ಕೇರಳದ ಜನತೆಯನ್ನು ಅವಮಾನಿಸದಿರಿ: ಬಿಜೆಪಿ ರಾಜ್ಯಾಧ್ಯಕ್ಷರಿಗೆ ಉಮನ್ ಚಾಂಡಿ

ಕೋಝಿಕ್ಕೋಡ್, ಮೇ 8: ಕೇರಳದ ಜನರನ್ನು ಅಪಮಾನಿಸಿ ಬಿಜೆಪಿ ಕೇರಳದ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ನೀಡುತ್ತಿರುವ ಹೇಳಿಕೆಗಳನ್ನು ಕೂಡಲೇ ನಿಲ್ಲಿಸಬೇಕೆಂದು ಮುಖ್ಯಮಂತ್ರಿ ಉಮ್ಮನ್ ಚಾಂಡಿ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಆಗ್ರಹಿಸಿದ್ದಾರೆಂದು ವರದಿಯಾಗಿದೆ.
ಅತ್ಯಾಚಾರ, ಬಹಿರಂಗವಾಗಿ ಕಡಿದು ಕೊಲೆ, ರಾಜಕೀಯ ಕೊಲೆಪಾತಕಗಳು, ಮಕ್ಕಳ ವ್ಯಾಪಕ ದುರುಪಯೋಗ, ಮದ್ಯಪಾನ, ಮಾದಕವಸ್ತು ಬಳಕೆ ಇವುಗಳೇ ಕೇರಳದ ಜನರ ಮುಖಮುದ್ರೆಯಾಗಿದೆ ಎಂದು ಕುಮ್ಮನಂ ರಾಜಶೇಖರನ್ ಒಂದು ಪತ್ರಿಕೆಗೆ ಬರೆದ ಲೇಖನದಲ್ಲಿ ಹೇಳಿದ್ದಾರೆ.
ಇದು ಹೂದೋಟಕ್ಕೆ ವಿಷಬಿಸಾಕುವುದಕ್ಕೆ ಸಮಾನವಾಗಿದೆ ಎಂದು ಕೇರಳ ಕುರಿತು, ಜನರ ಕುರಿತು ಹೀಗೆಲ್ಲ ಬರೆಯಲು ಅವರಿಗೆ ಹೇಗೆ ಸಾಧ್ಯವಾಗುತ್ತಿದೆ ಎಂದು ಉಮ್ಮನ್‌ಚಾಂಡಿ ಪ್ರಶ್ನಿಸಿದ್ದಾರೆ. ದೇವನ ಅತಿಮನೋಹರವಾದ ಹೂದೋಟ ಎಂದು ಗುರುನಿತ್ಯ ಚೈತನ್ಯ ಯತಿ ಹೇಳಿರುವ ಕೇರಳಕ್ಕೆ ವಿಷದ ಬೀಜಗಳನ್ನು ಎಸೆಯಬಾರದು ಎಂದು ಉಮ್ಮನ್ ಚಾಂಡಿ ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ.
Next Story





