Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸೈನಿಕರ ಆತ್ಮಹತ್ಯೆ: ಭಾರತೀಯ ಭದ್ರತಾ...

ಸೈನಿಕರ ಆತ್ಮಹತ್ಯೆ: ಭಾರತೀಯ ಭದ್ರತಾ ಪಡೆಗೆ ಆತಂಕದ ವಿಷಯ

ರವಿ ನಿತೇಶ್ರವಿ ನಿತೇಶ್7 May 2016 10:47 PM IST
share
ಸೈನಿಕರ ಆತ್ಮಹತ್ಯೆ: ಭಾರತೀಯ ಭದ್ರತಾ ಪಡೆಗೆ ಆತಂಕದ ವಿಷಯ

ಸೈನಿಕರು ಭಾರತೀಯ ಭದ್ರತಾ ವ್ಯವಸ್ಥೆಯ ಅಮೂಲ್ಯ ಭಾಗ. ಭದ್ರತೆಯ ಯುದ್ಧತಾಂತ್ರಿಕ ಸಂದರ್ಭಗಳಲ್ಲಿ ಮಾತ್ರವಲ್ಲ ರಾಷ್ಟ್ರೀಯತೆ ಮತ್ತು ಬಲಿದಾನಕ್ಕೆ ಪ್ರಾಮುಖ್ಯತೆ ತಂದುಕೊಡುವಲ್ಲೂ ಪ್ರಾಣತ್ಯಾಗ ಮಾಡಿದವರು ಅವರೇ.

ಅವರ ಜೀವನ ಅಪಾಯದಲ್ಲಿದೆ ಮತ್ತು ಅವರ ಮೇಲೆ ಛತ್ತೀಸ್‌ಗಡದಿಂದ ಅಸ್ಸಾಂ, ಮಣಿಪುರ ಕಾಶ್ಮೀರದ ವರೆಗೂ ದಾಳಿಗಳು ನಡೆದ ಬಹಳಷ್ಟು ಘಟನೆಗಳು ಇವೆ. ತಾವು ಸೇವೆ ಸಲ್ಲಿಸುತ್ತಿರುವ ಭೂಮಿಯಲ್ಲಿ ಜೀವಿಸುತ್ತಿರುವ ಸಾಮಾನ್ಯ ಜನರನ್ನು ರಕ್ಷಿಸುವ ಸಲುವಾಗಿ ಸೈನಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಅತ್ಯಂತ ತೀವ್ರ ಸ್ವರೂಪದ ಮಾನವ ಹಕ್ಕುಗಳನ್ನು ಸೈನಿಕರು ಉಲ್ಲಂಘನೆ ಮಾಡಿದ ವರದಿಗಳೂ ಬಹಳಷ್ಟಿವೆ. ಅಫ್ಸ್ಪಾ ಕಾಯ್ದೆ ಹೇರಿರುವ ಪ್ರದೇಶಗಳಲ್ಲಿ ಇಂಥಾ ಮಾನವಹಕ್ಕು ಉಲ್ಲಂಘನೆ ಪ್ರಕರಣಗಳು ಸಾಮಾನ್ಯವಾಗಿದ್ದು ಅದು ಚಿತ್ರಹಿಂಸೆಯಿಂದ ಹಿಡಿದು ಅತ್ಯಾಚಾರ ಮತ್ತು ನಕಲಿ ಹತ್ಯೆಯವರೆಗೂ ಸಾಗುತ್ತದೆ. ಭಾರತ ಸರಕಾರದ ಭದ್ರತಾ ವಿಭಾಗ ಈ ಉಲ್ಲಂಘನೆಗಳನ್ನು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ ಮತ್ತು ತಮ್ಮ ಸೈನಿಕರು ಮುಗ್ಧರು ಅವರೇನೂ ತಪ್ಪು ಮಾಡಿಲ್ಲ ಎಂದು ವಾದಿಸುತ್ತಾರೆ. ಆದರೆ, ಸರಕಾರವೇ ನಿಯೋಜಿಸಿದ ಸಮಿತಿ ನಡೆಸಿದ ಬಹಳಷ್ಟು ತನಿಖೆಗಳಲ್ಲೂ ಕೂಡಾ ಆರೋಪಿ ಸೈನಿಕರು ತಪ್ಪಿತಸ್ಥರು ಎಂದು ಸಾಬೀತಾಗಿದೆ, ಆದರೆ ಅವರು ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ಮತ್ತು ಅಫ್ಸ್ಪಾದ ಅಡಿಯಲ್ಲಿ ಬರುವುದರಿಂದ ನಾಗರಿಕ ನ್ಯಾಯಾಲಯದಲ್ಲಿ ಅವರನ್ನು ಯಾವುದೇ ಶಿಕ್ಷೆಗೆ ಒಳಪಡಿಸಲಾಗಿಲ್ಲ. 2015ರಲ್ಲಿ 77 ಸೈನಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು 2016ರ ಮೇ 2ರಂದು ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಲೋಕಸಭೆಯಲ್ಲಿ ತಿಳಿಸಿದ್ದರು. 2014ರಲ್ಲಿ ಈ ಸಂಖ್ಯೆ 84 ಆಗಿದ್ದರೆ 2013ರಲ್ಲಿ 86 ಆಗಿತ್ತು. ಈ ಮೂರು ವರ್ಷಗಳಲ್ಲಿ ಸೇನೆಯ ಒಳಗೆಯೇ ಪರಸ್ಪರರನ್ನು ಹತ್ಯೆ ಮಾಡಿದ ಒಂಬತ್ತು ಪ್ರಕರಣಗಳು ಸಂಭವಿಸಿವೆ ಎಂದು ಪಾರಿಕ್ಕರ್ ಹೇಳುತ್ತಾರೆ. ನೌಕಾಪಡೆಯಲ್ಲಿ ಇಂಥಾ ಯಾವುದೇ ಘಟನೆಗಳು ಸಂಭವಿ ಸಿಲ್ಲ ಮತ್ತು ವಾಯುಪಡೆಯಲ್ಲಿ ಒಂದು ಘಟನೆ ನಡೆದಿದೆ ಎಂದವರು ತಿಳಿಸಿದ್ದಾರೆ. ಸರಕಾರವು ಇಂಥಾ ಘಟನೆಗಳನ್ನು ತಡೆಯಲು ಮತ್ತು ಸೈನಿಕರ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಪರಿಕ್ಕರ್ ತಿಳಿಸಿದ್ದಾರೆ. ಇಂಥಾ ಕೆಲವು ಕ್ರಮಗಳೆಂದರೆ, ಉತ್ತಮ ಸೌಲಭ್ಯ ಮತ್ತು ಸೌಕರ್ಯಗಳನ್ನು ಒದಗಿಸುವ ಮೂಲಕ ವಾಸ್ತವ್ಯ ಮತ್ತು ಕೆಲಸದ ವಾತಾವರಣವನ್ನು ಉತ್ತಮಗೊಳಿಸುವುದು, ಹೆಚ್ಚುವರಿ ಕುಟುಂಬ ಸದಸ್ಯರಿಗೆ ಅವಕಾಶ, ರಜೆ ಪಡೆಯುವ ಸ್ವಾತಂತ್ರ್ಯ, ಕಷ್ಟಗಳನ್ನು ಆಲಿಸುವ ವ್ಯವಸ್ಥೆಯ ನಿರ್ಮಾಣ, ಮನಃಶಾಸ್ತ್ರಜ್ಞರ ಮೂಲಕ ಸಲಹೆ ಸೂಚನೆಗಳಿಗೆ ಅವಕಾಶ, ಯೋಗಾ ಮತ್ತು ಧ್ಯಾನ ಇತ್ಯಾದಿಗಳು. ಒಪ್ಪಿಗೆಯೊಂದಿಗೆ ಒಂದು ಅಂಶ ಸ್ಪಷ್ಟವಾಗುವುದೇನೆಂದರೆ, ಸೈನಿಕರು ತಮ್ಮನ್ನು ಆತ್ಮಹತ್ಯೆಗೈಯ್ಯಲು ಮತ್ತು ತಮ್ಮ ಸಹೋದ್ಯೋಗಿಗಳನ್ನು ಹತ್ಯೆ ಮಾಡಲು ಪ್ರೇರೇಪಿಸುವಂಥಾ ಜೀವನಪದ್ಧತಿಗೆ ಒಳಪಟ್ಟಿದ್ದಾರೆ. ಹಾಗಾದರೆ, ಇದೇ ಒತ್ತಡ ಇತರರನ್ನು ಕೊಲ್ಲಲು ಕೂಡಾ ಪ್ರೇರೇಪಿಸುತ್ತದೆ ಎಂಬುದನ್ನು ಒಪ್ಪಲು ಕಷ್ಟವಾಗುವುದಾದರೂ ಯಾಕೆ? ಮತ್ತೆ ಈ ‘ಇತರರು’ ಜಮ್ಮು ಕಾಶ್ಮೀರದಲ್ಲೋ ಅಥವಾ ಈಶಾನ್ಯ ಭಾಗದಲ್ಲೋ ಪ್ರತಿಭಟನೆ ನಡೆಸುತ್ತಿರುವ ಜನರು ಯಾಕಾಗಿರಬಾರದು, ಇಂಥಾ ಪ್ರದೇಶಗಳಲ್ಲಿ ಹಾಗೆ ಮಾಡುವುದು ಅವರಿಗೆ ನೀಡಿರುವ ಅಧಿಕಾರದ ವ್ಯಾಪ್ತಿಗೇ ಬರುತ್ತದೆ. ನಾವು ಭದ್ರತಾ ಪಡೆಯ ಕರ್ತವ್ಯದ ವೇಳೆ ಮರಣ ಪ್ರಮಾಣವನ್ನು ಗಮನಿಸಿದಾಗ (ಆತ್ಮಹತ್ಯೆ ಅಥವಾ ಪರಸ್ಪರ ಹತ್ಯೆಯಲ್ಲ) 2013, 2014 ಮತ್ತು 2015ರಲ್ಲಿ ಕ್ರಮವಾಗಿ 193, 161 ಮತ್ತು 155 ಭದ್ರತಾ ಸಿಬ್ಬಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ದಾಖಲೆಯು ಅರೆಸೈನಿಕಪಡೆ ಸೇರಿದಂತೆ ಎಲ್ಲಾ ಭದ್ರತಾ ವಿಭಾಗಗಳ ಸಿಬ್ಬಂದಿಯನ್ನು ಒಳಗೊಂಡಿದೆ. ಎರಡೂ ಅಂಕಿಅಂಶಗಳನ್ನು ಗಮನಿಸಿದಾಗ ಭಾರತವು ಯಾವುದೇ ಯುದ್ಧವಿಲ್ಲದೆಯೇ ತಮ್ಮ ಅರ್ಧದಷ್ಟು ಸೈನಿಕರನ್ನು ರೋಗಗ್ರಸ್ಥ ವ್ಯವಸ್ಥೆಯಿಂದಾಗಿ ಕಳೆದುಕೊಳ್ಳುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಜಗತ್ತಿನ ಅತ್ಯಂತ ಬೃಹತ್ ಸೇನಾಪಡೆಯನ್ನು ಹೊಂದಿರುವ ಭಾರತ ಸೈನಿಕರ ಈ ಪರಿಸ್ಥಿತಿ ಸೇನಾಪಡೆಯನ್ನು ಇನ್ನೂ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂಬುದನ್ನು ಸೂಚಿಸುತ್ತದೆ.

ಸರಕಾರವು ಸೇನಾ ಸಿಬ್ಬಂದಿಯನ್ನು ನೇಮಿಸುವ ಪ್ರಕ್ರಿಯೆ ಮೇಲೆ ಗಮನಹರಿಸಬೇಕು ಮತ್ತು ಅವರಿಗೆ ಸೌಲಭ್ಯಗಳನ್ನು ಒದಗಿಸುವಾಗ ಮಾನವೀಯ ದೃಷ್ಟಿಕೋನವನ್ನು ಬೆಳೆಸಬೇಕು. ಸೇನೆಯ ಒಳಗೆ ಇಷ್ಟು ಬೃಹತ್ ಪ್ರಮಾಣದಲ್ಲಿ ಆತ್ಮಹತ್ಯೆಗಳು ನಡೆಯುತ್ತಿದ್ದರೆ ಅದೇ ಒಂದು ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ. ಸೈನಿಕರಲ್ಲಿ ಆತ್ಮಹತ್ಯೆಯ ತೀವ್ರತೆ ಯನ್ನು ಉಂಟುಮಾಡುತ್ತಿರುವ ಅಂಶಗಳೇ ಆತಂಕದ ವಿಷಯವಾಗಿದೆ. ಇಷ್ಟೊಂದು ತೀವ್ರತೆ ಹೊಂದಿರುವ ಸೈನಿಕರು ತಮ್ಮ ಒತ್ತಡವನ್ನು ಕಡಿಮೆ ಮಾಡಲು ಮುಗ್ಧರನ್ನು ಗುರಿಮಾಡುವ ಸಾಧ್ಯತೆಗಳೂ ಇವೆ. 
ಕೃಪೆ: countercurrents.org

share
ರವಿ ನಿತೇಶ್
ರವಿ ನಿತೇಶ್
Next Story
X