ಕೌಶಲಾಭಿವೃದ್ಧಿ: ಭಾರತ ಮತ್ತು ಯುಎಇ ನಡುವೆ ಒಡಂಬಡಿಕೆಗೆ ಅಂಕಿತ

ಹೊಸದಿಲ್ಲಿ,ಮೇ 7:ಕೌಶಲಾಭಿವೃದ್ಧಿ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸಲು ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು ಶನಿವಾರ ಸಂಯುಕ್ತ ಅರಬ್ ಗಣರಾಜ್ಯ(ಯುಎಇ)ದ ರಾಷ್ಟ್ರೀಯ ಅರ್ಹತಾ ಪ್ರಾಧಿಕಾರದೊಂದಿಗೆ ಒಡಂಬಡಿಕೆಯೊಂದಕ್ಕೆ ಸಹಿ ಮಾಡಿತು.
ಈ ಕ್ರಮವು ತರಬೇತಾದ ಮತ್ತು ನುರಿತ ಕಾರ್ಮಿಕರಿಗೆ ವಿದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳಲು ಸುಗಮ ಮಾರ್ಗವನ್ನು ಕಲ್ಪಿಸುತ್ತದೆ ಮತ್ತು ಇನ್ನೊಂದೆಡೆ ಯುಎಇಯಲ್ಲಿನ ಕಾರ್ಯಪಡೆ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಎಂದು ಸಚಿವಾಲಯದ ಹೇಳಿಕೆಯು ತಿಳಿಸಿದೆ.
ಉಭಯ ರಾಷ್ಟ್ರಗಳ ನಡುವಿನ ಈ ಸಹಭಾಗಿತ್ವದ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಕೌಶಲಾಭಿವೃದ್ಧಿ ಸಚಿವ ರಾಜೀವ ಪ್ರತಾಪ ರುಡಿ ಅವರು,ಇದು ಉಭಯ ರಾಷ್ಟ್ರಗಳ ಉತ್ಪಾದಕತೆಯನ್ನು ಹೆಚ್ಚಿಸಲಿದೆ ಎಂದರು.
ಅರ್ಹತೆ ಮತ್ತು ಪ್ರಮಾಣೀಕರಣ ವ್ಯವಸ್ಥೆಯ ಪರಸ್ಪರ ಮಾನ್ಯತೆಯ ನಿಟ್ಟಿನಲ್ಲಿ ಶ್ರಮಿಸಲು ಉಭಯ ದೇಶಗಳ ಪ್ರತಿನಿಧಿಗಳನ್ನೊಳಗೊಂಡ ಜಂಟಿ ಕಾರ್ಯ ಸಮಿತಿಯೊಂದನ್ನು ಸಹ ರಚಿಸಲಾಗಿದೆ.
Next Story





