ಪಶ್ಚಿಮ ಬಂಗಾಳ ಜಾಧವ್‌ಪುರ ವಿವಿಯಲ್ಲಿ ಕಂಗಾಲು: ದೇಶವಿರೋಧಿಗಳ ಅಡ್ಡೆ ಎಂದ ಬಿಜೆಪಿ

ಜಾಧವ್‌ಪುರ್(ಪಶ್ಚಿಮಬಂಗಾಳ), ಮೇ 7: ಪಶ್ಚಿಮಬಂಗಾಳದ ಜಾಧವ್‌ಪುರ್ ವಿಶ್ವವಿದ್ಯಾನಿಲಯವು ದೇಶ ವಿರೋಧಿ ತತ್ವಗಳಿಗೆ ಅಡ್ಡೆಯಾಗಿದೆ. ವಿಪಕ್ಷ ಸಿಪಿಎಂ ಮತ್ತುಯುನಿವರ್ಸಿಟಿಯ ವೈಸ್ ಚಾನ್ಸಲರ್ ಈ ತತ್ವಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಒಂದು ದಿವಸ ಹಿಂದೆ ಕ್ಯಾಂಪಸ್‌ನಲ್ಲಿ ವಿವೇಕ್ ಅಗ್ನಿಹೋತ್ರಿಯ ಸಿನಿಮಾ ಬುದ್ಧ ಇನ್ ಟ್ರಾಫಿಕ್ ಜಾಮ್‌ನ ಸ್ಕ್ರೀನಿಂಗ್ ಕುರಿತು ಗಲಾಟೆ ತಲೆದೋರಿದ್ದು ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿತ್ತು. ಈ ಸಿನೆಮಾದಲ್ಲಿ ಬಿಜೆಪಿ ಅನುಪಮ್‌ಖೇರ್ ಪಾತ್ರ ಕೂಡಾ ಇದೆ ಎಂದು ವರದಿಯಾಗಿದೆ. ರಾಜ್ಯದ ಬಿಜೆಪಿ ಮುಖಂಡ ದಿಲೀಪ್ ಘೋಷ್ "ಜಾಧವ್‌ಪುರ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳ ಉಪದ್ರವ ಒಂದು ಸಾಮಾನ್ಯವಾದ ಮಾತಾಗಿದೆ. ಸೆನ್ಸಾರ್‌ಬೋರ್ಡ್ ಪಾಸು ಮಾಡಿದ್ದ ಒಂದು ಸಿನೆಮಾದ ಸ್ಕ್ರೀನಿಂಗ್‌ನ್ನು ಕಾನೂನು ಬಾಹಿರವಾಗಿ ತಡೆಹಿಡಿಯಲಾಯಿತು. ಜಾಧವ್‌ಪುರ್ ಯುನಿವರ್ಸಿಟಿ ಸಿಪಿಎಂಮತ್ತು ಎಡಪಂಥೀಯ ಬೆಂಬಲದ ವಿದ್ಯಾರ್ಥಿಗಳ ಟ್ರೆಂಡ್ ಆಗಿದೆ. ಅವರು ತಮ್ಮ ವಿಚಾರಧಾರೆಯ ವಿರುದ್ಧ ವಿರುವ ಎಲ್ಲವನ್ನೂ ವಿರೊಧಿಸುತ್ತಿದ್ದಾರೆ. ಇದು ದೇಶದ ಪ್ರಜಾಪ್ರಭುತ್ವ ರೀತಿಗೆ ತದ್ವಿರುದ್ಧವಾದುದು ನಾವು ಇದನ್ನು ಖಂಡಿಸುತ್ತೇವೆ" ಎಂದು ಗುಡುಗಿದ್ದಾರೆ. ಘೋಷ್ ಆರೋಪ ಹೊರಿಸಿ" ಜಾಧವ್ ಯುನಿವರ್ಸಿಟಿ ದೇಶ ವಿರೋಧಿಗಳ ಅಡ್ಡೆಯಾಗಿದೆ. ಎಡಪಂಥೀಯ ಬೆಂಬಲಿಗ ವಿದ್ಯಾರ್ಥಿ ಯೂನಿಯನ್ ದೇಶ ವಿರೋಧ ಭೂಮಿಕೆಯನ್ನು ಸೃಷ್ಟಿಸುತ್ತಿದೆ.ಆದ್ದರಿಂದ ಯುನಿವರ್ಸಿಟಿ ಸ್ಟೂಡೆಂಟ್ಸ್‌ಗಳಭಾರತ ವಿರೋಧಿ ಘೋಷಣೆಯನ್ನು ನಾವು ನೋಡಿಯೂ ಆಗಿದೆ" ಎಂದು ಹೇಳಿದ್ದಾರೆ. ವಿಸಿ ಕ್ಯಾಂಪಸ್‌ನಲ್ಲಿ ತಥಾಕಥಿತ ದೇಶವಿರೋಧಿ ತತ್ವಗಳನ್ನು ಬೆಂಬಲಿಸುತ್ತಿದ್ದಾರೆ ಆದ್ದರಿಂದ ಅವರ ಪಾತ್ರವನ್ನು ತನಿಖೆಮಾಡಿಸಬೇಕೆಂದು ಘೋಷ್ ಆಗ್ರಹಿಸಿದ್ದಾರೆ. "ನಾವು ಕೇಂದ್ರ ಸರಕಾರಕ್ಕೆ ಜಾಧವ್‌ಪುರ್ ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಚಟುವಟಿಕೆಗಲ ಬಗ್ಗೆ ಮಾಹಿತಿ ನೀಡಲಿದ್ದೇವೆ ಎಂದೂ ಘೋಷ್ ಘೋಷಿಸಿದ್ದಾರೆ.
ಶುಕ್ರವಾರ ಕ್ಯಾಂಪಸ್‌ನಲ್ಲಿ ನಡೆದ ಹೊಡೆದಾಟದ ಪರಿಣಾಮ ಕೆಲವು ವಿದ್ಯಾರ್ಥಿನಿಯರನ್ನು ಚುಡಾಯಿಸಲಾಗಿದೆ ಎಂದು ಹೇಳಲಾಗಿದೆ. ಇದಲ್ಲದೆ ಬಿಜೆಪಿ ನಾಯಕ ಮತ್ತು ಮಾಜಿ ನಟಿ ರೂಪಾ ಗಂಗುಲಿ ಸ್ಥಳಕ್ಕೆ ಬಂದರೂ ಅವರಿಗೆ ಕ್ಯಾಂಪಸ್ ಪ್ರವೇಶವನ್ನು ನಿರಾಕರಿಸಲಾಗಿತ್ತು. ಘರ್ಷಣೆ ಸಂಜೆ ಸಿನೆಮಾದ ಸ್ಕ್ರೀನಿಂಗ್‌ನ ನಂತರ ಎಬಿವಿಪಿ ಮತ್ತು ಎಡಪಂಥೀಯ ವಿದ್ಯಾರ್ಥಿ ಯೂನಿಯನ್‌ನ ಸದಸ್ಯರು ಎದುರು ಬದುರಾದಾಗ ಆರಂಭವಾಗಿತ್ತು.
ಪಶ್ಚಿಮಬಂಗಾಳದ ರಾಜ್ಯಪಾಲ ಎನ್. ತ್ರಿಪಾಠಿ ಶನಿವಾರ ವಿಶ್ವವಿದ್ಯಾನಿಲಯ ವೇಗವಾಗಿ ಅಶಾಂತಿಯ ಕೇಂದ್ರವಾಗುತ್ತಿದೆ. ಅಧಿಕಾರಿಗಳು ಇದರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ. "ಉತ್ಕೃಷ್ಟತೆಯ ಒಂದು ಕೇಂದ್ರ ಎಂದು ಹೆಸರುವಾಸಿಯಾದ ಜಾಧವ್‌ಪುರ್ ವಿಶ್ವವಿದ್ಯಾನಿಲಯ ವೇಗವಾಗಿ ಅಶಾಂತಿಯ ಕೇಂದ್ರವಾಗಿಬದಲಾವಣೆ ಗೊಳ್ಳುತ್ತಿದೆ. ಅಧಿಕಾರಿಗಲುಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ತ್ರಿಪಾಠಿ ಹೇಳಿದ್ದಾರೆ. ಅವರು ವಿಶ್ವವಿದ್ಯಾನಿಲಯದ ಕುಲಾಧಿಪತಿ ಕೂಡಾ ಆಗಿದ್ದಾರೆ. ವಿಶ್ವವಿದ್ಯಾನಿಲಯದ ವಿಸಿಯಿಂದ ಘಟನೆಯ ಕುರಿತು ವರದಿಯನ್ನು ಕೇಳಲಿದ್ದೀರಾ ಎಂದು ಪ್ರಶ್ನಿಸಿದಾಗ"ನಾನು ಈವರೆಗೆ ಆಕುರಿತು ಯಾವುದೇ ನಿರ್ಧಾರ ಮಾಡಿಲ್ಲ" ಎಂದು ತಿಳಿಸಿದರೆಂದು ವರದಿಯಾಗಿದೆ.







