ಉಮರ್ ಖಾಲಿದ್ ಕೋಲ್ಕತಾ ಭೇಟಿಗೆ ನ್ಯಾಯಾಲಯದ ಅನುಮತಿ

ಹೊಸದಿಲ್ಲಿ,ಮೇ 7: ಫೆ.9ರಂದು ವಿವಿ ಕ್ಯಾಂಪಸ್‌ನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದಕ್ಕಾಗಿ ದೇಶದ್ರೋಹದ ಆರೋಪವನ್ನು ಎದುರಿಸುತ್ತಿರುವ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್‌ಗೆ ಚರ್ಚೆಯೊಂದರಲ್ಲಿ ಪಾಲ್ಗೊಳ್ಳಲು ಕೋಲ್ಕತಾಕ್ಕೆ ಪ್ರಯಾಣಿಸಲು ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಶನಿವಾರ ಅನುಮತಿ ನೀಡಿದೆ.
ಬಸ್ತರ್ ಸಾಲಿಡಾರಿಟಿ ನೆಟ್‌ವರ್ಕ್ ಆಯೋಜಿಸಿರುವ ಈ ಚರ್ಚಾ ಕಾರ್ಯಕ್ರಮ ಮೇ.21ರಂದು ನಡೆಯಲಿದ್ದು, ಮೇ.20ರಿಂದ 23ರವರೆಗೆ ದಿಲ್ಲಿಯಿಂದ ಹೊರಗೆ ತೆರಳಲು ನ್ಯಾಯಾಲಯ ಒಪ್ಪಿಗೆ ನೀಡಿದೆ.
Next Story





