ಕುಂದಾಪುರ ತಾ.ಪಂ.ಗೆ ಜಯಶ್ರೀ ಅಧ್ಯಕ್ಷೆ, ಪ್ರವೀಣ್ ಶೆಟ್ಟಿ ಉಪಾಧ್ಯಕ್ಷ

ಕುಂದಾಪುರ, ಮೇ 7: ಕುಂದಾಪುರ ತಾಲೂಕು ಪಂಚಾಯತ್‌ನ ನೂತನ ಅಧ್ಯಕ್ಷರಾಗಿ ಬಿಜೆಪಿಯ ಜಯಶ್ರೀ ಸುಧಾಕರ ಮೊಗವೀರ ಹಾಗೂ ಉಪಾಧ್ಯಕ್ಷರಾಗಿ ಪ್ರವೀಣ್‌ಕುಮಾರ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕುಂದಾಪುರ ಸಹಾಯಕ ಕಮಿಷನರ್ ಎಸ್.ಅಶ್ವಥಿ ಶನಿವಾರ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಕುಂದಾಪುರ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ಅಭ್ಯರ್ಥಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಬ) ಅಭ್ಯರ್ಥಿಗೆ ಮೀಸಲಾಗಿತ್ತು. ಕುಂದಾಪುರ ತಾಪಂನ 37 ಸ್ಥಾನಗಳಲ್ಲಿ ಬಿಜೆಪಿ 26ನ್ನು ಗೆದ್ದುಕೊಂಡಿದ್ದರೆ, ಕಾಂಗ್ರೆಸ್‌ಗೆ ಸಿಕ್ಕಿರುವುದು 11ಸ್ಥಾನಗಳು ಮಾತ್ರ.
ಇಂದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಕ್ರಮವಾಗಿ ಮೊಳಹಳ್ಳಿ ತಾಪಂ ಕ್ಷೇತ್ರದ ಸದಸ್ಯೆ ಜಯಶ್ರೀ ಸುಧಾಕರ ಮೊಗವೀರ ಹಾಗೂ ನಾಡಾ ತಾಪಂ ಕ್ಷೇತ್ರದ ಕಡ್ಕೆ ಪ್ರವೀಣ್‌ಕುಮಾರ ಶೆಟ್ಟಿ ಮಾತ್ರ ನಾಮಪತ್ರ ಸಲ್ಲಿಸಿದ್ದು, ಇವರಿಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಸ್ವಾಮಿ ಇದ್ದರು.
Next Story





