ಕಾಸರಗೋಡು: ಯುವಕರ ಮಧ್ಯೆ ಘರ್ಷಣೆ; ಇಬ್ಬರಿಗೆ ಇರಿತ
ಕಾಸರಗೋಡು, ಮೇ 6: ಯುವಕರ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಇರಿತಕ್ಕೊಳಗಾದ ಘಟನೆ ಶುಕ್ರವಾರ ರಾತ್ರಿ ಕುಂಬಳೆ ಪೆರುವಾಡ್‌ನಲ್ಲಿ ನಡೆದಿದೆ.
ಪೆರುವಾಡ್‌ನ ಸಂಶುದ್ದೀನ್ (30) ಮತ್ತು ಹನೀಫ್(30) ಗಾಯಗೊಂಡಿದ್ದು, ಈ ಪೈಕಿ ಸಂಶುದ್ದೀನ್‌ರ ಸ್ಥಿತಿ ಗಂಭೀರವಾಗಿದೆ. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಕೊಪ್ಪರ ಬಜಾರ್‌ನಲ್ಲಿ ನಡೆಯುತ್ತಿದ್ದ ಪುಟ್ಬಾಲ್ ಪಂದ್ಯಾಟದ ವೇಳೆ ಬೈಕ್‌ನಲ್ಲಿ ಬಂದ ತಂಡವು ಈ ಕೃತ್ಯ ನಡೆಸಿದೆ. ಘಟನಾ ಸ್ಥಳಕ್ಕೆ ಕುಂಬಳೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.
Next Story





