ಬೊಜ್ಜು ಕಳೆದುಕೊಳ್ಳಲು ಹೀಗೆ ಮಾಡಲೇಬೇಡಿ!
ನಿರ್ಣಯಗಳನ್ನು ಮಾಡುವ ಬದಲಾಗಿ ನಾವು ಅದನ್ನು ಕೈಗೂಡಿಸುವತ್ತ ಗಮನಹರಿಸಿದಲ್ಲಿ ಹೆಚ್ಚು ಆರೋಗ್ಯಕರ ಮತ್ತು ಕೊಬ್ಬಿಲ್ಲದ ದೇಹವನ್ನು ಪಡೆದುಕೊಳ್ಳಬಹುದು.
1. ಕೊಬ್ಬು ಇಳಿಸುವ ಡಯಟ್: ಇದು ಬಹಳ ಅನಾರೋಗ್ಯಕರ ಮತ್ತು ಮಾರುಕಟ್ಟೆಯ ಗಿಮಿಕ್ ಗಳಿಗೆ ಮಾರುಹೋಗಬೇಡಿ. ತಾರೆಯರು ಡಯಟ್ ಆಹಾರವನ್ನು ಪ್ರಾಯೋಜಿಸುತ್ತಾರೆ ಎಂದ ಮಾತ್ರಕ್ಕೆ ಅದು ಆರೋಗ್ಯಕರವಲ್ಲ ಎನ್ನುತ್ತಾರೆ ತಜ್ಞರು. ಈ ಆಹಾರಗಳ ಬಗ್ಗೆ ಇರುವ ದೊಡ್ಡ ಪ್ರಚಾರ ಸುಳ್ಳು, ಬದಲಾಗಿ ಸೂಕ್ತ ಆಹಾರ ನಿಯಮಗಳನ್ನು ಹಾಕಿಕೊಳ್ಳುವುದು ನೆರವಾಗಲಿದೆ.
ಬದಲಾಗಿ ನೀವು ಮಾಡಿದ ಕೊಬ್ಬು ಇಳಿಸುವ ಕ್ರಮಗಳ ಬಗ್ಗೆ ಸ್ವಲ್ಪ ಲೆಕ್ಕ ಹಾಕಿ ನಿಮಗೆ ಲಾಭ ಯಾವುದರಿಂದ ಆಗಿದೆ ಎನ್ನುವುದನ್ನು ಕಂಡುಕೊಳ್ಳಿ. ಯಾವ ಆಹಾರದಿಂದ ನಿಮ್ಮ ದೇಹದಲ್ಲಿ ಕೊಬ್ಬು ಸೇರುತ್ತದೆ ಎಂದು ಗಮನಿಸಿ.
2. ದೊಡ್ಡ ಬದಲಾವಣೆ ಬೇಡ: ನಿಮ್ಮ ಆಹಾರದಿಂದ ಜಂಕ್ ಫುಡ್ ನಿವಾರಿಸಿಕೊಳ್ಳುವುದು ಉತ್ತಮ ಯೋಜನೆ. ಆದರೆ ಅದನ್ನು ಒಂದು ರಾತ್ರಿಯಲ್ಲಿ ನಿರ್ಧರಿಸಿ ಕಠಿಣವಾಗಿ ಅಳವಡಿಸುವುದು ಸರಿಯಲ್ಲ. ಒಂದೇ ದಿನದಲ್ಲಿ ಎಲ್ಲಾ ವ್ಯಾಯಾಮ ಮಾಡಿ ದೇಹಕ್ಕೆ ಸುಸ್ತು ಕೊಡುವುದೂ ಸರಿಯಲ್ಲ. ಇಂತಹ ಬದಲಾವಣೆಯಿಂದ ಸಮಸ್ಯೆಯೇ ಹೆಚ್ಚು.
ಬದಲಾಗಿ ನಿಮ್ಮ ಆಹಾರ ಮತ್ತು ಜೀವನಶೈಲಿಗೆ ಸಣ್ಣಪುಟ್ಟ ಬದಲಾವಣೆ ತನ್ನಿ. ಅದು ನಿಧಾನವಾಗಿ ನಿಮ್ಮಲ್ಲಿ ಬದಲಾವಣೆ ತರಲಿ. ಊಟದ ಸಮಯದಲ್ಲಿ 30 ನಿಮಿಷ ನಡಿಗೆ ಮೊದಲಾದ ಬದಲಾವಣೆ ತರಬಹುದು.
3. ಏನನ್ನೂ ಬಿಡಬೇಡಿ: ಕ್ಯಾರೆಟ್ ಹಲ್ವಾ ಕೂಡ ತಿನ್ನುವುದು ಬಿಡಬೇಡಿ. ನೀವು ತಿನ್ನುವುದನ್ನು ಬಿಡುವ ಮಟ್ಟಕ್ಕೆ ಏಕೆ ತೆಗೆದುಕೊಂಡು ಹೋಗಬೇಕು. ಮಧ್ಯಮ ಹಾದಿ ಹುಡುಕಿ. ಆಹಾರ ಬಿಡುವುದು ಹಿತಕರವಲ್ಲ. ಕಷ್ಟದ ಅಭ್ಯಾಸ.
ಬದಲಾಗಿ ಸಮತೋಲನ ಕಲಿಯಿರಿ ಮತ್ತು ಸರಳ ನಿಯಮ ಪಾಲಿಸಿ. ತಪ್ಪು ಆಹಾರವನ್ನು ಸ್ವಲ್ಪ ಮತ್ತು ಸರಿಯಾದ ಆಹಾರವನ್ನು ಹೆಚ್ಚು ತಿನ್ನಿ. ಹಾಗೆಂದು ತಪ್ಪು ಮತ್ತು ಸರಿ ಆಹಾರ ಎಂದೇನಿಲ್ಲ. ಸ್ವಲ್ಪ ಭಾಗ ಮಾತ್ರ ತಪ್ಪು. ಹೀಗಾಗಿ ಸಣ್ಣ ಬರ್ಗರ್ ತಿನ್ನಿ, ಜಂಬೋ ಬರ್ಗರ್ ಬೇಡ. ಸಣ್ಣ ಬೌಲಲ್ಲಿ ಕೀರು ಸೇವಿಸಿ. ಏಕೆಂದರೆ ಅದು ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಕೊಡುತ್ತದೆ.
4. ಕ್ಯಾಲರಿಗಳನ್ನು ಲೆಕ್ಕ ಹಾಕುವುದು ಬಿಡಿ: ನೀವು ಕ್ಯಾಲಿಕ್ಯುಲೇಟರ್ ಅಲ್ಲ. ಕ್ಯಾಲರಿ ಲೆಕ್ಕ ಹಾಕುವುದರಿಂದ ನೀವು ಭವಿಷ್ಯದಲ್ಲಿ ಸಣ್ಣಗಾಗುವುದಿಲ್ಲ.
ಬದಲಾಗಿ ನಿಮ್ಮ ಆಹಾರದಲ್ಲಿ ಪೌಷ್ಠಿಕಾಂಶಗಳನ್ನು ಹೆಚ್ಚು ಮಾಡಿ. ಪೌಷ್ಠಿಕಾಂಶ ಅಧಿಕವಿರುವ ಆಹಾರ ಆರಿಸಿ ಮತ್ತು ಕ್ಯಾಲರಿಗಳು ಕಡಿಮೆ ಇರುವ ಆಹಾರ ಬಿಡಿ. ಈ ಅಭ್ಯಾಸವಿದ್ದರೆ ಕ್ಯಾಲರಿ ತನ್ನಿಂತಾನಾಗೇ ಸರಿಯಾಗುತ್ತದೆ. ಉದಾಹರಣೆಗೆ ಗುಲಾಬ್ ಜಾಮೂನು ಮತ್ತು ಕ್ಯಾರೆಟ್ ಹಲ್ವಾ ನಡುವೆ ಆರಿಸಿಕೊಳ್ಳುವಾಗ ಹಲ್ವಾ ಹೆಚ್ಚು ಫೈಬರ್ ಮತ್ತು ಪೌಷ್ಠಿಕಾಂಶ ಕೊಡುತ್ತದೆ ಎನ್ನುವುದನ್ನು ತಿಳಿದುಕೊಂಡರೆ ಸರಿ. ಗುಲಾಬ್ ಜಾಮೂನು ಕೇವಲ ಸಕ್ಕರೆ ತುಂಬಿದ ಆಹಾರ. ಹೀಗೆ ನೀವು ಆರೋಗ್ಯಕರ ಜೀವನ ನಡೆಸಬಹುದು.
5. ದುಬಾರಿ ಜಿಮ್ ಗಳಿಗೆ ಸೇರಬೇಡಿ: ಹಾಗೆ ಜಿಮ್ ಸೇರಿ ಸುಸ್ತಾಗುವಷ್ಟು ತರಬೇತಿ ಮತ್ತು ವ್ಯಾಯಾಮಕ್ಕೆ ಹೋಗಬೇಡಿ. ಹಾಗೆಯೇ ಹೊಸ ವ್ಯಾಯಾಮ ಆಪ್ ಡೌನ್ಲೋಡ್ ಮಾಡುವುದೂ ಬಿಡಿ.
ಬದಲಾಗಿ ಪ್ರಾಯೋಗಿಕ ಆಯ್ಕೆ ಮಾಡಿ. ನಿಮ್ಮ ನೆರೆಯ ಪರಿಸರದಲ್ಲಿಯೇ ವ್ಯಾಯಾಮ ಚಟುವಟಿಕೆ ಹೆಚ್ಚಿಸಿಕೊಳ್ಳುವುದು ಉತ್ತಮ. ನೃತ್ಯ, ನಡಿಗೆ ಇತ್ಯಾದಿ ಮನೆಯಲ್ಲಿಯೇ ಮಾಡಬಹುದು.
ಕೃಪೆ: www.healthdigezt.com