ತನಿಖಾ ಸಮಿತಿಯಿಂದ ಜಿಲ್ಲಾಧಿಕಾರಿಗೆ ವರದಿ
ಕೊಲ್ಲೂರು ದೇವಾಲಯ ಹಗರಣ

ಉಡುಪಿ, ಮೇ 6: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದಿ ರುವ ಚಿನ್ನಾಭರಣ ಕಳವು ಪ್ರಕರಣದಬಳಿಕ ದೇವಸ್ಥಾನದ ಅವ್ಯವಹಾರ ಹಾಗೂ ಅಕ್ರ ಮಗಳ ಕುರಿತಂತೆ ಸಮಗ್ರ ತನಿಖೆ ನಡೆ ಸಲು ಜಿಲ್ಲಾಧಿಕಾರಿ ನೇಮಿಸಿದ ಹಿರಿಯ ಅಧಿಕಾರಿಗಳ ಸಮಿತಿ ತನ್ನ ವರದಿಯನ್ನು ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್. ಅವ ರಿಗೆ ಸಲ್ಲಿಸಿದೆ.
ವರದಿ ಕೈಸೇರಿರುವುದನ್ನು ಖಚಿತ ಪಡಿಸಿದ ಜಿಲ್ಲಾಧಿಕಾರಿ ಡಾ.ವಿಶಾಲ್, ಈ ವರದಿ ಹಾಗೂ ಇತರ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಎಲ್ಲವನ್ನೂ ಪರಿಶೀಲಿಸಿ ಮುಂದೆ ತೆಗೆದುಕೊಳ್ಳಬೇಕಿರುವ ಕ್ರಮಗಳ ಕುರಿತು ನಿರ್ಧರಿಸುವುದಾಗಿ ತಿಳಿಸಿದರು. ಹಗರಣದ ಬಗ್ಗೆ ಸಮಗ್ರ ತನಿಖೆ ನಡೆ ಸಲು ಜಿಲ್ಲಾಧಿಕಾರಿಗಳು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ನೇಮಿಸಿದ್ದರು. ಅಲ್ಲದೆ ಪ್ರಕರಣದ ತನಿಖಾಧಿಕಾರಿಯಾಗಿರುವ ಕುಂದಾಪುರ ಡಿವೈಎಸ್ಪಿ ಮಂಜುನಾಥ್ ಶೆಟ್ಟಿ ಕೂಡಾ ಹಗರಣದ ಕುರಿತು ತನ್ನ ಮಧ್ಯಂತರ ವರದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸಮಿತಿ ತನ್ನ ವರದಿಯಲ್ಲಿ ಹಲವು ಶಿಫಾ ರಸುಗಳನ್ನು ಮಾಡಿದೆ ಎಂದು ವಿಶ್ವಾಸನೀಯ ಮೂಲಗಳಿಂದ ತಿಳಿದು ಬಂದಿದೆ. ಇದರಲ್ಲಿ 1952ರಿಂದ 2010ರವರೆಗೆ ಕೊಲ್ಲೂರು ಮೂಕಾಂಬಿಕಾ ದೇವಿಗೆ ನಾಡಿನ ಭಕ್ತರು ಅರ್ಪಿಸಿದ ಸುಮಾರು 152 ಕೆ.ಜಿ. ಚಿನ್ನದ ಸಾಚಾತನದ ಬಗ್ಗೆ ಅಕ್ಕಸಾ ಲಿಗರಿಂದ ಪರಿಶೀಲನೆ ನಡೆಸುವಂತೆ ತಿಳಿಸಿದೆ. ಅಲ್ಲದೆ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಎ.ವಿ. ಪ್ರಸನ್ನ ಹಾಗೂ ಈಗಿನ ಇಒ ಉಮಾ ಕರ್ತವ್ಯ ಲೋಪ ಎಸಗಿದ್ದಾರೆಂದು ಸಮಿತಿ ಅಭಿ ಪ್ರಾಯ ಪಟ್ಟಿದೆ ಎಂದು ಹೇಳಲಾಗಿದೆ.
ಭದ್ರತೆಗೆ ಹೊರಗಿನ ಸಿಬ್ಬಂದಿ ನೇಮಿಸುವಂತೆ, 10ರಿಂದ 15 ವರ್ಷ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನು ವರ್ಗಾಯಿಸುವಂತೆ, ದೇವಸ್ಥಾನದಲ್ಲಿ ಹೊರಗಿನ ಭಟ್ಟರು ಪೂಜೆ ಮಾಡಲು ಅವಕಾಶ ನೀಡದಂತೆ, ಕಟೀಲು ದೇವಾ ಲಯದಲ್ಲಿ ಮಾಡುವಂತೆ ಭಕ್ತರು ದೇವರಿಗೆ ಚಿನ್ನ ಅರ್ಪಿಸುವ ವೇಳೆ ಅವುಗಳ ವೀಡಿಯೋ ರೆಕಾರ್ಡಿಂಗ್ ಮಾಡುವಂತೆ ಶಿಫಾರಸು ಮಾಡಲಾಗಿದೆ. ಅಲ್ಲದೆ ದೇವಿಯ ಮೇಲಿರುವ ಆಭರಣಗಳನ್ನು ಮರು ಪರಿಶೀಲಿಸುವಂತೆ ಸಲಹೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಹಗರಣಕ್ಕೆ ಸಂಬಂಧಿಸಿದಂತೆ ದೇವಳದ ಸಿಬ್ಬಂದಿ ಶಿವರಾಮ ಮಡಿವಾಳ, ಗಂಗಾಧರ ಹೆಗ್ಡೆ, ನಾಗರಾಜ್ ಶೇರುಗಾರ್, ಗಣೇಶ್ ಪೂಜಾರಿ, ಪ್ರಸಾದ್ ಆಚಾರ್ಯರೊಂದಿಗೆ ದೇವಸ್ಥಾನದ ನಿವೃತ್ತ ಸಿಇಒ ಎಲ್. ಎಸ್. ಮಾರುತಿ (61)ಯವರನ್ನು ಬಂಧಿಸಲಾಗಿತ್ತು.







