ಎತಿಹಾದ್ ವಿಮಾನದಲ್ಲಿ ತಾಂತ್ರಿಕ ತೊಂದರೆ: 31 ಮಂದಿಗೆ ಗಾಯ

ದುಬೈ, ಮೇ 4: ತನ್ನ ವಿಮಾನವೊಂದು ಇಂಡೋನೇಶ್ಯದ ರಾಜಧಾನಿ ಜಕಾರ್ತದಲ್ಲಿ ಇಳಿಯಲು ಸಿದ್ಧತೆ ನಡೆಸುತ್ತಿದ್ದಾಗ ಒಮ್ಮೆಲೆ ತಾಂತ್ರಿಕ ತೊಂದರೆ ಕಾಣಿಸಿಕೊಂಡು ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಯುಎಇಯ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಎತಿಹಾದ್ ಏರ್‌ವೇಸ್ ತಿಳಿಸಿದೆ.
ಅಬುಧಾಬಿಯಿಂದ ಜಕಾರ್ತಕ್ಕೆ ಹೋಗುತ್ತಿದ್ದ ಇವೈ474 ವಿಮಾನ ಸೋಕರ್ಣೊ ಹಟ್ಟ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ನಡೆಸುವ ಸುಮಾರು 45 ನಿಮಿಷಗಳ ಮೊದಲು ‘‘ತೀವ್ರ ಹಾಗೂ ಅನಿರೀಕ್ಷಿತ ತೊಂದರೆ’’ಗೆ ಸಿಲುಕಿಕೊಂಡಿತು ಎಂದು ಎತಿಹಾದ್ ಏರ್‌ವೇಸ್ ಬುಧವಾರ ಹೇಳಿದೆ.
ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ ನಡೆಸಿತಾದರೂ 31 ಪ್ರಯಾಣಿಕರು ಗಾಯಗೊಂಡರು ಹಾಗೂ ಅವರ ಪೈಕಿ ಒಂಬತ್ತು ಮಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಅದು ತಿಳಿಸಿದೆ.
Next Story





