ಅಣ್ಣಾ ಹಝಾರೆ ವಿರುದ್ಧ ತಿರುಗಿ ಬಿದ್ದ ಗ್ರಾಮಸ್ಥರು

ರಾಳೇಗಾಂವ್ ಸಿದ್ದಿ, ಮೇ 8: ಸಾಮಾಜಿಕ ಹೋರಾಟಗಾರ ಅಣ್ಣಾ ಹಝಾರೆಯವರ ರಾಳೆಗಾಂವ್ ಸಿದ್ದಿಯಲ್ಲಿ ಭೀಕರ ಬರಗಾಲ ತಲೆದೋರಿದೆ. ಹಝಾರೆಯವರ ಜಲಸಂರಕ್ಷಣಾ ವಿಧಾನದ ಬಗ್ಗೆ ಈಗ ಗ್ರಾಮಸ್ಥರು ತಿರುಗಿಬಿದ್ದಿದ್ದಾರೆ.
ಹಝಾರೆಯವರ ಎಲ್ಲ ಸಾಮಾಜಿಕ ಹೋರಾಟಗಳನ್ನೂ ಅವರನ್ನು ಬೆಂಬಲಿಸಿದ್ದ ಜನತೆ, ಅಂತರ್ಜಲ ಮಟ್ಟ ಹೆಚ್ಚಿಸಲು ಬೋರ್‌ವೆಲ್‌ಗಳನ್ನು ಮುಚ್ಚುವಂತೆ ಅವರು ಮಾಡಿದ ಮನವಿಯನ್ನು ಮಾತ್ರ ವಿರೋಧಿಸುತ್ತಿದ್ದಾರೆ.
ಪ್ರತಿ ಬಾರಿಯೂ ನಾವು ಯಾಕೆ ಅವರ ಮಾತು ಕೇಳಬೇಕು? ಪ್ರತಿ ಬೋರ್‌ವೆಲ್ ತೋಡಲು ನಾವು 50,000 ರೂ.ವರೆಗೆ ಖರ್ಚು ಮಾಡಿದ್ದೇವೆ. ಇಂದು ನಮಗೆ ಕುಡಿಯಲು ನೀರಿಲ್ಲ. ಆದರೆ ಮಳೆಗಾಲ ಶುರುವಾದ ಬಳಿಕ ನಮ್ಮ ಕೊಳವೆಬಾವಿಗಳಲ್ಲಿ ನೀರು ಸಿಗುತ್ತವೆ. ನಮಗೆ ಬೇರೆ ಯಾವುದೇ ಜಲಮೂಲವಿಲ್ಲ. ನಮ್ಮ ಬೆಳೆಗಳೆಲ್ಲ ನಾಶವಾದ ಬಳಿಕ ಜಲಾನಯನ ಅಭಿವೃದ್ಧಿಪಡಿಸಿ ಏನು ಪ್ರಯೋಜನ? ಎಂದು ಪ್ರಶ್ನಿಸುತ್ತಾರೆ ಇಲ್ಲಿನ ಜನ.
Next Story





