ಕೋಡಿ: ಮುಹಿಯುದ್ದೀನ್ ಜುಮಾ ಮಸೀದಿಯ ವಾರ್ಷಿಕ ಮಹಾ ಸಭೆ, ಕಮಿಟಿ ರಚನೆ
ಕುಂದಾಪುರ, ಮೇ 5: ಕುಂದಾಪುರ ಕೋಡಿಯ ಮುಹಿಯುದ್ದೀನ್ ಜುಮಾ ಮಸೀದಿಯ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ನಡೆಯಿತು.
ಮುಖ್ಯ ಖತೀಬ್ ಯೂಸೂಫ್ ಸಖಾಫಿ ದುಆ ಕಾರ್ಯಕ್ರಮ ನಡೆಸಿದ ಬಳಿಕ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಅವರು ವಾರ್ಷಿಕ ವರದಿ ಮಂಡಿಸಿದರು. ನಂತರ ಜಮಾಅತಿನ ಸದಸ್ಯರೆಲ್ಲರ ಒಪ್ಪಿಗೆಯಂತೆ ಹಾಲಿ ಅಧ್ಯಕ್ಷ ಬಿ.ಎಂ. ಹಂಝಾ ಹಾಜಿ (ಅಲ್ ಆರೀಫ್) ನೇತೃತ್ವದಲ್ಲಿ ಆಡಳಿತ ಕಮಿಟಿಯನ್ನು ಮುಂದಿನ ಸಾಲಿಗೆ ಆಯ್ಕೆ ಮಾಡಲಾಯಿತು.
ಕಮಿಟಿಯ ಅಧ್ಯಕ್ಷರಾಗಿ ಬಿ.ಎಮ್. ಹಂಝಾ ಹಾಜಿ ( ಅಲ್ ಆರೀಫ್), ಉಪಾಧ್ಯಕ್ಷರಾಗಿ ಮೂಪರ್ ಹಾಜಿ ಸಾಹೇಬ್, ಗೌರವಾಧ್ಯಕ್ಷರಾಗಿ ಕೆ. ಹುಸೈನ್ ಸಾಹೇಬ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್, ಕೋಶಾಧಿಕಾರಿಯಾಗಿ ಕೆ.ಎಂ, ಅಬೂಬಕರ್ ಆಯ್ಕೆಯಾದರು ಎಂದು ಕೆ.ಎಂ. ಹುಸೈನಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story