2015 ರಲ್ಲಿ ಯುರೋಪಿಗೆ ಆಶ್ರಯ ಹುಡುಕಿ ಬಂದವರಲ್ಲಿ 88,300 ಮಕ್ಕಳು!

ಬರ್ಲಿನ್, ಮೆ 4: ಕಳೆದ ವರ್ಷ ಯುರೋಪ್ನಲ್ಲಿ ಹೆತ್ತವರು ರಕ್ಷಕರು ಇಲ್ಲದ ಹದಿನಾಲ್ಕು ವಯಸ್ಸಿಗಿಂತ ಕೆಳಗಿನ 88,300 ಮಕ್ಕಳು ಆಶ್ರಯ ಹುಡುಕಿ ಬಂದಿದ್ದಾರೆ ಎಂದು ಲೆಕ್ಕಗಳು ತಿಳಿಸಿವೆ. ಸಮುದ್ರದಾಟಿದ ಒಟ್ಟು ಹತ್ತು ಲಕ್ಷ ಮಂದಿಯಲ್ಲಿಮಕ್ಕಳ ಸಂಖ್ಯೆ ಮೂರು ವರ್ಷಕ್ಕೆ ಹೋಲಿಸಿದರೆ 2015ರಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.
12.6 ಲಕ್ಷ ನಿರಾಶ್ರಿತರಿಂದ ಆಶ್ರಯಕ್ಕಾಗಿ ಅರ್ಜಿಗಳುಲಭಿಸಿದ್ದು ಇದರಲ್ಲಿ ಮೂರರಲ್ಲೊಂದು ಅಪ್ರಾಪ್ತ ವಯಸ್ಕ ಮಕ್ಕಳಾಗಿದ್ದಾರೆ. ಎರಡನೆಜಾಗತಿಕ ಯುದ್ಧದ ಬಳಿಕ ಜಗತ್ತು ಕಂಡರಿಯದ ಬಹುದೊಡ್ಡ ನಿರಾಶ್ರಿತ ಸಮಸ್ಯೆಯನ್ನು ಯುರೋಪಿಯನ್ ದೇಶಗಳಲ್ಲಿ ಎದುರಿಸುತ್ತಿದೆ.
ಅರ್ಜಿಗಳಲ್ಲಿ ಕೆಲವು ಸುಲಭದಲ್ಲಿ ಸ್ವೀಕರಿಸಲ್ಪಡಲಿ ಎಂಬ ಉದ್ದೇಶದ್ದೆಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಹೆಚ್ಚು ಜನರು ಸಮುದ್ರ ದಾಟಿ ಬರದಂತೆ ನೋಡಿಕೊಳ್ಳಲು ಟರ್ಕಿಯೊಂದಿಗೆ ಯುರೋಪಿಯನ್ ಯೂನಿಯನ್ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡಿವೆ. ಟರ್ಕಿಯಲ್ಲಿ ಈಗ 27 ಲಕ್ಷ ನಿರಾಶ್ರಿತರಿದ್ದಾರೆ ಎಂದು ವರದಿಗಳು ತಿಳಿಸಿವೆ.
Next Story





