ನೀರುಳ್ಳಿ ಬಳಸಿ ಬಿಸಿಲ ಬೇಗೆಯಿಂದ ಪಾರಾಗುವುದು ಹೇಗೆ?
ನೀರುಳ್ಳಿಯ ಬಗ್ಗೆ ಕೆಲ ವಿವರಗಳು ಇಲ್ಲಿವೆ. ನೀರುಳ್ಳಿಗೆ ಸಾಕಷ್ಟು ಪದರಗಳಿವೆ. ಅದರ ಆರೋಗ್ಯ ಲಾಭವು ಕ್ಯಾನ್ಸರ್ ರಕ್ಷಣೆಯಿಂದ ಅಸ್ಥಿರಂಧ್ರತೆಯವರೆಗೆ ಎಲ್ಲ ಸಮಸ್ಯೆಗಳಿಗೂ ಉತ್ತರವಾಗಲಿದೆ. ಫ್ರಂಟಿಯರ್ ಲೈಫ್ಲೈನ್ ಆಸ್ಪತ್ರೆಯ ಪೌಷ್ಠಿಕತಜ್ಞೆ ಡಾ ಶೀಲಾ ಸ್ವರ್ಣಕುಮಾರಿ ಪ್ರಕಾರ, ನೀರುಳ್ಳಿಯು ಬೇಸಗೆಯ ಧಗೆಯನ್ನು ಎದುರಿಸಲು ನೆರವಾಗುತ್ತದೆ ಎನ್ನುವುದಕ್ಕೆ ಸ್ಪಷ್ಟ ವೈಜ್ಞಾನಿಕ ಆಧಾರವಿಲ್ಲ. ಸಾಮಾನ್ಯವಾಗಿ ಸೌತೆಕಾಯಿ ಅಥವಾ ಕಲ್ಲಂಗಡಿ ಹಣ್ಣುಗಳು ಅತ್ಯಧಿಕ ನೀರಿನಂಶ ಹೊಂದಿರುವ ಕಾರಣ ಬೇಸಗೆಯಲ್ಲಿ ಉತ್ತಮ ಎನ್ನಲಾಗುತ್ತದೆ. ಅದು ದಿನವಿಡೀ ನಿಮ್ಮ ದೇಹದಲ್ಲಿ ನೀರಿನಂಶವನ್ನು ಉಳಿಸುತ್ತದೆ. ಉಳಿದ ತಜ್ಞರು ಸಹ ನೀರುಳ್ಳಿ ಬೇಸಗೆಯಲ್ಲಿ ಸೇವನೆಗೆ ಉತ್ತಮ ಎನ್ನುವ ಸುದ್ದಿಯನ್ನು ಮೌಢ್ಯ ಎಂದೇ ಅಭಿಪ್ರಾಯಪಟ್ಟಿದ್ದಾರೆ.
ಆದರೆ ನಮ್ಮ ಅಜ್ಜಿಯ ಮಾತುಗಳು ಈಗಲೂ ನಮ್ಮ ಕಿವಿಯಲ್ಲಿ ಮೊರೆಯಿಡುತ್ತಿರುತ್ತದೆ. ಚೆನ್ನೈ ಅಡ್ಯಾರ್ ಪಾರ್ಕ್ನ ಕ್ರೌನ್ ಪ್ಲಾಜಾದ ಕಾರ್ಯಕಾರಿ ಅಡುಗೆಯಾತ ಪ್ರವೀಣ್ ಆನಂದ್ 30 ವರ್ಷಗಳಿಂದ ಹಸಿ ನೀರುಳ್ಳಿಯನ್ನು ಸೇವಿಸುವ ಉತ್ತಮ ಅಂಶಗಳ ಬಗ್ಗೆ ಹೇಳುತ್ತಾರೆ. ನಾನು ಆಂಧ್ರಪ್ರದೇಶದಲ್ಲಿ ಸುಡುಬಿಸಿಲಿನ ನಡುವೆ ಬೆಳೆದವನು. ಹೀಗಾಗಿ ನಾವು ಮೊಸರನ್ನವನ್ನು ಹಸಿ ನೀರುಳ್ಳಿ ತುಂಡುಗಳ ಜೊತೆಗೆ ಸೇವಿಸಿ ತಂಪು ಮಾಡಿಕೊಳ್ಳುತ್ತಿದ್ದೆವು. ಹಸಿ ನೀರುಳ್ಳಿ ತುಂಡುಗಳು ರುಚಿಕರವಾಗಿಯೂ ಇರುತ್ತವೆ. ದಾಲ್ ತಡ್ಕದಿಂದ ಚಿಕನ್ 65ವರೆಗೆ ಎಲ್ಲಕ್ಕೂ ಹೊಂದಿಕೊಳ್ಳುತ್ತದೆ ಎನ್ನುತ್ತಾರೆ ಪ್ರವೀಣ್. ಈರುಳ್ಳಿ ಕೊಬ್ಬು ಕರಗಿಸಲೂ ನೆರವಾಗುತ್ತದೆ ಎಂದು ಹೇಳಲು ಅವರು ಮರೆತರು. ಹಾಗಿದ್ದರೂ ಸ್ಪಷ್ಟವಾದ ಉತ್ತರ ಸಿಗಲಿಲ್ಲ ಎಂದರೆ ಪರ್ಯಾಯ ಔಷಧಿ ಕೊಡುವ ವಿಶೇಷಜ್ಞರನ್ನು ಕೇಳಬಹುದು. ನುಂಗಬಾಕಂನಲ್ಲಿ ನೇಚರ್ ಕ್ಲಿನಿಕ್ ನಡೆಸುವ ಡಾ ಜಯೇಶ್ ಸಾಂಘ್ವಿ ಹೇಳುವ ಪ್ರಕಾರ ನೀರುಳ್ಳಿಗಳನ್ನು ಹೋಮಿಯೋಪತಿಯಲ್ಲಿ ದೇಹದ ಶಾಖವನ್ನು ಇಳಿಸಲು ಬಳಸಲಾಗುತ್ತದೆ. ಪೊಟೆನ್ಟಿಸೇಶನ್ ಎನ್ನುವ ಪ್ರಕ್ರಿಯೆ ಮೂಲಕ ಈರುಳ್ಳಿ ರಸವನ್ನು ಹೊರತೆಗೆಯಲಾಗುತ್ತದೆ. ಅದು ಶಕ್ತಿಯುತ ಹೀಲಿಂಗ್ ಪರಿಣಾಮ ನೀಡುತ್ತದೆ. ಈರುಳ್ಳಿ ರಸದ ಪ್ರಮಾಣ ಎಷ್ಟು ಅಧಿಕವಾಗಿರುತ್ತದೆ ಎಂದರೆ ರೋಗಿಗಳಿಗೆ ಅದನ್ನು ಔಷಧಿ ರೂಪದಲ್ಲಿ ನೀಡುವಾಗ ಅದರ ಪ್ರಭಾವವನ್ನು ಕಡಿಮೆಗೊಳಿಸಲು ಇತರ ವಸ್ತುಗಳ ಜತೆಗೆ ಬೆರೆಸಲಾಗುತ್ತದೆ.
ಇಲ್ಲಿ ಮೂರು ನೀರುಳ್ಳಿ ಅಭಿಪ್ರಾಯಗಳಿವೆ. ಅಜ್ಜಿಯಂದಿರು ಸಾಮಾನ್ಯವಾಗಿ ಧಗೆಯನ್ನು ಕಡಿಮೆ ಮಾಡಲು ನೀರುಳ್ಳಿ ಕಂಕುಳಲ್ಲಿ ಇಟ್ಟುಕೊಂಡು ಹೋಗಿ ಎನ್ನುತ್ತಾರೆ. ನಾವು ನೀರುಳ್ಳಿಯನ್ನು ರಾತ್ರಿಯಿಡೀ ಫ್ರಿಜ್ಜಲ್ಲಿಟ್ಟು ಮರುದಿನ ಪಾಕೆಟಲ್ಲಿ ಇಟ್ಟುಕೊಳ್ಳಿ ಎನ್ನುತ್ತೇವೆ. ಹಾಗಿದ್ದರೆ ತಕ್ಷಣವೇ ತಂಪಾದ ಅನುಭವವಾಗುತ್ತದೆ. ತುಂಡರಿಸಿದ ನೀರುಳ್ಳಿ ಇಟ್ಟರೂ ನಿಮಗೆ ಅಳು ಬರದು.
ನೀರುಳ್ಳಿ ತಂಪಾಗಿರಲು ಕಾರಣವೇನು?
ನೀರುಳ್ಳಿ ಮುಖ್ಯವಾಗಿ ಕೆಂಪು ಈರುಳ್ಳಿ ಕ್ವರ್ಸಿಟಿನ್ ಎನ್ನುವ ರಾಸಾಯನಿಕ ಹೊಂದಿರುತ್ತದೆ. ಅದು ಹಿಸ್ಟಮಿನ್ ವಿರೋಧಿಪರಿಣಾಮ ಹೊಂದಿರುತ್ತದೆ. ಹಿಸ್ಟಮಿನ್ ದೇಹದಲ್ಲಿ ಹೀಟ್ ರಾಷಸ್ (ಶಾಖದಿಂದಾಗುವ ಗೀರುಗಳು) ತರುತ್ತದೆ ಮತ್ತು ಸೊಳ್ಳೆ ಕಚ್ಚಿದಾಗ ಅಥವಾ ಇನ್ನೇನಾದರೂ ಕಚ್ಚಿದರೆ ತಕ್ಷಣ ಪರಿಣಾಮ ತೋರಿಸುತ್ತದೆ. ಹೀಗಾಗಿ ನಿತ್ಯವೂ ನೀರುಳ್ಳಿ ತಿನ್ನುವುದು ಬೇಸಗೆಯ ಸಮಸ್ಯೆಗಳಿಗೆ ಉತ್ತರ.
ನೀರುಳ್ಳಿ ಸೇವನೆಯಿಂದ ಸಿಗುವ ಐದು ಅದ್ಭುತ ಲಾಭಗಳು:
►ನೀರುಳ್ಳಿಯಲ್ಲಿರುವ ಆಂಟಿ ಆಕ್ಸಿಡಂಟುಗಳು ವೀರ್ಯದ ಆರೋಗ್ಯ ಹೆಚ್ಚಿಸಲು ಉತಮ. ಖಾಕಿ ಎ ಮತ್ತು ಸಹೋದ್ಯೋಗಿಗಳು ಮಾಡಿದ ಅಧ್ಯಯನವು ನೀರುಳ್ಳಿ ರಸವು ವೀರ್ಯದ ಪ್ರಮಾಣವನ್ನು ಅತಿಯಾಗಿ ಹೆಚ್ಚಿಸಿರುವುದನ್ನು ತೋರಿಸಿದೆ. ವೀರ್ಯ ಕೌಂಟ್ ಜಾಸ್ತಿಯಾಗುವ ಜೊತೆಗೆ ವೀರ್ಯಗಳ ಗುಣಮಟ್ಟವೂ ಉತ್ತಮವಾಗಿವೆ.
►ಸುಟ್ಟಗಾಯಕ್ಕೂ ನೀರುಳ್ಳಿ ರಸ ಪರಿಹಾರ
►ನೀರುಳ್ಳಿಯಲ್ಲಿರುವ ಕ್ವರ್ಸಿಟಿನ್ ಎನ್ನುವ ಸಂಯುಕ್ತವು ಸೆಡೆಟಿವ್ ಹಾಗೆ ಕೆಲಸ ಮಾಡು ನೋವು, ಖಿನ್ನತೆ ಮತ್ತು ಆತಂಕ ನಿವಾರಿಸುತ್ತದೆ.
►ನೀರುಳ್ಳಿಯ ಆಂಟಿ ಆಕ್ಸಿಡಂಟ್ ಗಳು ಮತ್ತು ಅಧಿಕ ಆರ್ಗನೋಸಲ್ಫರ್ ಪ್ರಾಸ್ಟೇಟ್, ಕಿಡ್ನಿ, ಓರಲ್ ಮತ್ತು ಸ್ತನ ಕ್ಯಾನ್ಸರಿನ ಅಪಾಯ ಕಡಿಮೆ ಮಾಡುತ್ತದೆ ಎನ್ನಲಾಗಿದೆ.
►ನೀರುಳ್ಳಿಗಳ ಮೈಕ್ರೋಬಯಾಲ್ ವಿರೋಧಿ, ಬ್ಯಾಕ್ಟೀರಿಯಲ್ ವಿರೋಧಿ ಮತ್ತು ಉರಿಯೂತ ವಿರೋಧಿ ಗುಣಗಳು ಮೊಡವೆ ವಿರುದ್ಧ ಚಿಕಿತ್ಸೆಗೆ ನೆರವಾಗುತ್ತದೆ.
ಕೃಪೆ: www.newindianexpress.com