ಮಗು ಜನಿಸಿದ 22 ನಿಮಿಷಗಳಲ್ಲಿ ಆಧಾರ್ ನಂಬರ್ ಸಿದ್ಧ!

ಭೋಪಾಲ್, ಮೇ 4: ಮಧ್ಯಪ್ರದೇಶದಲ್ಲಿ ಮಗುವೊಂದು ಜನಿಸಿದ 22 ನಿಮಿಷಗಳಲ್ಲಿ ಆಧಾರ್ ನಂಬರ್‌ನ್ನು ನೀಡಲಾಗಿದೆ.
ಮಧ್ಯಪ್ರದೇಶದ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಮಗುವಿನ ಹೆಸರನ್ನು ನೊಂದಾಯಿಸಲಾಗಿದ್ದು, ಇನ್ನು ಒಂದು ವಾರದಲ್ಲಿ ಆಧಾರ್ ಕಾರ್ಡನ್ನು ಮಗುವಿನ ಕುಟುಂಬಕ್ಕೆ ತಲುಪಿಸಲಾಗುತ್ತದೆ. ಈ ವಿದ್ಯಮಾನವನ್ನು ಗಮನಿಸಿದ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್, ಈ ಮಗುವೊಂದು ಜನಿಸಿದ 22 ನಿಮಿಷಗಳಲ್ಲಿ ಆಧಾರ್ ಕಾರ್ಡ್‌ನ್ನು ಪಡೆದಿದೆ. ನರೇಂದ್ರ ಮೋದಿ ನೇತೃತ್ವದ ಡಿಜಿಟಲ್ ಇಂಡಿಯಾ ಕಲ್ಪನೆಯಿಂದಾಗಿ ಇದು ಸಾಧ್ಯವಾಯಿತು ಎಂದು ಟ್ವೀಟ್ ಮಾಡಿದ್ದಾರೆ.
ಐದು ವರ್ಷದ ಕೆಳಗಿನ ಮಕ್ಕಳು ಆಧಾರ್ ಕಾರ್ಡ್‌ಗೆ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಕಳೆದ ವರ್ಷ ಹೊಸ ನಿಯಮ ತರಲಾಗಿತ್ತು. 5 ವರ್ಷದ ಮಕ್ಕಳಲ್ಲಿ ಬೆರಳಚ್ಚುಗಳಂತಹ ಬಯೊಮೆಟ್ರಿಕ್ ದತ್ತಾಂಶಗಳಲ್ಲಿ ವ್ಯತ್ಯಾಸವಾಗುವ ಕಾರಣ 5 ವರ್ಷದೊಳಗಿನ ಮಕ್ಕಳನ್ನು ಆಧಾರ್‌ಗೆ ನೋಂದಣಿ ಮಾಡುತ್ತಿರಲಿಲ್ಲ.
ನವಜಾತ ಮಗುವಿಗೂ ಆಧಾರ್ ಕಾರ್ಡ್ ನೀಡಬಹುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ನಿರ್ದೇಶನ ನೀಡಿದ್ದರು. ಹೊಸ ನಿಯಮದ ಪ್ರಕಾರ ಮಗುವಿಗೆ ಹೆಸರು ಇಡದೇ ಇದ್ದರೂ ಆಧಾರ್‌ಗೆ ನೋಂದಣಿ ಮಾಡಿಸಿಕೊಳ್ಳಬಹುದು. ಆರು ವರ್ಷಗಳ ನಂತರ ಮಕ್ಕಳ ಬಯೋಮ್ಯಾಟ್ರಿಕ್ ವಿವರಗಳನ್ನು ಪಡೆಯಲಾಗುತ್ತದೆ. 5 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್ ತಯಾರಿಸುವಾಗ ಮಕ್ಕಳ ಆಧಾರ್ ಕಾರ್ಡ್‌ನ್ನು ಹೆತ್ತವರ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾಗುತ್ತದೆ ಎಂದು ಯುಐಎಡಿಐ ವೆಬ್‌ಸೈಟ್‌ನಲ್ಲಿ ತಿಳಿಸಿದೆ.







