ಶಿವಮೊಗ್ಗ, ಮೂಡಿಗೆರೆಯಲ್ಲಿ ತಂಪೆರೆದ ವರುಣ
ಧಾರಾಕಾರ ಮಳೆಗೆ ನಿಟ್ಟುಸಿರು ಬಿಟ್ಟ ನಾಗರಿಕರು

ಶಿವಮೊಗ್ಗ, ಮೇ 4: ಶಿವಮೊಗ್ಗ ನಗರ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಸುಮಾರು ಒಂದು ಗಂಟೆಯ ಕಾಲ ಎಡೆಬಿಡದೆ ಬಿದ್ದ ಬಿರುಗಾಳಿ ಸಹಿತ ಧಾರಾಕಾರ ಲ್ಲಿ ಯು ಹಲವು ಅವಾಂತರಗಳನ್ನೇ ಸೃಷ್ಟಿಸಿತು. ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಧಕ್ಕೆಯಾಗುವುದರ ಜೊತೆಗೆ ಜೀವ ಹಾನಿ ಉಂಟು ಮಾಡಿತು. ಇಷ್ಟು ದಿನ ಬಿಸಿಲ ಬೇಗೆಯಿಂದ ತತ್ತರಿಸಿದ್ದ ನಾಗರಿಕರು, ಬೇಸಿಗೆಯ ಮೊದಲ ಮಳೆಗೆ ಇನ್ನಿಲ್ಲದ ತಾಪತ್ರಯ ಎದುರಿಸುವಂತಾಯಿತು.
ಭಾರೀ ಪ್ರಮಾಣದಲ್ಲಿ ಬೀಸಿದ ಬಿರುಗಾಳಿ, ಗುಡುಗಿನ ಸಪ್ಪಳವು ಕೆಲ ಸಮಯ ನಾಗರಿಕರ ಮನದಲ್ಲಿ ಆತಂಕ ಮೂಡಿಸಿತ್ತು. ಹಾಗೆಯೇ ಹಲವು ಬಡಾವಣೆಗಳಲ್ಲಿ ಮರಗಳು ಉರುಳಿ ಬೀಳುವುದಕ್ಕೂ ಕಾರಣವಾಯಿತು. ಇದರಿಂದ ರಾತ್ರಿಯಿಡೀ ನಗರದ ಹಲವು ಬಡಾವಣೆಗಳು ವಿದ್ಯುತ್ ಸಂಪರ್ಕದಿಂದ ವಂಚಿತವಾಗಿದ್ದವು. ಹಲವು ರಸ್ತೆಗಳಲ್ಲಿ ಜನ-ವಾಹನ ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಗುವಂತಾಯಿತು. ಹಲವೆಡೆ ಚರಂಡಿ-ರಾಜಕಾಲುವೆಗಳು ಉಕ್ಕಿ ಹರಿದ ಪರಿಣಾಮ ರಸ್ತೆಗಳ ಮೇಲೆಯೇ ಕೊಳಚೆ ನೀರು ಹರಿದು ಹೋಗುವಂತಾಗಿತ್ತು. ಕೊಳಚೆ ನೀರು ರಸ್ತೆಯ ಮೇಲೆಯೇ ಹರಿದು ಹೋದ ಪರಿಣಾಮ ನಾಗರಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. *ಅಸ್ತವ್ಯಸ್ತ: ನಗರದ ಹಲವೆಡೆ ಮರಗಳು ರಸ್ತೆ, ಮನೆ, ವಾಹನಗಳ ಮೇಲೆಯೇ ಉರುಳಿ ಬಿದ್ದಿದ್ದವು. ಕೆಲವೆಡೆ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ನೆಲಕ್ಕುರುಳುವಂತಾಗಿತ್ತು. ಇದರಿಂದ ಪ್ರಮುಖ ರಸ್ತೆಗಳಲ್ಲಿ ಸುಗಮ ವಾಹನ ಸಂಚಾರದ ಮೇಲೆ ಪರಿಣಾಮ ಬೀರುವುದರ ಜೊತೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪರಿಣಾಮದಿಂದ ಹಲವು ಬಡಾವಣೆಗಳಲ್ಲಿ ರಾತ್ರಿಯಿಡೀ ವಿದ್ಯುತ್ ಪೂರೈಕೆಯಿಲ್ಲದೆ, ಕತ್ತಲಲ್ಲಿ ಮುಳುಗುವಂತಾಗಿತ್ತು. ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಪೂರೈಕೆಗೆ ಹರಸಾಹಸ ನಡೆಸುತ್ತಿದ್ದರು. ಕೆಲವೆಡೆ ಬುಧವಾರ ಬೆಳಗ್ಗೆಯವರೆಗೂ ವಿದ್ಯುತ್ ಪೂರೈಕೆ ಸಾಧ್ಯವಾಗಿರಲಿಲ್ಲ. *ಕೆಸರುಮಯ: ಚರಂಡಿ ಹಾಗೂ ರಾಜಕಾಲುವೆಗಳಲ್ಲಿ ತುಂಬಿದ್ದ ಕಸಕಡ್ಡಿಯಿಂದ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ರಸ್ತೆಗಳ ಮೇಲೆಯೇ ಕೊಳಚೆ ನೀರು ಹರಿದು ಹೋಗುವಂತಾಯಿತು. ಇದರಿಂದ ಗುರುವಾರ ಬೆಳಗ್ಗೆ ಪ್ರಮುಖ ರಸ್ತೆಗಳಲ್ಲಿ ಕಸಕಡ್ಡಿ, ಮಣ್ಣು ತುಂಬಿಕೊಂಡಿದ್ದ ದೃಶ್ಯ ಕಂಡುಬಂದಿತು.
*ನಿಟ್ಟುಸಿರು: ಕಳೆದ ಮೂರ್ನಾಲ್ಕು ತಿಂಗಳಿನಿಂದ ಒಂದೇ ಸಮನೆ ಬೀಳುತ್ತಿದ್ದ ರಣ ಬಿಸಿಲು, ಕಣ್ಮರೆಯಾಗಿದ್ದ ಮಳೆಯಿಂದ ನಾಗರಿಕರು ಅಕ್ಷರಶಃ ತತ್ತರಿಸಿ ಹೋಗಿದ್ದರು. ಆದರೆ ಮಂಗಳವಾರ ಸಂಜೆ ಬಿದ್ದ ಧಾರಾಕಾರ ಮಳೆಯು ನಾಗರಿಕರನ್ನು ನಿಟ್ಟುಸಿರು ಬಿಡುವಂತೆ ಮಾಡಿತು. ಕಾದ ಕಾವಲಿಯಂತಾಗಿದ್ದ ನಗರವನ್ನು ತಂಪುಗೊಳಿಸಿತು. ಸಿಡಿಲು ಬಡಿದು ವ್ಯಕ್ತಿ ಸಾವು: ಮ
ನೆಯೊಂದರ ಮೇಲ್ಛಾವಣಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರಿಬ್ಬರಿಗೆ ಸಿಡಿಲು ಬಡಿದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ವರದಿಯಾಗಿದೆ. ಭದ್ರಾವತಿ ತಾಲೂಕಿನ ಆನವೇರಿ ಸಮೀಪದ ಹನವಾಡಿ ಗ್ರಾಮದ ಮಹಾಬಲ (45) ಮೃತಪಟ್ಟ ವ್ಯಕ್ತಿ. ಶಿವಮೊಗ್ಗ ನಗರದ ನಿವಾಸಿ ಸಿದ್ದಪ್ಪ (42) ಎಂಬವವರಿಗೆ ಸಿಡಿಲಿನಿಂದ ತೀವ್ರ ಗಾಯಗಳಾಗಿದ್ದು, ಇವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೂಡಿಗೆರೆ ಪಟ್ಟಣದಲ್ಲಿ ಸಂಜೆವೇಳೆ ಮಳೆಯಾಗುತ್ತಿದ್ದಂತೆ ಪಾದಚಾರಿಗಳು ರಸ್ತೆಯ ಅಕ್ಕಪಕ್ಕದ ಅಂಗಡಿ ಮುಂಗಟ್ಟು
ಗಳೆದುರು ಜಮಾಯಿಸಿದ್ದರು. ರಸ್ತೆಗಳಲ್ಲಿ ಅಲ್ಲೊಬ್ಬ ಇಲ್ಲೊಬ್ಬರಂತೆ ಕೊಡೆ ಹಿಡಿದು ಸಾಗುತ್ತಿದ್ದ ದೃಶ್ಯ ಕಂಡುಬಂತು. ಬೇಲೂರು ರಸ್ತೆ ಯಲ್ಲಿ ಜನಸಂಚಾರವೇ ಇಲ್ಲದೆ ಖಾಲಿಯಾಗಿತ್ತು.







