ಕಿನ್ನಿಗೋಳಿ: ಸುರಗಿರಿ ಮಹಿಳಾ ಹಾಗೂ ಯುವತಿ ಮಂಡಲದ ವಾರ್ಷಿಕೋತ್ಸವ

ಕಿನ್ನಿಗೋಳಿ, ಮೇ 4: ಮಹಿಳಾ ಸಂಘಗಳು ಸವಾಜಮುಖಿ ಕೆಲಸಗಳಲ್ಲಿ ತೊಡಗಿ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಸಮಾಜ ಸೇವಕಿ, ಮುಲ್ಕಿ ವಿಜಯಾ ಕಾಲೇಜು ಆಡಳಿತ ಮಂಡಳಿಯ ಶಮೀನ ಆಳ್ವಾ ಹೇಳಿದ್ದಾರೆ.
ಸುರಗಿರಿ ಮಹಿಳಾ ಹಾಗೂ ಯುವತಿ ಮಂಡಲದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಸಂದರ್ಭ ಅತ್ತೂರು ಭಂಡಾರ ಮನೆಯ ಕೃಷಿಕೆ ಲಕ್ಷ್ಮೀಶೆಟ್ಟಿಯವರನ್ನು ಗೌರವಿಸಲಾಯಿತು.
ಬಾಲಾದಿತ್ಯ ಆಳ್ವ ಅಭಿನಂದನ ಭಾಷಣಗೈದರು. ದೇವಳದ ಪ್ರಧಾನ ಅರ್ಚಕ ವಿಶ್ವೇಶ ಭಟ್, ದೇವಳದ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ , ಟಿವಿ ನಿರೂಪಕಿ ದೀಪ್ತಿ ಬಾಲಕೃಷ್ಣ ಭಟ್, ಯುವಕ ಮಂಡಲದ ಅಧ್ಯಕ್ಷ ಸಚಿನ್ ಶೆಟ್ಟಿ, ಪ್ರಮೀಳಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಮಂಡಲದ ಅಧ್ಯಕ್ಷೆ ನಿರ್ಮಲಾ ನಾಯಕ್ ಸ್ವಾಗತಿಸಿದರು. ಗೀತಾ ಬಿ. ಆಳ್ವ ವರದಿ ವಾಚಿಸಿದರು. ಶೋಭಾ ವಂದಿಸಿದರು. ಪ್ರತಿಮಾ ಕಾರ್ಯಕ್ರಮ ನಿರೂಪಿಸಿದರು.
Next Story





