ಮರಣದಂಡನೆ ಘೋಷಿಸಲ್ಪಟ್ಟ ಪ್ರತಿ ಮೂವರಲ್ಲೊಬ್ಬ ಬಿಡುಗಡೆಗೊಂಡಿದ್ದಾನೆ
ಅಧ್ಯಯನ ವರದಿ ಬಹಿರಂಗ
ಹೊಸದಿಲ್ಲಿ, ಮೇ 7: ವಿಚಾರಣಾ ನ್ಯಾಯಾಲಯಗಳು ಘೋಷಿಸುವ ಪ್ರತಿ 100 ಮರಣದಂಡನೆಗಳಲ್ಲಿ 5ಕ್ಕಿಂತಲೂ ಕಡಿಮೆ ಪ್ರಕರಣಗಳನ್ನಷ್ಟೇ ಉನ್ನತ ನ್ಯಾಯಾಲಯಗಳು ಎತ್ತಿ ಹಿಡಿಯುತ್ತವೆ. ಉಳಿದ ಸುಮಾರು ಶೇ.30ರಷ್ಟು ಕೈದಿಗಳು ಖುಲಾಸೆಗೊಳ್ಳುತ್ತಾರೆ. ಉಳಿದವರ ಶಿಕ್ಷೆಯನ್ನು ಕಡಿಮೆಗೊಳಿಸಲಾಗುತ್ತದೆ. ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಹೊಟ್ಟೆಯೊಳಗೆ ಸಿಲುಕಿ, ಮರಣ ದಂಡನೆಗೆ ಗುರಿಯಾದವರಿಗೆಲ್ಲ ಏನಾಗುತ್ತದೆ? ಸ್ವಾತಂತ್ರಾನಂತರ ಎಷ್ಟು ಜನರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆಯೆಂದು ದಾಖಲೆ ಯಾವುದೇ ಸಚಿವಾಲಯ ಅಥವಾ ಸಂಸ್ಥೆಯಲ್ಲಿಲ್ಲ.
ಮರಣದಂಡನೆ ವಿಧಿಸಲ್ಪಟ್ಟವರ ಬಗ್ಗೆ ದಿಲ್ಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯ ನಡೆಸಿರುವ ‘ಮರಣ ದಂಡನೆ ಯೋಜನೆ’ ಕುರಿತ ಅಧ್ಯಯನ ವರದಿಯು ಈ ಅಂಕಿ ಅಂಶಗಳನ್ನು ಬಹಿರಂಗಪಡಿಸಿದೆ. ಗಲ್ಲುಶಿಕ್ಷೆಗೆೆ ಗುರಿಯಾದವರ ಜೀವನವನ್ನು ನಿಕಟವಾಗಿ ಕಂಡ ಮಾಹಿತಿಯನ್ನು ಸಂಗ್ರಹಿಸಿದೆ ಹಾಗೂ ನೂರಾರು ಮರಣ ದಂಡನೆ ಕೈದಿಗಳನ್ನು ಮತ್ತವರ ಕುಟುಂಬಗಳನ್ನು ಅಧ್ಯಯನ ತಂಡ ಸಂದರ್ಶಿಸಿದೆ.
ಯೋಜನೆಯು, ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಚಿತ್ತ ಚಾಂಚಲ್ಯ, ಕೈದಿಗಳ ಪರಿಸ್ಥಿತಿ ಹಾಗೂ ಒಂದು ಸಂಸ್ಥೆಯಾಗಿ ಪೊಲೀಸ್‌ನ ಬರ್ಬರತೆಗಳನ್ನು ಪರಿಶೀಲಿಸಿದೆ. ತಪ್ಪೊಪ್ಪಿಗೆ ಪಡೆಯಲು ಕೈದಿಗಳಿಗೆ ಚಿತ್ರಹಿಂಸೆ ಹಾಗೂ ಕುಟುಂಬಗಳಿಗೆ ಬೆದರಿಕೆ ಮಾಮೂಲಾಗಿರುತ್ತದೆ. ಆದರೆ, ತಾವು ಬದುಕಬೇಕೇ ಅಥವಾ ಸಾಯಬೇಕೇ ಎಂಬುದನ್ನು ಅತಿ ದೀರ್ಘ ಕಾಯುವಿಕೆಯು ಕೈದಿಗಳನ್ನು ಹೇಗೆ ಸರ್ವನಾಶಗೊಳಿಸುತ್ತದೆಂಬುದು ಇಲ್ಲ ಪ್ರಶ್ನೆಯಾಗಿರುತ್ತದೆ. ಈ ಅನಿಶ್ಚತತೆಯು ಇತರ ಯಾವುದೇ ರೀತಿಯ ಶಿಕ್ಷೆಗೂ ಹೋಲಿಕೆಯಿಲ್ಲದುದಾಗಿದೆ ಎಂದು ಸುರೇಂದ್ರ ನಾಥ್ ಹೇಳುತ್ತಾರೆ.
ಮೊದಲ ವಿಚಾರಣಾ ನ್ಯಾಯಾಲಯದ ಶಿಕ್ಷೆ ಘೋಷಣೆಯಿಂದ ಹಿಡಿದು ಕೊನೆಯ ಮೇಲ್ಮನವಿಯವರೆಗೆ ಸಾವಿಗಾಗಿ ಕಾಯುವುದು ಒಂದು ಪ್ರತ್ಯೇಕ ಚಿತ್ರಹಿಂಸೆಯಾಗಿದೆ. ಮರಣದಂಡನೆ ಜಾರಿಗೆ ಅಸಾಮಾನ್ಯ ವಿಳಂಬವು ಶಿಕ್ಷೆಯನ್ನು ತಗ್ಗಿಸಿಲು ನೆಲೆಯಾಗುತ್ತದೆಯೇ ಎಂಬ ಕುರಿತು 1980ರಿಂದೀಚೆಗೆ ಸತತ ಕಾನೂನು ಹೋರಾಟಗಳು ನಡೆಯುತ್ತ ಬಂದಿವೆ. ದಯಾ ಅರ್ಜಿಯನ್ನು ಸಲ್ಲಿಸಿದವರು ಆಶೆ ಹಾಗೂ ಭೀತಿಯ ಇಕ್ಕಳದಲ್ಲಿ ನಲುಗುತ್ತಿರುತ್ತಾರೆ. ತಮ್ಮ ಭವಿಷ್ಯದ ಬಗ್ಗೆ ಅತಂತ್ರದಲ್ಲಿಯೇ ದಿನಗಳೆಯುತ್ತಾರೆಂದು ವರದಿ ಹೇಳಿದೆ.







