ಮೇ 8ರಂದು ಡಿಕೆಎಸ್ಸಿ 20ನೆ ವಾರ್ಷಿಕ ಸ್ವಾಗತ ಸಮಿತಿ ಸಭೆ
ಉಡುಪಿ, ಮೇ 6: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರಿನ ಇಪ್ಪತ್ತನೆ ವಾರ್ಷಿಕೋತ್ಸವದ ನಿರ್ವಹಣೆಗಾಗಿ ರಚಿಸಲ್ಪಟ್ಟ ಸ್ವಾಗತ ಸಮಿತಿಯ ಸಭೆಯು ಮೇ 8ರಂದು ಅಪರಾಹ್ನ 3ಗಂಟೆಗೆ ಸಂಸ್ಥೆಯ ಅಧ್ಯಕ್ಷ ಅಸೈಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಲ್‌ರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಹೋಟೆಲ್ ಶ್ರೀನಿವಾಸದಲ್ಲಿ ನಡೆಯಲಿದೆ.
ಸ್ವಾಗತ ಸಮಿತಿಯ ಸದಸ್ಯರು, ಮರ್ಕಝ್ ಆಡಳಿತ ಸಮಿತಿಯ ಸದಸ್ಯರು ಮತ್ತು ಡಿಕೆಎಸ್ಸಿ ಸದಸ್ಯರು ಸಭೆಗೆ ಸರಿಯಾದ ಸಮಯಕ್ಕೆ ಹಾಜರಾಗಬೇಕೆಂದು ಸ್ವಾಗತ ಸಮಿತಿಯ ಚೆಯರ್‌ಮ್ಯಾನ್ ಮಮ್ತಾಝ್ ಅಲಿ ಕೃಷ್ಣಾಪುರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





