ಜಿಲ್ಲಾ ಉಸ್ತುವಾರಿ ಸಚಿವರಿಂದ ಸುಳ್ಯ ಗಾಂಧಿನಗರ ಕಾಲೇಜು ಕಟ್ಟಡ ಉದ್ಘಾಟನೆ

ಸುಳ್ಯ: ಸುಳ್ಯ ಗಾಂಧಿನಗರದಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸರಕಾರಿ ಕಾಲೇಜಿನ ನೂತನ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಉದ್ಘಾಟಿಸಿದರು.
ಶಾಸಕ ಎಸ್. ಅಂಗಾರ ಅಧ್ಯಕ್ಷತೆಯನ್ನು ವಹಿಸಿದರು. ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಲಿಂಗಪ್ಪ, ನ.ಪಂ. ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಕಾಲೇಜಿನ ಅಭಿವೃದ್ಧಿ ಸಮಿತಿಯ ಖಜಾಂಜಿ ನ್ಯಾಯವಾದಿ ಎಂ.ವೆಂಕಪ್ಪ ಗೌಡ ಭಾಗವಹಿಸಿದರು. ವೇದಿಕೆಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಕೆ.ಬಿ. ಇಬ್ರಾಹಿಂ, ಜೆ.ಕೆ.ರೈ, ಅಬೂಬಕ್ಕರ್ ಹಾಜಿ ಕಟ್ಟೆಕ್ಕಾರ್, ತಿಮ್ಮಪ್ಪ ನಾವೂರು, ಪ್ರೌಢಶಾಲಾ ಮುಖ್ಯ ಶಿಕ್ಷಕಿ ನಳಿನಿ, ಕಾಲೇಜಿನ ಪ್ರಿನ್ಸಿಪಾಲ್ ಮಹಾಲಿಂಗೇಶ್ವರ ಭಟ್ ಉಪಸ್ಥಿತರಿದ್ದರು.
ಕಾಲೇಜಿಗೆ ಹೆಚ್ಚುವರಿಯಾಗಿ ಇನ್ನೂ 4 ಕೊಠಡಿಗಳಿಗೆ ರೂ.50 ಲಕ್ಷ ಮಂಜೂರಾಗಿದ್ದು ಕಾಮಗಾರಿಗೆ ಗುದ್ದಲಿಪೂಜೆಯನ್ನು ತೆಂಗಿನ ಕಾಯಿ ಒಡೆಯುವುದರ ಮೂಲಕ ನೆರವೇರಿಸಿದರು. ಕಾರ್ಯಕ್ರಮದ ಮೊದಲು ದಿಮಹಮ್ಮದ್ ಹಾಜಿ ಜನತಾ ಗ್ರೂಪ್ಸ್ ಸ್ಮರಣಾರ್ಥ ನಿರ್ಮಿಸಿದ ಧ್ವಜಸ್ಥಂಭವನ್ನು ಸಚಿವರು ಉದ್ಘಾಟಿಸಿದರು. ನಗರ ಪಂಚಾಯತ್ ಸದಸ್ಯ ಮುಸ್ತಫ ಸ್ವಾಗತಿಸಿ, ವಂದಿಸಿ, ಶಿಕ್ಷಕ ಅರುಣಕುಮಾರ್ ಕಾರ್ಯಕ್ರಮ ನಿರೂಪಿಸಿದರು.





