ಟ್ರಂಪ್‌ರಿಂದ ದೂರ ಸರಿಯುತ್ತಿರುವ ರಿಪಬ್ಲಿಕನ್ ನಾಯಕರು

ವಾಶಿಂಗ್ಟನ್, ಮೇ 7: ಡೊನಾಲ್ಡ್ ಟ್ರಂಪ್ ಮತ್ತು ರಿಪಬ್ಲಿಕನ್ ಪಕ್ಷದ ನಾಯಕರ ನಡುವೆ ಶಾಂತಿ ಸ್ಥಾಪಿಸುವ ಪ್ರಯತ್ನಗಳು ಶುಕ್ರವಾರ ಫಲಿಸಿಲ್ಲ. ಅಧ್ಯಕ್ಷೀಯ ಚುನಾವಣೆಯಲ್ಲಿ ತಾನು ಟ್ರಂಪ್‌ರನ್ನು ಬೆಂಬಲಿಸುವುದಿಲ್ಲ ಎಂದು ಜೇಬ್ ಬುಶ್ ಘೋಷಿಸಿದ್ದಾರೆ.
ಹಿರಿಯ ಸಂಸದರು ಮತ್ತು ರಾಜಕೀಯ ದೇಣಿಗೆದಾರರೊಂದಿಗೆ ಶಾಂತಿ ಏರ್ಪಡಿಸಿಕೊಳ್ಳಲು ಟ್ರಂಪ್ ಪರದಾಟ ನಡೆಸಿದ್ದಾರೆ. ತನ್ನ ಪ್ರೈಮರಿ ಚುನಾವಣಾ ಪ್ರಚಾರದ ವೇಳೆ ಟ್ರಂಪ್ ಈ ನಾಯಕರನ್ನು ನಿಂದಿಸಿದ್ದರು. ಈಗ ಟ್ರಂಪ್ ಭವಿಷ್ಯ ಈ ನಾಯಕರ ಕೃಪೆಯನ್ನು ಅವಲಂಬಿಸಿದೆ.
ಜುಲೈಯಲ್ಲಿ ಕ್ಲೀವ್‌ಲ್ಯಾಂಡ್‌ನಲ್ಲಿ ನಡೆಯಲಿರುವ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ನೇಮಕ ಸಮಾವೇಶದಲ್ಲಿ ಭಾಗವಹಿಸದಿರಲು ಹಲವು ನಾಯಕರು ನಿರ್ಧರಿಸಿದ್ದಾರೆ.
Next Story





