ಕಿಂಗ್ಸ್ ಇಲೆವೆನ್‌ಗೆ 9 ರನ್‌ಗಳ ರೋಚಕ ಜಯ
ಸ್ಟೋನಿಸ್ ಪ್ರಹಾರದ ಮುಂದೆ ಡೆಲ್ಲಿ ಡಲ್

ಮೊಹಾಲಿ, ಮೇ 7: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್‌ನ 36ನೆ ಪಂದ್ಯದಲ್ಲಿ ಇಂದು ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ 9 ರನ್‌ಗಳ ರೋಚಕ ಜಯ ದಾಖಲಿಸಿದೆ.
ಗೆಲುವಿಗೆ 182 ರನ್ ಗಳಿಸಬೇಕಿದ್ದ ಡೆಲ್ಲಿ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 172 ರನ್ ಗಳಿಸಿತು.
ಆರಂಭಿಕ ದಾಂಡಿಗರಾದ ಕ್ವಿಂಟನ್ ಡಿ ಕಾಕ್ 52 ರನ್(30ಎ, 6ಬೌ,2ಸಿ), ಸಂಜು ಸ್ಯಾಮ್ಸನ್ 49 ರನ್(35ಎ, 4ಬೌ,1ಸಿ), ಕೆ.ಕೆ.ನಾಯರ್ 23 ರನ್, ಬಿಲ್ಲಿಂಗ್ಸ್ 6ರನ್, ಬ್ರಾಥ್‌ವೈಟ್ 12 ರನ್, ಕ್ರಿಸ್ ಮೊರೀಸ್ ಔಟಾಗದೆ 17ರನ್ ಮತ್ತು ರಿಶಬ್ ಪಂತ್ ಔಟಾಗದೆ 4 ರನ್ ಗಳಿಸಿದರು.
ಕಿಂಗ್ಸ್ ಇಲೆವೆನ್ ಪಂಜಾಬ್ 181/5:ವೃದ್ದಿಮಾನ್ ಸಹಾ ಮತ್ತು ಮಾರ್ಕೂಸ್ ಸ್ಟೋನಿಸ್ ದಾಖಲಿಸಿದ ಅರ್ಧಶತಕಗಳ ನೆರವಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 181 ರನ್ ಗಳಿಸಿತ್ತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ನಾಯಕ ಮುರಳಿ ವಿಜಯ್ ( 25ರನ್, 16ಎ,4ಬೌ) ಅವರು ಸ್ಟೋನಿಸ್ ಜೊತೆಗೆ ಉತ್ತಮ ಆರಂಭ ನೀಡಿದ್ದರು. ಇವರು ಮೊದಲ ವಿಕೆಟ್‌ಗೆ 5.4 ಓವರ್‌ಗಳಲ್ಲಿ 45 ರನ್ ಕಲೆ ಹಾಕಿದ್ದರು.
ಹಾಶಿಮ್ ಅಮ್ಲ(1) ಬೇಗನೆ ನಿರ್ಗಮಿಸಿದ್ದರು. ಬಳಿಕ ಸಹಾ 33 ಎಸೆತಗಳಲ್ಲಿ 7 ಬೌಂಡರಿ ಸಹಾಯದಿಂದ 52 ರನ್ ಮತ್ತು ಸ್ಟೋನಿಸ್ 44 ಎಸೆತಗಳಲ್ಲಿ 52 ರನ್( 3ಬೌ,2ಸಿ) ಗಳಿಸಿದರು. ಮೂರನೆ ವಿಕೆಟ್‌ಗೆ ಇವರು 58 ರನ್ ಸೇರಿಸಿದರು.
ಗ್ಲೆನ್ ಮ್ಯಾಕ್ಸ್‌ವೆಲ್ 16 ರನ್, ಡೇವಿಡ್ ಮಿಲ್ಲರ್ ಔಟಾಗದೆ 11 ರನ್ ಮತ್ತು ಅಕ್ಷರ್ ಪಟೇಲ್ ಔಟಾಗದೆ 16 ರನ್ ಗಳಿಸಿ ಸ್ಕೋರ್‌ನ್ನು 20 ಓವರ್‌ಗಳಲ್ಲಿ 181ಕ್ಕೆ ಏರಿಸಲು ನೆರವಾದರು.
ಡೆಲ್ಲಿ ತಂಡದ ಕ್ರಿಸ್ ಮೋರಿಸ್ 30ಕ್ಕೆ 2 ವಿಕೆಟ್, ಮುಹಮ್ಮದ್ ಶಮಿ ಮತ್ತು ಝಹೀರ್ ಖಾನ್ ತಲಾ 1 ವಿಕೆಟ್ ಹಂಚಿಕೊಂಡರು.





