ಸುಳ್ಯ: ರಾಯರ ಮಠದ ಗರ್ಭಗುಡಿಯ ಪಾದುಕಾನ್ಯಾಸ

ಸುಳ್ಯ: ಸುಳ್ಯ ತಾಲೂಕಿನ ಪ್ರಥಮ ರಾಘವೇಂದ್ರ ಮಠದ ಗರ್ಭಗುಡಿಯ ಪಾದುಕಾನ್ಯಾಸ ಪಯಸ್ವಿನಿ ತೀರದ ಶ್ರೀ ರಾಘವೇಂದ್ರ ಮಠದ ನಿವೇಶನದಲ್ಲಿ ನಡೆಯಿತು.
ಕಾಣಿಯೂರು ಮಠಾಧೀಶ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಅವರು ಮಂತ್ರಾಕ್ಷತೆಯನ್ನು ಶಿಲೆಗೆ ಅರ್ಪಿಸಿ ಆದಷ್ಟು ಶೀಘ್ರ ಮಠದ ಕಾರ್ಯ ನಡೆದು ಭಕ್ತರ ಆಶಯಗಳೆಲ್ಲವೂ ಈಡೇರಲಿ ಎಂದು ಹರಸಿದರು.
ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಮಠದ ಮುಖಮಂಟಪದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಶುಭಹಾರೈಸಿದರು. ಮುಕ್ಕೂರು ರಾಘವೇಂದ್ರ ತಂತ್ರಿ ಅವರು ಪಾದುಕಾನ್ಯಾಸದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ವೇಮೂ ಅನಂತೇಶ ಕೆದಿಲಾಯ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಗರ್ಭಗುಡಿಯ ಶಿಲೆಗಳನ್ನು ನಗರದ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ನಿವೇಶನಕ್ಕೆ ತರಲಾಯಿತು. ಕೇಶವ ಕೃಪಾದ ವೇದ ಕಲಿಕಾ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು. ಶಾಸಕ ಎಸ್. ಅಂಗಾರ, ರಾಜ್ಯ ಸಮಾಜಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ನ್ಯಾಯವಾದಿ ಎಂ. ವೆಂಕಪ್ಪಗೌಡ, ತೊಡಿಕಾನ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ. ದಿವಾಕರ ರೈ, ಬೃಂದಾವನ ಸೇವಾ ಟ್ರಸ್ಟ್‌ನ ಅಧ್ಯಕ್ಷ ಎಂ.ಎನ್. ಶ್ರೀಕೃಷ್ಣ, ಶಿವಳ್ಳಿ ಸಂಪನ್ನದ ಅಧ್ಯಕ್ಷ ರಮೇಶ್ ಸೋಮಯಾಗಿ, ಮಠ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಮುರಳೀಕೃಷ್ಣ ಎಂ.ಆರ್., ಖಜಾಂಜಿ ಪಿ.ಬಿ. ಸುಧಾಕರ ರೈ, ಡಾ ಪಿ.ವಿ. ಸುಬ್ಬರಾವ್, ಪದಾಧಿಕಾರಿಗಳಾದ ಎಂ. ಮೀನಾಕ್ಷಿ ಗೌಡ, ಪ್ರಭಾಕರನ್ ನಾಯರ್, ಪ್ರಕಾಶ್ ಮೂಡಿತ್ತಾಯ, ಕೃಷ್ಣ ನಾವಡ, ಶಾರದಾ ನಾವಡ, ಗಿರೀಶ ಕೇಕುಣ್ಣಾಯ, ನಾರಾಯಣ ಕೇಳತ್ತಾಯ, ರಾಮಪ್ರಸಾದ್ ಕಾಸರಗೋಡು, ರಾಜೇಶ್ ಆಚಾರ್, ರಾಧಾಕೃಷ್ಣ ಕಲ್ಲೂರಾಯ, ನಾಗರಾಜ ಮುಳ್ಯ, ರಾಂಕುಮಾರ್, ರಮೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.







