ಮಂಜೇಶ್ವರ ಶಾಸಕರಿಂದ ಗಮನಾರ್ಹ ಸಾಧನೆ: ಆಸ್ಕರ್ ಫೆರ್ನಾಂಡಿಸ್

ಮಂಜೇಶ್ವರ, ಮೇ 7: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಬಿ. ಅಬ್ದುರ್ರಝಾಕ್ ಮಾಡಿದ ಸಾಧನೆ ಗಮನಾರ್ಹ ಮಾಜಿ ಕೇಂದ್ರ ಸಚಿವ, ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದ್ದಾರೆ.
ಪುತ್ತಿಗೆ ಪಂಚಾಯತ್ ವ್ಯಾಪ್ತಿಯ ಕಂದಲ್‌ನಲ್ಲಿ ಶನಿವಾರ ಜರಗಿದ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಯುಡಿಎಫ್ ಅ್ಯರ್ಥಿ ಪಿ.ಬಿ ಅಬ್ದುರ್ರಝಾಕ್‌ರ ಚುನಾವಣಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
5 ವರ್ಷಗಳಲ್ಲಿ 877 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಅಂಗೀಕಾರ ದೊರಕಿಸಿಕೊಟ್ಟಿರುವುದು ಶಾಸಕರ ಕ್ರಿಯಾಶೀಲತೆಗೆ ಪ್ರತ್ಯಕ್ಷ ಸಾಕ್ಷಿಯೆಂದು ಹೇಳಿದ ಅವರು, ಕೇರಳದಲ್ಲಿ ಕೋಮುವಾದಿ ಶಕ್ತಿಗಳಿಗೆ ಅವಕಾಶ ನೀಡದ ಕೇರಳಿಗರು ಪ್ರಜ್ಞಾವಂತರು. ಈ ಬಾರಿಯ ಚುನಾವಣೆಯಲ್ಲಿಯೂ ಬಿಜೆಪಿ ಖಾತೆ ತೆರೆಯದಂತೆ ಮಂಜೇಶ್ವರದ ಮತದಾರರು ಜಾಗರೂಕರರಾಗಿರುವಂತೆ ಕರೆ ನೀಡಿದರು.
ಸಭೆಯಲ್ಲಿ ಕರ್ನಾಟಕ ಕಾಂಗ್ರೆಸ್ ಕಾರ್ಯದರ್ಶಿ ಗಫೂರ್, ಎಐಸಿಸಿ ಸದಸ್ಯ ಪಿ.ವಿ ಮೋಹನ್ , ಕಾಸರಗೋಡು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ , ಅ್ಯರ್ಥಿ ಪಿ.ಬಿ ಅಬ್ದುರ್ರಝಾಕ್, ಡಿಸಿಸಿ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್., ಕೆಪಿಸಿಸಿ ನಿರ್ವಾಹಕ ಸದಸ್ಯ ಪಿ.ಎ. ಅಶ್ರಫಲಿ, ಎ.ಎ.ಕಯ್ಯಾಂಕುಡೇಲ್, ಸುಂದರ ಆರಿಕ್ಕಾಡಿ, ಟಿ.ಎ. ಮೂಸಾ, ಅಬ್ಬಾಸ್ ಕುಂಬಳೆ, ನಾರಾಯಣ ನಂಬಿಯಾರ್, ಇಬ್ರಾಹಿಂ ಮುಂಡ್ಯತ್ತಡ್ಕ ಮೊದಲಾದವರು ಉಪಸ್ತಿತರಿದ್ದರು.







