ಬಿಜೆಪಿ ಬಹಿರಂಗಪಡಿಸಲಿರುವ ಹೊಸ ವಿಷಯಕ್ಕೆ ಸ್ವಾಗತ: ಸೋನಿಯಾ
ಆಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ

ಹೊಸದಿಲ್ಲಿ, ಮೇ 4: ವಿವಿಐಪಿ ಹೆಲಿಕಾಪ್ಟರ್ ಹಗರಣದ ಬಗ್ಗೆ ಬಿಜೆಪಿ ಬಹಿರಂಗಪಡಿಸಲಿರುವ ಹೊಸ ವಿಚಾರಣೆಗಳಿಗೆ ‘ಅತ್ಯಂತ ಸ್ವಾಗತವೆಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ ಹೇಳಿದ್ದಾರೆ.
ರಕ್ಷಣ ಸಚಿವ ಮನೋಹರ ಪಾರಿಕ್ಕರ್ ವಿವಾದಿತ ವ್ಯವಹಾರದ ವಿವರವನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಹಿಂದಿನ ಸರಕಾರವು ಲಂಡನ್ ಮೂಲದ ಆಗಸ್ಟಾ ವೆಸ್ಟ್‌ಲ್ಯಾಂಡ್‌ಗೆ ಲಾಭ ಮಾಡಿಕೊಡಲು ಕೆಲವು ಪ್ರಮುಖ ನಿಯಮಗಳನ್ನು ಹೇಗೆ ಸಡಿಲಗೊಳಿಸಿತ್ತೆಂಬುದನ್ನು ಅವರು ತಿಳಿಸಿದ್ದಾರೆ.
ಭಾರತವು 2010ರ ಫೆಬ್ರವರಿಯಲ್ಲಿ 12 ಎಡಬ್ಲು-101 ಹೆಲಿಕಾಪ್ಟರ್‌ಗಳಿಗಾಗಿ ಆಗಸ್ಟಾ ವೆಸ್ಟ್‌ಲ್ಯಾಂಡ್‌ನೊಂದಿಗೆ ರೂ.3,722 ಕೋಟಿಯ ಗುತ್ತಿಗೆಯೊಂದಕ್ಕೆ ಸಹಿ ಹಾಕಿತ್ತು.ಈ ವ್ಯವಹಾರದ ಕುರಿತು ಬಿಜೆಪಿ ಸೋನಿಯಾ ಗಾಂಧಿ ಸಹಿತ ಕಾಂಗ್ರೆಸ್‌ನ ಉನ್ನತ ನಾಯಕರ ಮೇಲೆ ತೀವ್ರ ದಾಳಿಯನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಪಾರಿಕ್ಕರ್‌ರ ಬಹು ವಿಳಂಬಿಕ ಹೇಳಿಕೆಯು ಹೊರ ಬೀಳಲಿದೆ. ಐಎಎಫ್‌ನ ಮಾಜಿ ದಂಡನಾಯಕ ಏರ್ ಚೀಫ್ ಮಾರ್ಶಲ್ ಎಸ್.ಪಿ.ತ್ಯಾಗಿ ಹಾಗೂ ಅವರ ಸೋದರ ಸಂಬಂಧಿಗಳು ಲಂಚ ಪಡೆದಿರುವ ಆರೋಪಿಗಳಲ್ಲಿ ಸೇರಿದ್ದಾರೆ. ಕಾಂಗ್ರೆಸ್‌ನ ಕೆಲವು ಹಿರಿಯ ನಾಯಕರು ಹಾಗೂ ಅಧಿಕಾರಿಗಳು ಸಹ ಲಂಚ ಪಡೆದಿರುವ ಆರೋಪವಿದ್ದು, ಇದು ತಡೆ ರಹಿತ ರಾಜಕೀಯ ಕೋಲಾಹಲವನ್ನೆಬ್ಬಿಸಿದೆ.
ರಾಜ್ಯಸಭೆಯಲ್ಲಿ ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಕುರಿತು ಚರ್ಚೆಯ ವೇಳೆ ತಮ್ಮ ಕಾರ್ಯತಂತ್ರವನ್ನು ನಿರ್ಧರಿಸಲು ಇಂದು ಮುಂಜಾನೆ ಸೋನಿಯಾ ಪಕ್ಷದ ಸಭೆಯೊಂದನ್ನು ಕರೆದಿದ್ದರು. ರಾಹುಲ್‌ರ ನಿಕಟ ಸಹಾಯಕ ಕನಿಷ್ಕ ಸಿಂಗ್ ಆಗಸ್ಟಾ ವೆಸ್ಟ್‌ಲ್ಯಾಂಡ್ ಸೋಮಯ್ಯ ಆರೋಪಿಸಿದ್ದು, ರಾಜ್ಯಸಭೆಯಲ್ಲಿ ಕಾವೇರಿದ ಚರ್ಚೆ ನಡೆಯುವ ನಿರೀಕ್ಷೆಯಿದೆ.
ಸೋನಿಯಾ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ವಿಪಕ್ಷ ನಾಯಕ ಗುಲಾಂ ನಬಿ ಆಝಾದ್, ಮಾಜಿ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ , ಮೇಲ್ಮನೆಯಲ್ಲಿ ಪಕ್ಷದ ಮಾತನಾಡ ಬೇಕಾದ ವಿಷಯಗಳು ಹಾಗೂ ಬಿಜೆಪಿಯನ್ನು ಎದುರಿಸುವ ಮಾರ್ಗದ ಕುರಿತು ಚರ್ಚಿಸಲಿದ್ದಾರೆ.
ಆಝಾದ್, ಶರ್ಮ ಹಾಗೂ ಕಾಂಗ್ರೆಸ್ ಹಿರಿಯ ಕಾನೂನು ಪರಿಣತ ಅಭಿಷೇಕ್ ಮನು ಸಿಂಘ್ವಿ ಚರ್ಚೆಯಲ್ಲಿ ಭಾಗವಹಿಸಿರುವ ಸಾಧ್ಯತೆಯಿದೆ. ಅದರಲ್ಲಿ ಕಾಂಗ್ರೆಸನ್ನು ಒಂಟಿ ಕಾಲಲ್ಲಿ ನಿಲ್ಲಿಸಲು ಪಾರಿಕ್ಕರ್ ಹಗರಣದ ಕುರಿತಾದ ಹೊಸ ವಿವರವನ್ನು ಮಂಡಿಸುವ ನಿರೀಕ್ಷೆಯಿದೆ.
ಪ್ರಮುಖ ವಿಪಕ್ಷವಾಗಿರುವ ತೃಣಮೂಲ ಕಾಂಗ್ರೆಸ್ ತನ್ನ ಬಂದೂಕನ್ನು ಕಾಂಗ್ರೆಸ್‌ನೆಡೆಗೆ ತಿರುಗಿಸುವ ಸೂಚನೆ ನೀಡಿರುವುದರಿಂದ ಕಾಂಗ್ರೆಸ್ ಏಕಾಂಗಿಯಾಗಿಯೇ ಬಿಜೆಪಿಯನ್ನು ಎದುರಿಸಬೇಕಾಗಿದೆ. ಎಡಿಎಂಕೆ ಹಾಗೂ ಬಿಜೆಡಿಯಂತಹ ಪಕ್ಷಗಳೂ ಕಾಂಗ್ರೆಸ್‌ನ ವಿರುದ್ಧ ದಾಳಿ ನಡೆಸಲು ಈ ಅವಕಾಶವನ್ನು ಉಪಯೋಗಿಸುವ ಸಾಧ್ಯತೆಯಿದೆ.
ಎಲ್ಲರ ಕಣ್ಣು ಈಗ ಎಡ ಪಕ್ಷಗಳತ್ತ ನೆಟ್ಟಿದ್ದು, ರಾಜ್ಯ ಸಭೆಯಲ್ಲಿ ಪ್ರಮುಖ ಶಕ್ತಿಯಾಗಿರುವ ಅವು, ಭ್ರಷ್ಟಾಚಾರ ಹಗರಣವೊಂದರಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವವೇ ಎಂಬುದನ್ನು ಕಾದು ನೋಡಬೇಕಾಗಿದೆ.







