ಪ್ರಧಾನಿ ಮೋದಿ ಜೊತೆಗಿರುವ ಈ ಗಡ್ಡಧಾರಿ ಯಾರು?

ಕೇರಳ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ರವಿವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬರಮಾಡಿಕೊಂಡವರಲ್ಲಿ ಈ ಗಡ್ಡಧಾರಿ ಯಾರು ಎಂದು ಗೊತ್ತಾಗಲಿಲ್ಲವೇ ?
ಅವರೇ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ, ಬಿಜೆಪಿ ಮುಖಂಡ ಹಾಗೂ ಮೋದಿಯವರ ಪರಮ ಅಭಿಮಾನಿ ಬಿ. ನಾಗರಾಜ ಶೆಟ್ಟಿ !
ಚುನಾವಣೆಯಲ್ಲಿ ಸೋತ ಬಳಿಕ ರಾಜಕೀಯ ಚಟುವಟಿಕೆಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ನಾಗರಾಜ್ ಶೆಟ್ಟಿ ಅವರು ಮೋದಿ ಬಂದಾಗ ಮಾತ್ರ ತಪ್ಪದೆ ಹಾಜರಾಗುತ್ತಾರೆ.
ಮೊದಲ ಚುನಾವಣೆಯಲ್ಲೇ ಗೆದ್ದು ಜಿಲ್ಲೆಯ ಉಸ್ತುವಾರಿ ಸಿಕ್ಕಿದಾಗ ನನಗೆ ಮೋದಿ ಮಾದರಿ ಎಂದು ಮೋದಿ ಆಗಿನ್ನೂ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗಲೇ ಹೇಳಿದ್ದವರು ನಾಗರಾಜ್ ಶೆಟ್ಟಿ .
Next Story





