ಎರಡು ದಶಕದ ಹಿಂದೆ ಕಳೆದುಕೊಂಡಿದ್ದ ದ್ರಷ್ಟಿಯನ್ನು ಮರಳಿ ಪಡೆದ ಮಹಿಳೆ !

ಲಂಡನ್, ಮೇ7: ಅಪಘಾತವೊಂದರಲ್ಲಿ ಬೆನ್ನು ಮೂಳೆಗೆ ತೀವ್ರ ಹಾನಿಯಾಗಿದ್ದ ಮಹಿಳೆಯೊಬ್ಬರು ಅದರಿಂದಾಗಿ ತಮ್ಮ ದ್ರಷ್ಟಿ ಯನ್ನೂ ಕಳೆದುಕೊಂಡಿದ್ದರು. ಇದಾಗಿ ಈಗ ಎರಡು ದಶಕಗಳೇ ಕಳೆದಿವೆ. ಆದರೆ ಈಗ ಆಕೆ ತನ್ನ ದ್ರಷ್ಟಿ ಯನ್ನು ಮತ್ತೆ ಪಡೆದಿದ್ದಾರೆ. ಇದಕ್ಕೆ ಯಾವುದೇ ಪವಾಡ ಕಾರಣವಲ್ಲ. ಇದಕ್ಕೆ ಕಾರಣ ಆಕೆ ತನ್ನ ಮನೆಯಲ್ಲಿ ಅಯತಪ್ಪಿ ಬಿದ್ದಿದ್ದು !
ದಕ್ಷಿಣ ಫ್ಲೋರಿಡಾದ ನಿವಾಸಿ ಮೇರಿ ಅನ್ ಫ್ರಾಂಕೊ ಹೀಗೆ ಪವಾಡ ಸದ್ರಶವಾಗಿ ತಮ್ಮ ದ್ರಷ್ಟಿ ಮರಳಿ ಪಡೆದವರು.
ಇತ್ತೀಚೆಗೆ ತಮ್ಮ ಮನೆಯಲ್ಲಿ ಅಯತಪ್ಪಿ ಬಿದ್ದ ಮೇರಿಯ ಕುತ್ತಿಗೆ ಹಾಗೂ ಕೈಗೆ ಪೆಟ್ಟಾಗಿತ್ತು. ಇದಕ್ಕಾಗಿ ಅವರು ಶಸ್ತ್ರಚಿಕಿತ್ಸೆಯನ್ನೂ ಮಾಡಿಸಿಕೊಳ್ಳಬೇಕಾಯಿತು. ಆದರೆ ಅವರಿಗೆ ಅವರ ಬದುಕಿನ ಅತಿ ದೊಡ್ಡ ಅಚ್ಚರಿ ಕಾದಿತ್ತು. ಶಸ್ತ್ರಚಿಕಿತ್ಸೆ ಮಾಡಿಸಿದ ಮೇಲೆ ಇದ್ದಕ್ಕಿದ್ದಂತೆ ಆಕೆಗೆ ದ್ರಷ್ಟಿ ಮರಳಿ ಬಂದಿತ್ತು.
ಅಪಘಾತದಲ್ಲಿ ಆಕೆಯ ದ್ರಷ್ಟಿಗೆ ಸಂಬಂಧಿಸಿದ ನರವೊಂದಕ್ಕೆ ಪೆಟ್ಟಾಗಿತ್ತು. ಈ ಶಸ್ತ್ರಚಿಕಿತ್ಸೆಯಲ್ಲಿ ಅದು ಮತ್ತೆ ಸರಿಯಾಗಿದ್ದರಿಂದ ಆಕೆಯ ದ್ರಷ್ಟಿ ಮರಳಿದೆ ಎಂದು ವೈದ್ಯರು ತಿಳಿಸಿದ್ದಾರೆ.





