ತೊಕ್ಕೊಟ್ಟು: ಟೈರ್ ರಿಸೋಲ್ವ್ ಶಾಪ್ನಲ್ಲಿ ಬೆಂಕಿ
ಉಳ್ಳಾಲ, ಮೇ 5: ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟುವಿನ ಕಾಂಪ್ಲೆಕ್ಸ್ವೊಂದರ ಬಳಿ ಟಯರ್ ರಿಸೋಲ್ ಅಂಗಡಿಗೆ ಬೆಂಕಿ ಬಿದ್ದ ಪರಿಣಾಮ ಅಂಗಡಿಯಲ್ಲಿದ್ದ ರಿಸೋಲ್ ಮೆಷಿನ್ ಸೇರಿದಂತೆ ಟಯರ್ಗಳು ಸುಟ್ಟು ಭಸ್ಮವಾದ ಘಟನೆ ಗುರುವಾರ ಸಂಜೆ ನಡೆದಿದೆ.
ಅಬ್ದುಲ್ಲಾ ಎಂಬವರಿಗೆ ಸೇರಿದ ರಿಸೋಲ್ ಶಾಪ್ ಇದಾಗಿದ್ದು ಗುರುವಾರ ಸಂಜೆ ಅಂಗಡಿಗೆ ಬೆಂಕಿ ಬಿದ್ದು ಹೊತ್ತಿ ಉರಿಯಲಾರಂಬಿಸಿತು. ಸ್ಥಳಕ್ಕೆ ಅಗ್ನಿಶಾಮಕದಳದವರು ದೌಡಾಯಿಸಿ ಬೆಂಕಿ ನಂದಿಸಿದ್ದು ಅವರೊಂದಿಗೆ ಉಳ್ಳಾಲ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಶಿವಪ್ರಕಾಶ್ ಹಾಗೂ ತಂಡ ಕೂಡಾ ಬೆಂಕಿ ನಂದಿಸಲು ಸಹಕರಿಸಿದರು.
ಘಟನೆಯಿಂದ ಆರ್ಇಬಿ ವಾಣಿಜ್ಯ ಕಟ್ಟಡದ ಆವರಣದಲ್ಲಿರುವ 2 ಬೃಹತ್ ಜನರೇಟರ್ ಮೆಷಿನ್ಗಳಿಗೆ ಹಾನಿಯುಂಟಾಗುವ ಸಾಧ್ಯತೆಗಳಿತ್ತಾದರೂ ಅಗ್ನಿಶಾಮಕ ದಳದ ಸಮಯಪ್ರಜ್ಞೆಯಿಂದ ಸಂಭವನೀಯ ದೊಡ್ಡ ನಷ್ಟ ತಪ್ಪಿದಂತಾಗಿದೆ.
ಟಯರ್ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆಯೇ ಅಥವಾ ಕಿಡಿಕೇಡಿಗಳ ಕೃತ್ಯವೇ ಎಂಬುದರ ಬಗ್ಗೆ ಪೊಲೀಸರ ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.