ಮೂಲರಪಟ್ಣ: ಸಾಮೂಹಿಕ ವಿವಾಹ ಕಾರ್ಯಕ್ರಮ

ವಿಟ್ಲ : ಮೂಲರಪಟ್ಣ ನುಸ್ರತುಲ್ ಅನಾಮ್ ಸ್ವಲಾತ್ ಕಮಿಟಿ ಇದರ ವತಿಯಿಂದ ಒಂಭತ್ತು ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮವು ಇಲ್ಲಿನ ಎಂ.ಜೆ.ಎಂ. ಮೈದಾನದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಮಾತನಾಡಿ ಬಡ ಜನತೆಯ ಕಣ್ಣೀರು ಒರೆಸುವಂತಹ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಾವೆಲ್ಲರೂ ಮುಂದಾಗಬೇಕೆಂದು ಕರೆ ನೀಡಿದರು.
ಸಯ್ಯಿದ್ ಹಮೀದಾಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ದುವಾಶಿರ್ವಚನಗೈದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ 9 ಜೋಡಿಯ ನಿಕಾಹ್ ನೆರವೇರಿಸಿದರು. ಸಯ್ಯಿದ್ ಜುನೈದ್ ಜಿಫ್ರಿ ತಂಙಳ್ ಆತೂರು, ಚೊಕ್ಕಬೆಟ್ಟು ಮಸೀದಿ ಮುದರ್ರಿಸ್ ಯು.ಕೆ. ಅಬ್ದುಲ್ ಅಝೀರ್ ದಾರಿಮಿ, ಸಜಿಪ ಜುಮಾ ಮಸೀದಿ ಮುದರ್ರಿಸ್ ಅಶ್ಫಾಕ್ ಫೈಝಿ ಮುಖ್ಯ ಭಾಷಣಗೈದರು. ಸಚಿವ ಬಿ. ರಮಾನಾಥ ರೈ, ಶಾಸಕರುಗಳಾದ ಮೊದಿನ್ ಬಾವಾ, ಐವನ್ ಡಿಸೋಜ, ಜಿ.ಪಂ. ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್. ಮುಹಮ್ಮದ್, ತುಂಗಪ್ಪ ಬಂಗೇರ, ಯು.ಪಿ. ಇಬ್ರಾಹಿಂ, ಪದ್ಮಶೇಖರ್ ಜೈನ್, ದ.ಕ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಚ್. ಖಾದರ್, ಬಂಟ್ವಾಳ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ಬಂಟ್ವಾಳ ತಾಲೂಕು ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಮೂಲರಪಟ್ಣ ಎಂ.ಜೆ.ಎಂ. ಮುದರ್ರಿಸ್ ಪಿ. ಅಬ್ದುಲ್ ಖಾದರ್ ಮದನಿ, ಅಧ್ಯಕ್ಷ ಎಂ. ಮುಹಮ್ಮದ್, ಕಾರ್ಪೊರೇಟರ್ ಅಬ್ದುಲ್ ರವೂಫ್, ಮಂಗಳೂರು ತಾ.ಪಂ. ಸದಸ್ಯ ನಾಗೇಶ್ ಶೆಟ್ಟಿ ಕುಪ್ಪೆಪದವು, ಉದ್ಯಮಿ ಚಿತ್ತರಂಜನ್ ರೈ, ಪ್ರಗತಿಪರ ಕೃಷಿಕರಾದ ರಘುನಾಥ್ ಪಯ್ಯಡೆ, ರಾಜೇಶ್ ನಾಯಕ್ ಉಳೇಪಾಡಿಗುತ್ತು, ಅರಳ ಗ್ರಾ.ಪಂ. ಉಪಾಧ್ಯಕ್ಷ ಜಗದೀಶ್ ಆಳ್ವ, ಬಡಗಬೆಳ್ಳೂರು ಗ್ರಾ.ಪಂ. ಉಪಾಧ್ಯಕ್ಷ ಯೋಗೀಶ್ ಪೂಜಾರಿ, ಕಾಶಿಪಟ್ಣ ದಾರುನ್ನೂರು ಎಜ್ಯುಕೇಶನ್ ಸೆಂಟರ್ ಅಧ್ಯಕ್ಷ ಯೇನಪೋಯ ಮುಹಮ್ಮದ್ ಕುಂಞಿ, ಅರಳ ಶ್ರೀ ಗರುಡ ಮಹಾಂಕಾಳಿ ದೇವಸ್ಥಾನ ಆಡಳಿತ ಮೊಕ್ತೇಸರ ಎ. ರಾಜೇಂದ್ರ ಶೆಟ್ಟಿ, ಜಿಲ್ಲಾ ವಕ್ಫ್ ಬೋರ್ಡ್ ಚೆಯರ್‌ಮೆನ್ ಹಾಜಿ ಎಸ್.ಎಂ. ರಶೀದ್, ಮುಡಾ ಅಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಮುಹಮ್ಮದ್ ಮಸೂದ್, ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಮೊಯ್ದಿನ್ ಹಾಜಿ, ಬಂಟ್ವಾಳ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಖಾದರ್ ಮಾಸ್ಟರ್ ಬಂಟ್ವಾಳ, ಬಂಟ್ವಾಳ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಯ್ಯೂಬ್ ಮುಸ್ಲಿಯಾರ್ ಅರಳ, ಗುರುಪುರ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಹಾಜಿ ಶಾಹುಲ್ ಹಮೀದ್ ಮೆಟ್ರೋ, ಹಾಜಿ ಅಬೂಬಕ್ಕರ್ ಕೆ. ಪರ್ಕಳ, ಹನೀಫ್ ಹಾಜಿ ಕಾಶಿಪಟ್ಣ, ಹನೀಫ್ ದಾರಿಮಿ ಕಲ್ಲಗುಡ್ಡೆ, ಇಬ್ರಾಹಿಂ ದಾರಿಮಿ ಕೊಳತ್ತಮಜಲು, ಅಬ್ದುಲ್ ರಶೀದ್ ಸಖಾಫಿ ಕುಪ್ಪೆಪದವು, ನೌಶಾದ್ ಹಾಜಿ ನಾರ್ಲಪದವು, ಲತೀಫ್ ಮದರ್ ಇಂಡಿಯಾ ತೋಡಾರು, ಉಸ್ಮಾನ್ ಏರ್ ಇಂಡಿಯಾ ತೋಡಾರು, ಇಂತಿಯಾರ್ ಅಹ್ಮದ್ ಕಾರ್ಕಳ, ಅಬ್ದುಲ್ ಸತ್ತಾರ್, ಕುಪ್ಪೆಪದವು ಗ್ರಾ.ಪಂ. ಉಪಾಧ್ಯಕ್ಷ ಡಿ.ಪಿ. ಹಮ್ಮಬ್ಬ, ಅರಳ ಗ್ರಾ.ಪಂ. ಸದಸ್ಯ ಎಂ.ಬಿ. ಅಶ್ರಫ್, ಬಡಗಬೆಳ್ಳೂರು ಗ್ರಾ.ಪಂ. ಸದಸ್ಯ ಎಂ.ಎ. ಹಾಜಬ್ಬ, ಹಾಜಿ ಮುಹಮ್ಮದ್ ಮಾಸ್ಟರ್, ಎಂ.ಎ. ಹಮ್ಮಬ್ಬ ಮೂಲರಪಟ್ಣ, ಹಾಜಿ ಎಂ.ಎಸ್. ಶೇಖಬ್ಬ, ವಿ. ಮುಹಮ್ಮದ್ (ಪುತ್ತುಮೋನು), ಹಾಜಿ ಅಬ್ದುಲ್ ಹಮೀದ್ ಮೂಲರಪಟ್ಣ, ಅಬ್ದುಲ್ ಜಬ್ಬಾರ್ ಎಂ.ಬಿ. ಮೂಲರಪಟ್ಣ, ಎಂ.ಜಿ. ಶಾಹುಲ್ ಹಮೀದ್ ಮೂಲರಪಟ್ಣ, ಎಂ. ಇಬ್ರಾಹಿಂ ಮೂಲರಪಟ್ಣ, ಎಂ.ಎಸ್. ಹಕೀಂ ಮಾರ್ಗದಂಗಡಿ, ಅಶ್ರಫ್ ಬಾಳಿಕೆ, ಝಕಾರಿಯಾ ಆಚಾರಿಬೆಟ್ಟು, ಎಂ.ಎಚ್. ಮುಹಿಯುದ್ದೀನ್ ಹಾಜಿ ಅರಳ, ಹಾಜಿ ಎಂ.ಎ. ಗಫೂರ್ ಮೂಲರಪಟ್ಣ, ಟಿ.ಎಸ್. ಬಾವ ಸೂರಲ್ಪಾಡಿ, ಅಬ್ದುಲ್ ಹಮೀದ್ ಹಾಜಿ ಸಿತಾರ್, ಹಬೀಬ್ ಫರಂಗಿಪೇಟೆ, ಎಂ.ಜಿ. ಮುಹಮ್ಮದ್ ಹಾಜಿ ತೋಡಾರು, ಅಬ್ದುಲ್ ರಹಿಮಾನ್ ಗುಂಡೇರ್ ತೋಡಾರು, ಅಹ್ಮದ್ ಬಾವಾ ಮಿಜಾರು, ವಿ. ಹಸನಬ್ಬ, ಎಂ.ಎಸ್. ಮುಹಮ್ಮದ್ ಮೂಲರಪಟ್ಣ, ಜಿ.ಕೆ. ಕಾಸಿಂ ಮೂಲರಪಟ್ಣ, ಎಂ. ಇಬ್ರಾಹಿಂ ಅಝಾದ್‌ನಗರ, ಎಂ.ಜಿ. ಕಬೀರ್ ಮೂಲರಪಟ್ಣ, ಎ.ಜಿ. ಮುಹಮ್ಮದ್ ಮೂಲರಪಟ್ಣ, ಶಾಲಿ ಎಂ.ಎಸ್. ಮೂಲರಪಟ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ ಜಿಲ್ಲೆಯ ಹಲವೆಡೆ ಹಲವು ಸಾಮೂಹಿಕ ಕಾರ್ಯಕ್ರಮ ನಡೆಸಿದ ಹಾಗೂ ಇಲ್ಲಿನ ಸಾಮೂಹಿಕ ವಿವಾಹ ಕಾರ್ಯಕ್ರಮದ ರೂವಾರಿಗಳಲ್ಲೋರ್ವರಾದ ನೌಶಾದ್ ಹಾಜಿ ಸೂರಲ್ಪಾಡಿ ಅವರನ್ನು ಸನ್ಮಾನಿಸಲಾಯಿತು.
ಉಪನ್ಯಾಸಕ ಹಾಜಿ ಮುಹಮ್ಮದ್ ಹನೀಪ್ ಸ್ವಾಗತಿಸಿ, ಮೂಲರಪಟ್ಣ ಎಂಜೆಎಂ ಮಾಜಿ ಕಾರ್ಯದರ್ಶಿ ಎಂ.ಪಿ. ಅಬ್ದುಲ್ ಲತೀಫ್ ಮೂಲರಪಟ್ಣ ಪ್ರಸ್ತಾವನೆಗೈದರು. ನುಸ್ರತುಲ್ ಅನಾಮ್ ಸಂಸ್ಥೆಯ ಕಾರ್ಯದರ್ಶಿ ಸಜೀವುದ್ದೀನ್ ಎಂ.ಎಸ್. ಧನ್ಯವಾದವಿತ್ತರು. ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.
ದಾಂಪತ್ಯ ಜೀವನಕ್ಕೆ ಪ್ರವೇಶಿಸಿದ 9 ಜೋಡಿ ವಧೂ-ವರರು
ಬಡಗಬೆಳ್ಳೂರು-ಕೊಪ್ಪಳ ನಿವಾಸಿ ಅಹಮದ್ ಬಾವಾ ಎಂಬವರ ಪುತ್ರ ಮುಝಮ್ಮಿಲ್ ಸೂರಿಂಜೆ-ಕೈಯೂರು ನಿವಾಸಿ ಅಹ್ಮದ್ ಬಾವಾ ಅವರ ಪುತ್ರಿ ನೌಶೀನಿ ಎಂಬಾಕೆಯನ್ನು, ಶಿವಮೊಗ್ಗ-ತೀರ್ಥಹಳ್ಳಿ ನಿವಾಸಿ ಚೆಯ್ಯಬ್ಬ ಅವರ ಪುತ್ರ ಉಸ್ಮಾನ್ ಎಂ.ಸಿ. ಅವರು ಮಂಗಳೂರು-ಬೆಂಗರೆ ಕಸಬಾ ನಿವಾಸಿ ಆದಂ ಕುಂಞಿ ಅವರ ಪುತ್ರಿ ನಸೀಮಾ ಎಂಬಾಕೆಯನ್ನು, ಬೆಳ್ತಂಗಡಿ-ಪೆರಡಿ ನಿವಾಸಿ ಹಮೀದ್ ಎಂಬವರ ಪುತ್ರ ಝಬೀರ್ ಅಲಿ ಅವರು ಕಾರ್ಕಳ-ಈದು ನಿವಾಸಿ ಸುಲೈಮಾನ್ ಎಂಬವರ ಪುತ್ರಿ ಸುಮಯ್ಯಿ ಎಂಬಾಕೆಯನ್ನು, ಇಳಂತಿಲ-ಮುರ ನಿವಾಸಿ ಅಹಮದ್ ಕುಂಞಿ ಎಂಬವರ ಪುತ್ರ ಇಬ್ರಾಹಿಂ ಅವರು ಮಣಿನಾಲ್ಕೂರು-ಮಾವಿನಕಟ್ಟೆ ನಿವಾಸಿ ಅಹ್ಮದ್ ಕುಂಞಿ ಅವರ ಪುತ್ರಿ ಶಾಹಿದಾ ಎಂಬಾಕೆಯನ್ನು, ಧರ್ಮಸ್ಥಳ-ಜೋಡುಸ್ಥಾನ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಇಸಾಕ್ ಅವರು ಧರ್ಮಸ್ಥಳ-ಅಜೆಕುರಿ ನಿವಾಸಿ ಅಬ್ದುಲ್ ಖಾದರ್ ಎಂಬವರ ಪುತ್ರಿ ಸೌದತ್ ಎಂಬಾಕೆಯನ್ನು, ಪುತ್ತೂರು-ಕೊಣಾಲು ನಿವಾಸಿ ಕಾಸಿಂ ಕೋಲ್ಪೆ ಎಂಬವರ ಪುತ್ರ ತೌಫೀಕ್ ಅವರು ಮಣಿನಾಲ್ಕೂರು-ಮಿಯಾರುಪಲ್ಕೆ ನಿವಾಸಿ ಸುಲೈಮಾನ್ ಎಂಬವರ ಪುತ್ರಿ ಹಸೀನಾ ಎಂಬಾಕೆಯನ್ನು, ಉಪ್ಪಳ ನಿವಾಸಿ ಸೆಯ್ಯದ್ ನಿಸಾರ್ ಎಂಬವರ ಪುತ್ರ ಮುಹಮ್ಮದ್ ಶಬ್ಬಾನ್ ನಿಸಾರ್ ಅವರು ನರಿಕೊಂಬು-ಪಿತ್ತಲಗುಡ್ಡೆ ನಿವಾಸಿ ಅಬ್ದುಲ್ ಲತೀಫ್ ಎಂಬವರ ಪುತ್ರಿ ಸಫ್ರೀನಾ ಎಂಬಾಕೆಯನ್ನು, ಹಾಸನ-ಕಸಬಾ ಹೋಬಳಿ ನಿವಾಸಿ ರಹ್ಮತುಲ್ಲಾ ಎಂಬವರ ಪುತ್ರ ನೂರುಲ್ಲಾ ಅವರು ಬಡಗಬೆಳ್ಳೂರು ನಿವಾಸಿ ಇಬ್ರಾಹಿಂ ಎಂಬವರ ಪುತ್ರಿ ನಸೀಮಾ ಬಾನು ಎಂಬಾಕೆಯನ್ನು, ಕಾರ್ಕಳ-ಪರನೀರು ನಿವಾಸಿ ಅಯ್ಯೂಬ್ ಸಾಹೇಬ್ ಎಂಬವರ ಪುತ್ರ ಅದ್ನಾನ್ ಅವರು ಮಂಗಳೂರು-ಬಿತ್ತುಪಾದೆ ನಿವಾಸಿ ಸುಲೈಮಾನ್ ಎಂಬವರ ಪುತ್ರಿ ನೌಶೀರಾ ಬಾನು ಎಂಬಾಕೆಯನ್ನು ವಿವಾಹವಾದರು.







