ಕೇಂದ್ರ ಹಾಗೂ ರಾಜ್ಯ ಸರಕಾರ ಜನತೆಗೆ ಕಂಟಕ: ಶ್ರೀರಾಮ್ ರೆಡ್ಡಿ

ಮಂಜೇಶ್ವರ, ಮೇ 6: ಕೇಂದ್ರದ ಬಿಜೆಪಿ ಸರಕಾರದ ಜನ ವಿರೋಧಿ ಧೋರಣೆ ಹಾಗೂ ರಾಜ್ಯದ ಭ್ರಷ್ಟಾಚಾರ ತುಂಬಿದ ಸರಕಾರಗಳು ಜನರಿಗೆ ಕಂಟಕಪ್ರಾಯವಾಗಿದ್ದು, ಇದರಿಂದ ಮುಕ್ತವಾಗಲು ಈ ಸಲ ಎಡರಂಗಕ್ಕೆ ಎಲ್ಲರ ಬೆಂಬಲ ಅಗತ್ಯವಿದೆಯೆಂದು ಕರ್ನಾಟಕ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಶ್ರೀ ರಾಮ್ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಲ್‌ಡಿಎಫ್ ಮಂಜೇಶ್ವರ ಪಂಚಾಯತ್ ವಲಯದ ಚುನಾವಣಾ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಎಸ್.ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಿಪಿಐ(ಎಂ) ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಜಿಪಂ ಸದಸ್ಯ ಡಾ.ವಿ.ಪಿ.ಪಿ.ಮುಸ್ತಫಾ, ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಬಿ.ವಿ.ರಾಜನ್, ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯ ಕೆ.ಆರ್.ಜಯಾನಂದ, ಎನ್‌ಸಿಪಿ ಮಹಾರಾಷ್ಟ್ರ ನೇತಾರ ಪಿ.ಬಿ.ಬಶೀರ್,ಡಿವೈಎಫ್‌ಐ ರಾಜ್ಯ ಸದಸ್ಯ ಸಬೀಸ್ ಉಪಸ್ಥಿತರಿದ್ದರು.
ಲೋಕಲ್ ಸಮಿತಿ ಸದಸ್ಯ ಕೆ.ಕಮಲಾಕ್ಷ ಸ್ವಾಗತಿಸಿ, ಶ್ರೀಧರ ಕುಂಜತ್ತೂರು ವಂದಿಸಿದರು.
Next Story





