನ್ ಕೂಡ ತಲೆನೋವೇ. ಆದರೆ ಗಂಭೀರ ತಲೆನೋವು. ಹಾಗೆಂದು ಎಲ್ಲಾ ತಲೆನೋವು ಮೈಗ್ರೇನ್ ಆಗಿರುವುದಿಲ್ಲ. ಹಲವು ಅಂಶಗಳಲ್ಲಿ ಮೈಗ್ರೇನ್ ಮತ್ತು ತಲೆನೋವನ್ನು ವಿಂಗಡಿಸಬಹುದು. ಡಾ ಸಂಪತ್ ಅವರು ಹೇಳಿರುವ ಪ್ರಕಾರ ಮೈಗ್ರೇನ್ ಮತ್ತು ತಲೆನೋವಿನಲ್ಲಿ ಈ ಕೆಳಗಿನ ವ್ಯತ್ಯಾಸಗಳಿವೆ.
1. ಒಂದು ಮೈಗ್ರೇನ್ ತಲೆನೋವು ಸಾಮಾನ್ಯವಾಗಿ ವಾಕರಿಕೆ ಮತ್ತು ವಾಂತಿಯ ಜೊತೆಗೆ ಬರುತ್ತದೆ.
2. ನೋವು ಮಧ್ಯಮ ಅಥವಾ ಗಂಭೀರವಾಗಿರುತ್ತದೆ.
3. ಸ್ವಲ್ಪವೇ ದೈಹಿಕ ಚಟುವಟಿಕೆ ಮಾಡಿದರೂ ನೋವು ಜಾಸ್ತಿಯಾಗುತ್ತದೆ.
4. ಬೆಳಕು ಮತ್ತು ಧ್ವನಿಯಿಂದ ಹೆಚ್ಚು ನೋವು ಬರುವಷ್ಟು ಸೂಕ್ಷ್ಮ
5. ಅದು 4ರಿಂದ 72 ಗಂಟೆಗಳ ಕಾಲ ಇರುತ್ತದೆ.
ನಿಮ್ಮ ತಲೆನೋವಲ್ಲಿ ಮೇಲೆ ಹೇಳಿದ ಸಮಸ್ಯೆಗಳಿಲ್ಲದೆ ಇದ್ದಲ್ಲಿ ಅದು ಮೈಗ್ರೇನ್ ಆಗಿರುವುದಿಲ್ಲ. ಸಾಮಾನ್ಯ ತಲೆನೋವು ಆಗಿರಬಹುದು.
19 ವರ್ಷದ ವಿದ್ಯಾರ್ಥಿ ಅಪರ್ಣಾ ಸಿಂಗ್ ಪದೇ ಪದೇ ತಲೆನೋವು ಬಂದಾಗ ಕಂಪ್ಯೂಟರ್ ಹೆಚ್ಚು ನೋಡಿರುವ ಕಾರಣ ಎಂದುಕೊಂಡಿದ್ದರು. ಆದರೆ ವಾಂತಿಯೂ ಶುರುವಾದಾಗ ವೈದ್ಯರನ್ನು ಕಂಡರೆ, ಅವರು ಮೈಗ್ರೇನ್ ಎಂದರು. ಅಪರ್ಣಾಳ ಅಮ್ಮನಿಗೂ ಮೈಗ್ರೇನ್ ಇದ್ದ ಕಾರಣ ಆಕೆಗೆ ಇದು ಅಚ್ಚರಿ ಎನಿಸಲಿಲ್ಲ. ಆದರೆ ಅಷ್ಟು ಚಿಕ್ಕವಯಸ್ಸಲ್ಲೂ ಮೈಗ್ರೇನ್ ಬರುತ್ತದೆಯೇ ಎಂದು ಅಚ್ಚರಿಯಾಗಿತ್ತು. ವೈದ್ಯರು ಹೇಳುವ ಪ್ರಕಾರ ಯುವಜನಾಂಗ ಮೈಗ್ರೇನ್ ಎದುರಿಸುವ ಸಾಧ್ಯತೆ ಹೆಚ್ಚಾಗಿದೆ. ಋತುಸ್ರಾವದ ನಂತರ ಯುವತಿಯರಲ್ಲಿ ಮೈಗ್ರೇನ್ ಬಂದರೆ ಪುರುಷರಿಗೆ ಇನ್ನೂ ಬೇಗನೇ ಬರುತ್ತದೆ. ಆದರೆ ಮಹಿಳೆಯರು ಹೆಚ್ಚು ಮೈಗ್ರೇನ್ ರೋಗಕ್ಕೆ ತುತ್ತಾಗುತ್ತಾರೆ. ಪ್ರತೀ ಒಬ್ಬ ಪುರುಷನಿಗೆ ಮೂವರು ಮಹಿಳೆಯರು ಮೈಗ್ರೇನ್ ಹೊಂದಿದ್ದಾರೆ.
ಮೈಗ್ರೇನ್ ಬರಲು ವಂಶವಾಹಿನಿಯ ಮತ್ತು ಹಾರ್ಮೋನ್ ಕಾರಣವೂ ಹೆಚ್ಚಗಿರುತ್ತದೆ. ತಾಯಿಯಿಂದ ಮಗಳಿಗೆ ರೋಗ ಬರುವುದು ಮತ್ತು ಕುಟುಂಬದೊಳಗೇ ಹರಡುವುದು ಹೆಚ್ಚಾಗಿರುತ್ತದೆ. ಋತುಸ್ರಾವದಂತಹ ಸಣ್ಣ ಹಾರ್ಮೋನ್ ಬದಲಾವಣೆಯಿಂದಲೂ ಮೈಗ್ರೇನ್ ಬರುತ್ತದೆ. ಸಾಮಾನ್ಯವಾಗಿ ಜನರು ಮೈಗ್ರೇನ್ ಬಂದರೂ ಅದನ್ನು ಅಲಕ್ಷಿಸುತ್ತಾರೆ. ವೃತ್ತಿಪರವಾಗಿ ಹೆಚ್ಚು ಸಂಘರ್ಷಗಳು ಇರುವುದು, ಹೆಚ್ಚು ಸಮಯ ಕೆಲಸ ಮಾಡಿರುವುದು, ಕಂಪ್ಯೂಟರ್ ನೋಡುವುದು ತಲೆನೋವಿಗೆ ಕಾರಣ ಎಂದುಕೊಳ್ಳುತ್ತಾರೆ. ಆದರೆ ಪದೇ ಪದೇ ತಲೆನೋವು ಬಂದರೆ ವೈದ್ಯರನ್ನು ಕಾಣುವುದು ಅಗತ್ಯ. ಮೈಗ್ರೇನ್ ರೋಗವನ್ನು ಗುಣಪಡಿಸುವ ಚಿಕಿತ್ಸೆ ಇಲ್ಲದಿದ್ದರೂ, ವಯಸ್ಸು ಹೆಚ್ಚಾದಂತೆ ಅದರ ತೀವ್ರತೆ ಕಡಿಮೆಯಾಗಬಹುದು.
ಕೃಪೆ: timesofindia.