ದೇರಳಕಟ್ಟೆ ಆಸ್ಪತ್ರೆಗೆ ಕೆಎಸ್ಸಾರ್ಟಿಸಿ ಸೇವೆ ಆರಂಭ

ಉಳ್ಳಾಲ, ಮೇ 4: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಶಿರಸಿ ಮಾರ್ಗವಾಗಿ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಆರಂಭಿಸಲಾದ ಕೆಎಸ್ಸಾರ್ಟಿಸಿ ಸೇವೆಗೆ ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಎಸ್. ರಮಾನಂದ ಶೆಟ್ಟಿ ಹಾಗೂ ಕೆಎಸ್ಸಾರ್ಟಿಸಿ ಅಧಿಕಾರಿ ಭಾಸ್ಕರ್ ತೊಕ್ಕೊಟ್ಟು ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಾಲನೆ ನೀಡಿದರು. ಈ ಸಂದರ್ಭ ಕ್ಷೇಮ ಡೀನ್ ಡಾ. ಸತೀಶ್ ಕುಮಾರ್ ಭಂಡಾರಿ, ಕ್ಷೇಮ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಮಂತ್ ಶೆಟ್ಟಿ, ನೆರಳು ಚಾರಿಟೇಬಲ್ ಟ್ರಸ್ಟಿನ ಗೋಪಾಲ್ ಶೆಟ್ಟಿ ಶಿರಸಿ ಮೊದಲಾದವರು ಉಪಸ್ಥಿತರಿದ್ದರು.
Next Story





