ಅಡಿಕೆ ಕಳ್ಳತನ ಪ್ರಕರಣದ ಆರೋಪಿಗೆ ಜಾಮೀನು
ಪುತ್ತೂರು, ಮೇ 6: ವರ್ಷದ ಹಿಂದೆ ಉಪ್ಪಿನಂಗಡಿಯಲ್ಲಿ ನಡೆದಿದ್ದ ಅಡಿಕೆ -ಕಾಳುಮೆಣಸು ಕಳವು ಪ್ರಕರಣವೊಂದರ ಆರೋಪಿಗೆ ಪುತ್ತೂರು ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.
ಉಪ್ಪಿನಂಗಡಿಯ ರಾಯಲ್ ಕಾಂಪ್ಲೆಕ್ಸ್‌ನಲ್ಲಿದ್ದ ಅಂಗಡಿಯಿಂದ ಕಳೆದ 2015ರ ಮೇ 21ರಂದು ರಾತ್ರಿ ವೇಳೆ ಅಡಿಕೆ ಮತ್ತು ಕಾಳು ಮೆಣಸು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಮಂಜು ಜಾಮೀನು ಪಡೆದುಕೊಂಡ ಆರೋಪಿ. ಆರೋಪಿಯ ಪರವಾಗಿ ವಕೀಲರಾದ ಹರೀಶ್‌ಕುಮಾರ್ ಬಳಕ್ಕ, ದೀಪಕ್‌ಕುಮಾರ್ ಬೊಳುವಾರು ವಾದಿಸಿದ್ದರು
Next Story





