ತೆಕ್ಕಿಲ್ ಶಾಲಾ ದಶಮಾನೋತ್ಸವ ಸಮಾರೋಪ

ಸುಳ್ಯ, ಮೇ 4: ಸಮಾಜ ಶಿಕ್ಷಕರನ್ನು ಗೌರವದಿಂದ ಕಾಣಬೇಕು ಮತ್ತು ಗುರುತಿಸಬೇಕು. ಒಳ್ಳೆಯ ಪೋಷಕ ಮತ್ತು ಶಿಕ್ಷಕರ ವೃಂದ ಸಿಕ್ಕಿದಾಗ ಅದು ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ.ಇದಕ್ಕೆ ತೆಕ್ಕಿಲ್ ಶಿಕ್ಷಣ ಸಂಸ್ಥೆ ಸಾಕ್ಷಿಯಾಗಿದೆ ಎಂದು ಲಯನ್ಸ್ ಮಾಜಿ ರಾಜಪಾಲ ಎಂ.ಬಿ.ಸದಾಶಿವ ಹೇಳಿದರು.
ತೆಕ್ಕಿಲ್ ಶಾಲಾ ದಶಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
ಸಮಾರಂಭವನ್ನು ಸಂಪಾಜೆ ವ್ಯ.ಸೇ.ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಸೋಮ ಶೇಖರ ಕೊಯಿಂಗಾಜೆ ಉದ್ಘಾಟಿಸಿ ದರು. ಅಧ್ಯಕ್ಷತೆಯನ್ನು ಸಂಸ್ಥೆಯ ಸ್ಥಾಪಕ ಟಿ.ಎಂ.ಶಹೀದ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಪಂ ಸದಸ್ಯೆ ಪುಷ್ಪಾಮೇದಪ್ಪ, ಸಂಪಾಜೆ ಗ್ರಾಪಂ ಉಪಾಧ್ಯಕ್ಷೆ ಆಶಾ ವಿನಯ ಕುಮಾರ್ ಭಾಗವಹಿಸಿದ್ದರು.
ವೇದಿಕೆಯಲ್ಲಿ ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಯು.ಕೆ. ತೀರ್ಥ ರಾಮ, ಶಾಲೆಯ ಮುಖ್ಯ ಶಿಕ್ಷಕ ದಾಮೋದರ್ ಮಾಸ್ತರ್, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಹರಿಣಾಕ್ಷಿ, ಪ್ರತಿಷ್ಠಾನ ಕಾರ್ಯದರ್ಶಿ ಅಶ್ರಫ್ ಗುಂಡಿ, ಮಂಗಳೂರು ಒಕ್ಕಲಿಗರ ಸಂಘದ ಅಧ್ಯಕ್ಷ ಲೋಕಯ್ಯ ಗೌಡ, ದಿನಕರ, ಮುಹಮ್ಮದ್ ಕುಂಞಿ ಕೊಯಿನಾಡು, ರಾಮಕೃಷ್ಣ ಸಂಪಾಜೆ, ಸುಕುಮಾರ ಉಳುವಾರು, ತಾರಾ ಕುಕ್ಕುಂಬಳ, ಬಿಂದು ಸುರೇಶ್, ಕಾಂತಿ ಮೋಹನ್, ಶಾಲಾ ನಾಯಕ ಆಶಿಕ್ ಉಪಸ್ಥಿತರಿದ್ದರು.
ಭಾರ್ಗವಿ ನೃತ್ಯ ತಂಡ ಉಡುಪಿ ಇವರಿಂದ ಭಾವ-ಯೋಗ-ಗಾನ ನೃತ್ಯ ಕಾರ್ಯಕ್ರಮ ನಡೆಯಿತು. ಶಿಕ್ಷಕ ಅಶ್ವಿನಿ ಸ್ವಾಗತಿಸಿದರು. ಜಯಾನಂದ ಕಾರ್ಯಕ್ರಮ ನಿರೂಪಿಸಿದರು.





