ರಸಗೊಬ್ಬರ ಸಬ್ಸಿಡಿಗೆ ಡಿಬಿಟಿ: ಜಯಂತ್ ಸಿನ್ಹಾ
ಹೊಸದಿಲ್ಲಿ, ಮೇ 6: ನೇರ ಲಾಭ ವರ್ಗಾವಣೆ ಯೋಜನೆಯನ್ನು (ಡಿಬಿಟಿ) ಆರೋಗ್ಯ ವಿಮೆಗೆ ವಿಸ್ತರಿಸಲು ಯೋಚಿಸಲಾಗಿದೆ. ನಿಧಿ ಸೋರಿಕೆ ಪಡೆಯಲು ರಸಗೊಬ್ಬರ ಸಬ್ಸಿಡಿಗೂ ಈ ಯೋಜನೆ ಬಳಸುವ ಪ್ರಯೋಗಗಳನ್ನು ನಡೆಸಲಾಗುತ್ತಿದೆಯೆಂದು ಸರಕಾರ ಎಂದು ಹೇಳಿದೆ.
ಪ್ರಶ್ನಾವಧಿಯಲ್ಲಿ ಲೋಕಸಭೆಯಲ್ಲಿ ಪ್ರಶ್ನೆಗಳಿಗುತ್ತರಿಸುತ್ತಿದ್ದ ಹಣಕಾಸು ಸಹಾಯಕ ಸಚಿವ ಜಯಂತ್ ಸಿನ್ಹಾ, ಮುಂದಿನ ದಿನಗಳಲ್ಲಿ ರಾಜ್ಯಗಳ ಸಹಾಯಯೋಗದೊಂದಿಗೆ ಡಿಬಿಡಿಯನ್ನು ಆರೋಗ್ಯವಿಮೆ ಹಾಗೂ ಪಿಂಚಣಿಗೆ ಬಳಸಲು ಸರಕಾರ ಉದ್ದೇಶಿಸಿದೆ. ರಸಗೊಬ್ಬರ ಸಬ್ಸಿಡಿಗೆ ಡಿಬಿಟಿ ಮೂಲಕ ನಿಧಿ ವರ್ಗಾವಣೆಗೆ ಕೆಲವು ಕಡೆಗಳಲ್ಲಿ ಪ್ರಯೋಗಗಳು ನಡೆಯುತ್ತಿವೆ ಎಂದರು. ಆಹಾರ ಸಬ್ಸಿಡಿಯ ಅರ್ಧದಷ್ಟು ಮಧ್ಯವರ್ತಿಗಳಿಗೆ ಹೋಗುತ್ತಿದೆಯೆಂದು ಪ್ರತಿಪಾದಿಸಿದ ಬಿಜೆಪಿ ಆರ್.ಕೆ.ಸಿಂಗ್‌ರ ಪೂರಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ, ಭ್ರಷ್ಟಾಚಾರ ತಡೆಯಲು ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರುವ ಪ್ರಾಯೋಗಿಕ ಯೋಜನೆಯೊಂದು ಕೇಂದ್ರಾಡಳಿತ ಪುದುಚೇರಿ ಹಾಗೂ ದಾದ್ರಾ ಮತ್ತು ನಗರ ಹವೇಲಿಯಲ್ಲಿ ಚಾಲನೆಯಲ್ಲಿದೆಯೆಂದು ತಿಳಿಸಿದರು.





