ಡಿಕೆಎಸ್ಸಿ ವತಿಯಿಂದ ದುಬೈನಲ್ಲಿ ಜೂನ್ 17ರಂದು ಬೃಹತ್ ಇಫ್ತಾರ್ ಕೂಟ: ಸ್ವಾಗತ ಸಮಿತಿ ಅಧ್ಯಕ್ಷರಾಗಿ ನವಾಝ್ ಕೋಟೆಕಾರ್

ದುಬೈ, ಮೇ 7: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ವತಿಯಿಂದ ವರ್ಷಂಪ್ರತಿ ನಡೆಸುತ್ತಾ ಬರುತ್ತಿರುವ ಫ್ಯಾಮಿಲಿ ಇಫ್ತಾರ್ ಕೂಟವು ಜೂನ್ 17ರಂದು ಅಲ್ಮುಸಲ್ಲಾ ಟವರ್ ಆಡಿಟೋರಿಯಂನಲ್ಲಿ ನಡೆಯಲಿದೆ.
ಕಾರ್ಯಕ್ರಮ ನಿರ್ವಹಣೆಯ ಹಿನ್ನೆಲೆಯಲ್ಲಿ ಡಿಕೆಎಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ‘ಇಫ್ತಾರ್ ಕೂಟ-2016ರ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಸಮಿತಿಯ ಅಧ್ಯಕ್ಷರಾಗಿ ನವಾಝ್ ಕೋಟೆಕಾರ್, ಸಂಚಾಲಕರಾಗಿ ಇಸ್ಮಾಯೀಲ್ ಬಾಬ ಮೂಳೂರು , ರಹ್ಮಾನ್ ಸಜಿಪ ಹಾಗೂ ಇಬ್ರಾಹೀಂ ಕಳತ್ತೂರು ಆಯ್ಕೆಯಾಗಿದ್ದಾರೆ.
Next Story





