ನಿದ್ರೆ ಕಡಿಮೆಯಾದರೆ ಅಪಾಯ, ಹೆಚ್ಚಾದರೆ ಇನ್ನೂ ಅಪಾಯ
ನಿಜವಾಗಿ ನಮಗೆಷ್ಟು ನಿದ್ರೆ ಬೇಕು?

ನಮ್ಮಲ್ಲಿ ಅನೇಕರಿಗೆ ಸಾಕಷ್ಟು ನಿದ್ದೆ ಸಿಗುವುದಿಲ್ಲ ಎಂದುಕೊಳ್ಳುತ್ತೇವೆ. ಪ್ರತೀ ದಿನ ಎಂಟು ಗಂಟೆಯೂ ನಿದ್ದೆ ಮಾಡಲು ಸಿಗಬೇಕು ಎನ್ನುತ್ತೇವೆ. ಇವೆರಡೂ ಸುಳ್ಳು.
ಕಳೆದ ಕೆಲವು ದಶಕಗಳಲ್ಲಿ ಹಲವಾರು ಅಧ್ಯಯನಗಳು ಮನುಷ್ಯರಿಗೆ ಈಗ ನಿಗಧಿ ಮಾಡಿರುವುದಕ್ಕಿಂತ ಕಡಿಮೆ ನಿದ್ದೆ ಬೇಕಾಗುತ್ತದೆ ಎಂದು ಹೇಳಿದೆ. ನಮ್ಮ ಪೂರ್ವಜರು ನಮ್ಮೆಲ್ಲರಿಗಿಂತ ಕಡಿಮೆ ನಿದ್ದೆ ಮಾಡುತ್ತಿದ್ದರು. ತಾಂಜಾನಿಯ, ನಮೀಬಿಯ ಮತ್ತು ಬೊಲಿವಿಯದ ಔದ್ಯಮಿಕ ಯುಗಕ್ಕಿಂತ ಮೊದಲಿನ ಸಮಾಜ ಕಡಿಮೆ ನಿದ್ದೆ ಮಾಡುತ್ತಿದ್ದುದು ಕಂಡು ಬಂದಿದೆ. ಎರಡೂ ಖಂಡಗಳಲ್ಲೂ 5.7ರಿಂದ 7.1 ಗಂಟೆಗಳಷ್ಟು ನಿದ್ದೆ ಕಂಡುಬಂದಿದೆ. ಮೂರು ಪುರಾತನ ಜನಾಂಗದವರಾದ ಬೊಲಿವಿಯ, ತಾಂಜಾನಿಯದ ಹಡ್ಜಾ ಬೇಟೆಗಾರರು ಮತ್ತು ನಮೀಬಿಯದ ಬುಡಕಟ್ಟು ಜನಾಂಗದವರನ್ನು ಅಧ್ಯಯನ ಮಾಡಿದರೆ ಅವರು ಸೂರ್ಯಾಸ್ತವಾದ ಬಹಳ ನಂತರ ಮಲಗಿ, ಸೂರ್ಯೋದಯಕ್ಕೆ ಮೊದಲು ಏಳುತ್ತಿದ್ದರು. ಚಳಿಗಾಲದಲ್ಲಿ ಸ್ವಲ್ಪ ಜಾಸ್ತಿ ನಿದ್ದೆ ಮಾಡುತ್ತಿದ್ದರು. ಇನ್ಸೋಮಿಯ ಅಥವಾ ನಿದ್ರಾರಾಹಿತ್ಯ ರೋಗದ ಬಗ್ಗೆ ಸಾಕಷ್ಟು ಬರೆಯಲಾಗಿದೆ. ಖಿನ್ನತೆ, ಕಾತುರತೆ, ಹೃದಯ ರೋಗ, ಮಧುಮೇಹ, ಸೋಂಕುಗಳು, ಕ್ಯಾನ್ಸರ್ ಮೊದಲಾದ ರೋಗ ನಿದ್ರೆ ಇಲ್ಲದೆ ಬರುತ್ತದೆ ಎನ್ನಲಾಗುತ್ತದೆ. ಆದರೆ ಅತಿಯಾದ ನಿದ್ದೆಯೂ ಅಷ್ಟೇ ಅಪಾಯಕಾರಿ.
ಒಬ್ಬ ವ್ಯಕ್ತಿಗೆ ಸರಾಸರಿ ಎಷ್ಟು ನಿದ್ದೆ ಬೇಕು? ಅಮೆರಿಕ ನಿದ್ದೆ ಫೌಂಡೇಶನ್ 7ರಿಂದ 9 ಗಂಟೆ ಎನ್ನುತ್ತದೆ. ಆರೋಗ್ಯಕರ ವಯಸ್ಕರಿಗೆ 7 ಗಂಟೆ ನಿದ್ದೆ ಸಾಕು. 6.5 ಗಂಟೆಗಿಂತ ಕಡಿಮೆ ನಿದ್ದೆ ಮಾಡುವುದು ಮತ್ತು 7.5 ಗಂಟೆಗಿಂತ ಹೆಚ್ಚು ನಿದ್ದೆ ಮಾಡುವುದು ಅಪಾಯಕಾರಿ ಮತ್ತು ರೋಗಗಳಿಗೆ ಕಾರಣವಾಗಲಿದೆ. ಅಧ್ಯಯನದಲ್ಲಿ ಕಂಡು ಬಂದಿರುವ ಪ್ರಕಾರ 8 ಗಂಟೆಗಳಿಗಿಂತ ಹೆಚ್ಚು ನಿದ್ದೆ ಮಾಡಿದವರು ಮತ್ತು 4 ಗಂಟೆಗಳಿಗಿಂತ ಕಡಿಮೆ ನಿದ್ದೆ ಮಾಡಿದವರಲ್ಲಿ ಸಾವಿನ ಸಂಖ್ಯೆ ಅಧಿಕವಿದೆ. 5 ಅಥವಾ ಅದಕ್ಕಿಂತ ಹೆಚ್ಚು ನಿದ್ದೆ ಮಾಡಿದವರು 8 ಗಂಟೆ ಮೀರಿ ನಿದ್ದೆ ಮಾಡಿದವರಿಗಿಂತ ಹೆಚ್ಚು ಆರೋಗ್ಯವಂತರಾಗಿರುವುದು ಕಂಡು ಬಂದಿದೆ. ಅಲ್ಲದೆ 7 ಗಂಟೆ ನಿದ್ದೆ ಮಾಡಿದವರು ಹೆಚ್ಚು ಧೀರ್ಘ ಕಾಲ ಜೀವಿಸಿದ್ದಾರೆ.
ತೂಕ ಏರುವುದು ಮತ್ತು ಹೃದಯ ರೋಗ
ಅತಿಯಾಗಿ ನಿದ್ದೆ ಮಾಡಿದರೆ ತೂಕ ಹೆಚ್ಚಾಗುತ್ತದೆ. ನಿದ್ದೆ ಮಾಡಿದಾಗ ಹೆಚ್ಚು ಕ್ಯಾಲರಿಗಳು ಇಳಿಯುವುದಿಲ್ಲ. ಒಂಭತ್ತರಿಂದ ಹತ್ತು ಗಂಟೆ ನಿದ್ದೆ ಮಾಡುವವರು ಸರಾಸರಿ ಇತರರಿಗಿಂತ 5 ಕೇಜಿ ಹೆಚ್ಚು ತೂಕವಿರುತ್ತಾರೆ. ಅತಿಯಾದ ನಿದ್ದೆ ವೈಸರಲ್ ಕೊಬ್ಬು ತರುತ್ತದೆ. ಅದು ಹೊಟ್ಟೆಯ ಸುತ್ತ ಆಂತರಿಕ ಅಂಗಗಳಾದ ಯಕೃತ್ತು, ಮೇದೋಜೀರಕ ಗ್ರಂಥಿ ಮತ್ತು ಕರುಳಿನಲ್ಲಿ ಇರುತ್ತದೆ. ಈ ಹೊಟ್ಟೆ ಕೊಬ್ಬು ಹಾರ್ಮೋನ್ ಕ್ರಿಯೆ ಮೇಲೆ ಪರಿಣಾಮ ಬೀರಿ ಚಯಾಪಚಯ ಅಸ್ತವ್ಯಸ್ತ ಮಾಡುತ್ತದೆ. ಹೀಗಾಗಿ ಕೊಲೆಸ್ಟರಾಲ್, ಮಧುಮೇಹ, ಹೃದಯ ರೋಗ ಇತ್ಯಾದಿ ಬರುತ್ತದೆ. ರಾತ್ರಿ 9ರಿಂದ 11 ಗಂಟೆ ಮಲಗುವ ಮಹಿಳೆಯರಿಗೆ 8 ಗಂಟೆಗಿಂತ ಕಡಿಮೆ ಮಲಗುವ ಮಹಿಳೆಯರಿಗೆ ಹೋಲಿಸಿದಲ್ಲಿ ಶೇ 38 ಹೆಚ್ಚು ಹೃದಯ ರೋಗ ಬರುವ ಸಾಧ್ಯತೆಯಿದೆ ಎಂದು ಅಮೆರಿಕದ ಅಧ್ಯಯನ ಹೇಳಿದೆ. ಈ ಅಧ್ಯಯನಕ್ಕಾಗಿ 20 ವರ್ಷಗಳ ಕಾಲ 72,000 ಪ್ರತಿನಿಧಿಗಳನ್ನು ವಿಶ್ಲೇಷಿಸಲಾಗಿದೆ.
ಮಧುಮೇಹ
7 ಗಂಟೆಗಿಂತ ಕಡಿಮೆ ಮತ್ತು 8 ಗಂಟೆಗಿಂತ ಹೆಚ್ಚು ಮಲಗಿದಲ್ಲಿ ಮಧುಮೇಹ ಬರುವ ಸಾಧ್ಯತೆ ಅಧಿಕ. ಆರು ವರ್ಷಗಳ ಕಾಲ ನಡೆದ ಅಧ್ಯಯನದಲ್ಲಿ ಶೇ 20ರಷ್ಟು ಧೀರ್ಘ-ಕಡಿಮೆ ನಿದ್ದೆ ಮಾಡುವವರಿಗೆ ಟೈಪ್ 2 ಮಧುಮೇಹ ಅಥವಾ ಗ್ಲುಕೋಸ್ ಪ್ರಮಾಣದಲ್ಲಿ ಏರುಪೇರು ಇರುವುದು ಕಂಡು ಬಂದಿದೆ.
ಮೆದುಳು ಕುಸಿತ
ದಿನಕ್ಕೆ 7 ಗಂಟೆ ನಿದ್ದೆ ಮಾಡುವವರ ಮೆದುಳು ಹರಿತವಾಗಿರುತ್ತದೆ. ಆದರೆ 9 ಗಂಟೆಗೂ ಮೇಲು ಅಥವಾ ಕಡಿಮೆ ನಿದ್ದೆ ಮಾಡುವವರ ಮೆದುಳಿನ ಕಾರ್ಯ ಕುಸಿಯುತ್ತದೆ. ಈ ಅಧ್ಯಯನಕ್ಕಾಗಿ ಮಹಿಳೆಯರನ್ನು 25 ವರ್ಷಗಳ ಕಾಲ ಅಧ್ಯಯನ ಮಾಡಲಾಗಿದೆ. ಏಳು ಗಂಟೆ ನಿದ್ದೆ ಮಾಡಿದವರಿಗೆ ಹೋಲಿಸಿದಲ್ಲಿ ಐದು ಗಂಟೆಗಳಿಗಿಂತ ಕಡಿಮೆ ಅಥವಾ 9ಗಂಟೆಗೆ ಮೇಲೆ ನಿದ್ದೆ ಮಾಡಿದವರಿಗೆ ಮೆದುಳಿನ ಶಕ್ತಿ ದುರ್ಬಲವಾಗಿರುವುದು ಕಂಡಿದೆ.
ಉತ್ತಮ ನಿದ್ದೆಗೆ ಐದು ಹಂತ
►ನಿದ್ದೆಯ ಸಮಯ ಮತ್ತು ಏಳುವ ಸಮಯವನ್ನು ಸರಿಯಾಗಿ ನಿಗದಿ ಮಾಡಿ. ಕಳೆದು ಹೋದ ನಿದ್ದೆಗಾಗಿ ಏಳುವುದು ತಡ ಮಾಡಬೇಡಿ.
►ಆರಾಮವಾಗಿರುವ ಬೆಡ್ ಟೈಮ್ ವಿಧಿ ಹಾಕಿಕೊಳ್ಳಿ. ಪುಸ್ತಕ ಓದುವುದು, ಸಂಗೀತ ಆಲಿಸುವುದು ಉತ್ತಮ. ಟಿವಿ ನೋಡುವುದು, ಸ್ಮಾರ್ಟ್ ಫೋನ್ ಬಳಕೆ, ಇಬುಕ್ ಓದುವುದು ಇತ್ಯಾದಿ ಬೇಡ.
► 15ರಿಂದ 20 ನಿಮಿಷಗಳ ಒಳಗೆ ನಿದ್ದೆ ಬಾರದೆ ಇದ್ದಲ್ಲಿ ಮತ್ತೊಂದು ಕೋಣೆಗೆ ಹೋಗಿ. ನಿದ್ದೆ ಬಂದಾಗಲಷ್ಟೇ ಮಂಚದ ಬಳಿ ಬನ್ನಿ.
► ಸಾಧ್ಯವಾದರೆ ಒತ್ತಡದ ಕೆಲಸಗಳನ್ನು ದಿನದ ಆರಂಭಕ್ಕೆ ಇಡಿ. ಕಡಿಮೆ ಸವಾಲಿನ ಕೆಲಸ ನಂತರ ಮಾಡಿ.
► ರಾತ್ರಿ ಭರಪೂರ ಊಟ ಬೇಡ.
ಕೃಪೆ: www.hindustantimes.com







