ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ
ಉಪ್ಪಿನಂಗಡಿ, ಮೇ 5: ಅಕ್ರಮ ಮದ್ಯ ಮಾರಾಟ ನಡೆಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಉಪ್ಪಿನಂಗಡಿ ಪೊಲೀಸರು ಇಬ್ಬರನ್ನು ಬಂಧಿಸಿ 2,000 ರೂ. ವೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಪದ್ಮುಂಜ ಗ್ರಾಮದ ನೇರೋಲ್ಪಲ್ಕೆ ಎಂಬಲ್ಲಿ ಕೋಳಿ ಮಾಂಸದಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ಪಡೆದ ಉಪ್ಪಿನಂಗಡಿ ಠಾಣೆಯ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಲಕ್ಷ್ಮಣ್ ನಿಂಬರಗಿ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ವಸಂತ ಮತ್ತು ಉದಯ ನಾಯ್ಕ ಎಂಬಿಬ್ಬರನ್ನು ಬಂಧಿಸಿ, ಮಾರಾಟ ಮಾಡುತ್ತಿದ್ದ 180 ಮಿ.ಲೀ. ಪ್ರಮಾಣದ 25 ಬಾಟ್ಲಿಗಳನ್ನು ಮತ್ತು 375 ಮಿ.ಲೀ. ಪ್ರಮಾಣದ ಒಂದು ಬಾಟ್ಲಿ ಮದ್ಯವನ್ನು ಹಾಗೂ ವಸಂತನ ಬೈಕನ್ನು ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story