ಪಿ.ಎ. ಕಾಲೇಜಿನಲ್ಲಿ ಜಂಡರ್ ಚಾಂಪಿಯನ್ಸ್ ಫೋರಂ ಉದ್ಘಾಟನೆ

ಕೊಣಾಜೆ, ಮೇ 4: ಯುಜಿಸಿಯ ನಿರ್ದೇಶನದಂತೆ ಪಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜಂಡರ್ ಚಾಂಪಿಯನ್ಸ್ ಫೋರಂನ್ನು ರೋಶನಿ ನಿಲಯದ ಸ್ನಾತಕೋತ್ತರ ವಿಭಾಗದ ಡೀನ್ ಡಾ. ರಮೀಲಾ ಶೇಖರ್ ಉದ್ಘಾಟಿಸಿದರು.
ಇದೇ ವೇಳೆ ಮಾತನಾಡಿದ ಅವರು, ಲೈಂಗಿಕ ಸಮಾನತೆ-ಅಂತರದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್ ಶರೀಫ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಡಾ.ಶರ್ಮಿಳಾ ಕುಮಾರಿ, ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕ ಪ್ರೊ.ನಬೀಲ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.
ಡಾ.ಶಾಲೆಟ್ ಮಾಥ್ಯೂ ಸ್ವಾಗತಿಸಿದರು. ವಿದ್ಯಾರ್ಥಿನಿ ರೆಯಾ ಉನ್ನಿಸಾ ವಂದಿಸಿದರು. ರೂನಾ ಕಾರ್ಯಕ್ರಮ ನಿರೂಪಿಸಿದರು.
Next Story





