ಮೇ 7ರಂದು ಮೂಡುಬಿದಿರೆಯಲ್ಲಿ ತೆಂಗು ಉತ್ಪಾದಕರ ಅಭಿವೃದ್ಧಿ ಒಕ್ಕೂಟ ಉದ್ಘಾಟನೆ
ಮೂಡುಬಿದಿರೆ, ಮೇ 3: ಮೂಡುಬಿದಿರೆ ಹೋಬಳಿ ತೆಂಗು ಉತ್ಪಾದಕರ ಅಭಿವೃದ್ಧಿ ಒಕ್ಕೂಟದ ಉದ್ಘಾಟನೆಯು ಮೇ.7ರಂದು ಬೆಳಗ್ಗೆ 10:30ಕ್ಕೆ ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷ ಎಚ್.ಧನಕೀರ್ತಿ ಬಲಿಪ ತಿಳಿಸಿದ್ದಾರೆ.
ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಕ್ರೀಡಾ ಮತ್ತು ಮೀನುಗಾರಿಕೆ ಸಚಿವ ಕೆ.ಅಭಯಚಂದ್ರ ಜೈನ್ ಒಕ್ಕೂಟವನ್ನು ಉದ್ಘಾಟಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ, ಪ್ರಗತಿಪರ ತೆಂಗು ಬೆಳೆಗಾರ ಉಳೆಪಾಡಿ ಗುತ್ತು ರಾಜೇಶ್ ನಾಯಕ್, ಬೆಂಗಳೂರು ತೆಂಗು ಅಭಿವೃದ್ಧಿ ಮಂಡಳಿಯ ಉಪನಿರ್ದೇಶಕ ಹೇಮಚಂದ್ರ, ಮಂಡಳಿಯ ವಿಸ್ತರಣಾಧಿಕಾರಿ ಕೃಪಾಶಂಕರ್, ತಾಂತ್ರಿಕ ಅಧಿಕಾರಿ ಪ್ರಖ್ಯಾತ್, ಮಂಗಳೂರು ತೆಂಗು ಬೆಳೆಗಾರರ ಅಧ್ಯಕ್ಷ ಪುಣಚ ಬೈಲಗುತ್ತು ಶ್ರೀ ಧರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ತಿಳಿಸಿದರು.
ಮೂಡುಬಿದಿರೆ ಒಕ್ಕೂಟದ ನಿರ್ದೇಶಕರಾದ ಪೌಸ್ತೀನ್ ಮತ್ತು ಪೌಲ್ ಡಿಸೋಜ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





