ಗಾಝಾ: ಹಮಾಸ್ ಮೇಲೆ ಮತ್ತೆ ಇಸ್ರೇಲ್ ದಾಳಿ

ಜೆರುಸಲೇಂ, ಮೇ 6: ದಕ್ಷಿಣ ಗಾಝಾ ಪಟ್ಟಿಯಲ್ಲಿರುವ ಹಮಾಸ್‌ನ ನೆಲೆಯೊಂದರ ಮೇಲೆ ಇಸ್ರೇಲ್‌ನ ಯುದ್ಧ ವಿಮಾನವೊಂದು ಶುಕ್ರವಾರ ಬೆಳಗ್ಗೆ ದಾಳಿ ನಡೆಸಿದೆ ಎಂದು ಇಸ್ರೇಲ್‌ನ ಸೇನೆ ತಿಳಿಸಿದೆ. ಫೆಲೆಸ್ತೀನ್‌ನಿಂದ ಇಸ್ರೇಲ್‌ನತ್ತ ತೂರಿ ಬಂದ ಮೋರ್ಟರ್ ದಾಳಿಗೆ ಪ್ರತಿಯಾಗಿ ಈ ದಾಳಿ ನಡೆಸಲಾಗಿದೆ ಎಂದು ಅದು ಹೇಳಿದೆ.
‘‘ಇಸ್ರೇಲ್ ಪಡೆಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳಿಗೆ ಪ್ರತಿಯಾಗಿ ಇಸ್ರೇಲ್ ವಾಯು ಪಡೆ ಹಮಾಸ್‌ನ ಭಯೋತ್ಪಾದನಾ ನೆಲೆಯೊಂದರ ಮೇಲೆ ದಾಳಿ ನಡೆಸಲಾಯಿತು’’ ಎಂದು ಸೇನಾ ಹೇಳಿಕೆ ತಿಳಿಸಿದೆ.
2014ರ ಬಳಿಕ ಮೊದಲ ಬಾರಿಗೆ ಹಮಾಸ್ ಮತ್ತು ಇಸ್ರೇಲ್ ಪಡೆಗಳ ನಡುವೆ ನೇರ ಸಂಘರ್ಷ ಬುಧವಾರ ಆರಂಭಗೊಂಡಂದಿನಿಂದ ಗಾಝಾದ ಮೇಲೆ ನಡೆಯುತ್ತಿರುವ ನಾಲ್ಕನೆ ವಾಯು ದಾಳಿ ಇದಾಗಿದೆ.
Next Story





