ಪ್ರಧಾನಿ ಮೋದಿಯ ಪದವಿ ' ನಕಲಿ' , ಪದವಿ ಪಡೆದಿದ್ದು ಪ್ರಧಾನಿ ಹೆಸರಿನ ಬೇರೆ ವ್ಯಕ್ತಿ
ಮೋದಿ ವಿರುದ್ಧ ಗಂಭೀರ ಆರೋಪ ಮಾಡಿದ ಆಮ್ ಆದ್ಮಿ ಪಕ್ಷ

ಹೊಸದಿಲ್ಲಿ , ಮೇ 6 : ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೆಹಲಿ ವಿವಿಯ ಪದವಿ ಪಡೆದಿಲ್ಲ ಹಾಗು ಅವರು ತಮ್ಮ ಶೈಕ್ಷಣಿಕ ಅರ್ಹತೆ ಕುರಿತು ಸುಳ್ಳು ಹೇಳಿದ್ದಾರೆ ಎಂದು ನಾವು ಸಾಬೀತುಪಡಿಸುತ್ತೇವೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ಮೋದಿಯ ಪದವಿಯ ವಿವರಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸುವಂತೆ ಆಗ್ರಹಿಸಿದ್ದ ಎಎಪಿ, "ನರೇಂದ್ರ ದಾಮೋದರ್ ದಾಸ್ ಮೋದಿ" ಎಂಬವರು 1978 ರಲ್ಲಿ ದಿಲ್ಲಿ ವಿವಿಯಿಂದ ಪಾಸಾಗಿಯೇ ಇಲ್ಲ ಎಂದಿದೆ.
ರಾಜಸ್ಥಾನದ ಅಲ್ವಾರ್ ನ "ನರೇಂದ್ರ ಮಹಾವೀರ್ ಮೋದಿ" ಎಂಬವರು ಮೋದಿ ಪದವಿ ' ಪಡೆದ ' ವರ್ಷದಲ್ಲೇ ಪದವಿ ಪ್ರಮಾಣ ಪತ್ರವನ್ನು ತಾನು ಕಂಡು ಹಿಡಿದಿದ್ದೇನೆ ಎಂದು ಎಎಪಿ ಹೇಳಿದೆ.
"ನರೇಂದ್ರ ಮಹಾವೀರ್ ಮೋದಿ" ಎನ್ ಡಿ ಟಿ ವಿ ಯೊಂದಿಗೆ ಮಾತನಾಡಿ 1975 ರಿಂದ 1978 ರವರೆಗೆ ದಿಲ್ಲಿ ವಿವಿಯಲ್ಲಿ ಕಲಿತಿದ್ದೆ ಹಾಗು ಕೇಂದ್ರ ಸಚಿವ ಅರುಣ್ ಜೇಟ್ಲಿ ಆಗ ನನ್ನ ಸೀನಿಯರ್ ಆಗಿದ್ದರು ಎಂದು ಹೇಳಿದ್ದಾರೆ. " ನನ್ನನ್ನು ನರೇಂದ್ರ ಮೋದಿ ಎಂದು ಕರೆಯುವುದು ನನಗೆ ಖುಷಿ ಕೊಟ್ಟಿದೆ , ಇದು ನನಗೆ ಹೆಮ್ಮೆಯ ವಿಷಯ " ಎಂದೂ ಆ ವ್ಯಕ್ತಿ ಹೇಳಿದ್ದಾರೆ.





