ಸಾಕ್ಷಾಧಾರಗಳಿಲ್ಲದೆ ನಾಲ್ವರು ಶಂಕಿತ ಉಗ್ರರ ಬಿಡುಗಡೆ
ಹೊಸದಿಲ್ಲಿ,ಮೇ 7: ಕಳೆದ ಮಂಗಳವಾರ ತಡರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದ 13 ಶಂಕಿತ ಜೈಷ್-ಎ-ಮೊಹಮ್ಮದ್ ಉಗ್ರರ ಪೈಕಿ ನಾಲ್ವರನ್ನು ಸಾಕಷ್ಟು ಸಾಕ್ಷಾಧಾರಗಳ ಕೊರತೆಯಿಂದಾಗಿ ತನಿಖಾ ತಂಡವು ಶನಿವಾರ ಸಂಜೆ ಬಿಡುಗಡೆಗೊಳಿಸಿದೆ.
ಸ್ಫೋಟಕಗಳೊಡನೆ ಸಿಕ್ಕಿಬಿದ್ದಿದ್ದ ಮೂವರನ್ನು ಬಂಧಿಸಲಾಗಿದೆ. ಜೈಷ್‌ನತ್ತ ಸೈದ್ಧಾಂತಿಕ ಒಲವು ಹೊಂದಿದ್ದರೆನ್ನಲಾದ ಹತ್ತು ಶಂಕಿತರ ಪೈಕಿ ನಾಲ್ವರು ಈಗ ಬಿಡುಗಡೆಗೊಂಡಿದ್ದು,ಉಳಿದ ಆರು ಜನರ ವಿಚಾರಣೆ ಇನ್ನೂ ನಡೆಯುತ್ತಿದೆ.
ಬಿಡುಗಡೆಗೊಂಡಿರುವ ನಾಲ್ವರೂ ದಿಲ್ಲಿ ನಿವಾಸಿಗಳಾಗಿದ್ದಾರೆ.
Next Story





