ಕಾಪ್ಟರ್ ಹಗರಣ :ಪಾವತಿ ಸುದ್ದಿ ಪತ್ರಕರ್ತನ ವಿಚಾರಣೆ ಅಗತ್ಯ - ಸ್ವಾಮಿ

ಹೊಸದಿಲ್ಲಿ,ಮೇ 7: 3,600 ಕೋ.ರೂ.ಗಳ ಆಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ವಾಗ್ಯುದ್ಧದ ನಡುವೆಯೇ ಶನಿವಾರ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು, ಹಗರಣಕ್ಕೆ ಸಂಬಂಧಿಸಿದಂತೆ ‘ಪಾವತಿ ಸುದ್ದಿ ಪತ್ರಕರ್ತ’ನೋರ್ವನನ್ನು ಮೊದಲು ವಿಚಾರಣೆಗೊಳಪಡಿಸಬೇಕಾದ ಅಗತ್ಯವಿದೆ ಎಂದು ಟ್ವೀಟಿಸುವ ಮೂಲಕ ಸಂಚಲನವನ್ನುಂಟು ಮಾಡಿದ್ದಾರೆ.
ಇಷ್ಟೇ ಅಲ್ಲ,ರಫೇಲ್ ವ್ಯವಹಾರದಲ್ಲಿ ಐದು ಕೋ.ರೂ.ಗಳನ್ನು ಪಡೆದುಕೊಂಡಿರುವ ಇನ್ನೋರ್ವ ಪತ್ರಕರ್ತನಿಗಾಗಿ ಜಾರಿ ನಿರ್ದೇಶನಾಲಯವು ಹುಡುಕಾಡುತ್ತಿದೆ ಎಂದೂ ಸ್ವಾಮಿ ಟ್ವೀಟ್‌ನಲ್ಲಿ ಹೇಳಿದ್ದಾರೆ.
Next Story





