Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಇಟಲಿ ನಾವಿಕರಿಂದ ಭಾರತೀಯ ಬೆಸ್ತರ ಹತ್ಯೆ...

ಇಟಲಿ ನಾವಿಕರಿಂದ ಭಾರತೀಯ ಬೆಸ್ತರ ಹತ್ಯೆ ಪ್ರಕರಣ ವಿಚಾರಣೆ ಭಾರತದ ಕೈ ತಪ್ಪುವುದೇ?

ಸಿ.ಉದಯ ಭಾಸ್ಕರ್ಸಿ.ಉದಯ ಭಾಸ್ಕರ್8 May 2016 11:04 PM IST
share
ಇಟಲಿ ನಾವಿಕರಿಂದ ಭಾರತೀಯ ಬೆಸ್ತರ ಹತ್ಯೆ ಪ್ರಕರಣ ವಿಚಾರಣೆ ಭಾರತದ ಕೈ ತಪ್ಪುವುದೇ?

2012ರ ಫೆಬ್ರವರಿಯಲ್ಲಿ ಭಾರತೀಯ ಮೀನುಗಾರರಿಬ್ಬರನ್ನು ಹತ್ಯೆಗೈದ ಇಟಲಿ ನಾವಿಕರ ಪ್ರಕರಣಕ್ಕೆ ಸಂಬಂಧಿಸಿ ವಿಶ್ವಸಂಸ್ಥೆ ಯ ಮಧ್ಯಸ್ಥಿಕೆ ನಿರ್ಣಯ (ಅರ್ಬಿಟ್ರೇಶನ್) ನ್ಯಾಯಾಧಿಕರಣವು ಮೇ 3ರಂದು ಪ್ರಕಟಿಸಿದ ಆದೇಶವು ಭಾರತ ಹಾಗೂ ಇಟಲಿ ಎರಡೂ ದೇಶಗಳನ್ನು ಓಲೈಸುವ ಉದ್ದೇಶ ಹೊಂದಿದೆ. ಮೀನುಗಾರರನ್ನು ಗುಂಡಿಕ್ಕಿದ ಆರೋಪ ಎದುರಿಸುತ್ತಿರುವ ಇಟಲಿ ನಾವಿಕರು ಈಗ ಬಂಧ ಮುಕ್ತರಾಗಿದ್ದಾರೆ. ಇದರೊಂದಿಗೆ ಹೊಸದಿಲ್ಲಿ ಹಾಗೂ ರೋಮ್ ನಡುವೆ ಬಹಳ ದಿನಗಳಿಂದ ಹೊಗೆಯಾಡುತ್ತಿದ್ದ ವಿವಾದವು ತಾತ್ಕಾಲಿಕವಾಗಿ ಶಮನಗೊಂಡಂತಾಗಿದೆ.

 ಕೇರಳದ ಕೊಚ್ಚಿಯ ಕರಾವಳಿಯಿಂದ 20.5 ನಾಟಿಕಲ್ ಮೈಲು ದೂರದ ಸಾಗರದಲ್ಲಿ ಇಟಲಿಯ ವ್ಯಾಪಾರಿ ಹಡಗು ಎನ್ರಿಕಾ ಲೆಕ್ಸಿಯ ಇಬ್ಬರು ಇಟಲಿ ನಾವಿಕರು, ಭಾರತೀಯ ಮೀನುಗಾರರಿಬ್ಬರನ್ನು ಕಡಲ್ಗಳ್ಳರೆಂದು ಭಾವಿಸಿ ಗುಂಡು ಹಾರಿಸಿ, ಹತ್ಯೆಗೈದಿದ್ದಾರೆಂದು ಇಟಲಿ ವಾದಿಸಿತ್ತು. ಈ ನಾವಿಕರು ಕರ್ತವ್ಯ ವನ್ನು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಈ ಮೀನುಗಾರರ ಹತ್ಯೆ ಯಾಗಿದೆ. ಯಾವುದೇ ದೇಶದ ಸೇನಾಸಿಬ್ಬಂದಿಯಿಂದ, ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಆಕಸ್ಮಿಕವಾಗಿ ಹತ್ಯೆ ನಡೆದರೂ ಅವರಿಗೆ ಕ್ಷಮಾದಾನ ನೀಡಬೇಕಾಗುತ್ತದೆ ಎಂದು ಹೇಳಿದೆ.

  ಆದಾಗ್ಯೂ ಹೊಸದಿಲ್ಲಿಯು ನಿರಂತರವಾಗಿ ಈ ವಾದವನ್ನು ತಿರಸ್ಕರಿಸುತ್ತಾ ಬಂದಿದೆ ಹಾಗೂ ಆರೋಪಿಗಳನ್ನು ಭಾರತೀಯ ಕಾನೂನಿನ ನಿಯಮಗಳ ಪ್ರಕಾರ ವಿಚಾರಣೆಗೊಳಪಡಿಸುವ ತನ್ನ ಹಕ್ಕನ್ನು ಎತ್ತಿಹಿಡಿದಿದೆ. ಇದರಿಂದಾಗಿ ಎರಡೂ ದೇಶಗಳ ನಡುವೆ ರಾಜಕೀಯ ಬಿಕ್ಕಟ್ಟು ಉಲ್ಬಣಿಸಿತ್ತು.
 ಭಾರತದಲ್ಲಿ ಈ ಪ್ರಕರಣವು ಕೇರಳ ಹೈಕೋರ್ಟ್ ನಿಂದ ಸುಪ್ರೀಂಕೋರ್ಟ್‌ಗೆ ವರ್ಗಾವಣೆಗೊಂಡಿತು. ಭಾರತವು ಆರೋಪಿ ಮೆರೈನ್ ನಾವಿಕರನ್ನು ವಿಶೇಷ ನ್ಯಾಯಾಲಯದಲ್ಲಿವಿಚಾರಣೆಗೊಳಪಡಿಸಲು ತನಗಿರುವ ಸಾರ್ವಭೌಮತೆಯನ್ನು ಪ್ರತಿಪಾದಿಸಿತು. ಹೀಗೆ ಪ್ರಕರಣದ ವಿಚಾರಣೆ ಕುಂಟುತ್ತಲೇ ಸಾಗಿತು. 2014ರ ಡಿಸೆಂಬರ್‌ನಲ್ಲಿ ಪ್ರಕರಣವು ಇಡೀ ಯುರೋಪ್ ಒಕ್ಕೂಟಕ್ಕೆ ಸಂಬಂಧಿಸಿದ ವಿಷಯವೆಂಬ ಗ್ರಹಿಕೆಯನ್ನು ಪಡೆದುಕೊಂಡಿತು. ಇಟಲಿ ಮೆರೈನ್ ನಾವಿಕರ ಬಂಧನ ಪ್ರಕರಣವು ಭಾರತದ ಜೊತೆ ಇಡೀ ಯುರೋಪ್ ಒಕ್ಕೂಟದ ಬಾಂಧವ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆಯೆಂದು ಯುರೋಪ್ ಒಕ್ಕೂಟದ ವಿದೇಶಾಂಗ ವ್ಯವಹಾರಗಳ ಉನ್ನತ ಪ್ರತಿನಿಧಿಯಾಗಿರುವ ಮಾಜಿ ಇಟಲಿ ವಿದೇಶಾಂಗ ಸಚಿವೆ ಫ್ರೆಡೆರಿಕಾ ಮೊಗೆರ್ನಿ ಎಚ್ಚರಿಕೆ ನೀಡಿದ್ದರು.

ಇದರ ಪರಿಣಾಮವೆಂಬಂತೆ, 2015ರ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಉಪಸ್ಥಿತಿಯಲ್ಲಿ ನಡೆಯಲಿದ್ದ ಭಾರತ-ಯುರೋಪ್ ಒಕ್ಕೂಟ ಶೃಂಗಸಭೆಯು ರದ್ದುಗೊಂಡಿತ್ತು. ಭಾರತದ ಪ್ರಬಲ ಆಕ್ಷೇಪದ ಹೊರತಾಗಿಯೂ ಇಟಲಿಯು ಈ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಸಂಧಾನದ ಮೊರೆ ಹೋಗಲು ನಿರ್ಧರಿಸಿದ್ದು ಆಗಲೇ ಸ್ಪಷ್ಟವಾಗಿತ್ತು.
 2015ರ ಜೂನ್‌ನಲ್ಲಿ ಇಟಲಿಯು ಸಮುದ್ರ ಕಾನೂನು ಕುರಿತ ಅಂತಾರಾಷ್ಟ್ರೀಯ ನ್ಯಾಯಾಧಿಕರಣ(ಐಟಿಎಲ್‌ಒಎಸ್)ದ ಮೆಟ್ಟಲೇರಿತು. ಇಟಲಿ ಹಾಗೂ ಭಾರತಗಳೆರಡೂ ಈ ಪ್ರಕರಣದ ನ್ಯಾಯಾಲಯ ಕಲಾಪಗಳನ್ನು ರದ್ದುಪಡಿಸಬೇಕು. ಮಧ್ಯಸ್ಥಿಕೆ ನಿರ್ಣಯ ನ್ಯಾಯಾಧಿಕರಣದ ನಿರ್ಧಾರಕ್ಕೆ ಧಕ್ಕೆತರುವಂತಹ ಯಾವುದೇ ನಿರ್ಧಾರವನ್ನು ಪ್ರಕಟಿಸುವುದರಿಂದ ದೂರಸರಿಯಬೇಕೆಂದು ಅದು ಒತ್ತಾಯಿಸಿತು.

ಇದು ಕೇವಲ ಆರಂಭ ಮಾತ್ರ
   ಸಾರ್ಜಂಟ್ ಗಿರೋನ್‌ಗೆ ಜಾಮೀನು ಶರತ್ತುಗಳನ್ನು ಸಡಿಲಿಕೆಗಾಗಿ ಇತ್ತಂಡಗಳೂ ಸುಪ್ರೀಂಕೋರ್ಟ್‌ನ ಮೆಟ್ಟಲೇರಬೇಕಾಗಿದೆ. ಆರೋಪಿಯು ಇಟಲಿಯಲ್ಲಿದ್ದರೂ ಆತ ಭಾರತದ ಸುಪ್ರೀಂಕೋರ್ಟ್ ನ ಅಧೀನಕ್ಕೆ ಒಳಪಡುತ್ತಾನೆಂಬ ಶರತ್ತನ್ನು ಒಪ್ಪಿಕೊಳ್ಳಲು ಭಾರತ ಹಿಂದೇಟು ಹಾಕುತ್ತಿದೆ. ಮುಂದಿನ ಒಂದೆರಡು ವರ್ಷಗಳೊಳಗೆ ಇಟಲಿ ನಾವಿಕರ ಪ್ರಕರಣವು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನಿರ್ಣಯ ವೇದಿಕೆಯಲ್ಲಿ ಆಲಿಕೆಗೆ ಬರಲಿದೆ. ಆಗ ಅದು ಈ ಪ್ರಕರಣದ ವಿಚಾರಣೆಯು ಅಂತಿಮವಾಗಿ ಯಾರ ವ್ಯಾಪ್ತಿಗೆ ಒಳಪಡುವುದೆಂಬ ಬಗ್ಗೆ ನಿರ್ಧಾರವಾಗಲಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಇನ್ನೂ ಈ ಪ್ರಕರಣದ ಬಗ್ಗೆ ಇಡಬೇಕಾದ ಕಾನೂನುಕ್ರಮಗಳಲ್ಲಿ ಮೊದಲ ಹೆಜ್ಜೆಯಾಗಿದೆ.
   ವಿವಿಐಪಿ ಕಾಪ್ಟರ್ ಹಗರಣದಲ್ಲಿ ಕಾಂಗ್ರೆಸ್ ನಾಯಕತ್ವ (ಸೋನಿಯಾ-ರಾಹುಲ್)ವನ್ನು ಸಿಲುಕಿಸುವ ಉದ್ದೇಶದಿಂದ ಎನ್‌ಡಿಎ ಸರಕಾರವು ನಾವಿಕರ ಪ್ರಕರಣದಲ್ಲಿ ಇಟಲಿ ಜೊತೆ ಒಪ್ಪಂದವನ್ನು ಏರ್ಪಡಿಸಿಕೊಂಡಿದೆಯೆಂದು ಕಾಂಗ್ರೆಸ್ ಪಕ್ಷ ಆಪಾದಿಸಿದೆ. 2014ರ ಮಾರ್ಚ್‌ನಲ್ಲಿ ಮೋದಿ ಮಾಡಿದ ಟ್ವೀಟೊಂದನ್ನು ಅದು ಪ್ರಸ್ತಾಪಿಸಿದೆ. ‘‘ ಇಟಲಿಯ ನಾವಿಕರು ನಿರ್ದಯರಾಗಿ ನಮ್ಮ ಬೆಸ್ತರನ್ನು ಹತ್ಯೆಗೈದಿದ್ದಾರೆ. ಒಂದು ವೇಳೆ ಮೇಡಂ, ತುಂಬಾ ದೇಶಭಕ್ತರಾಗಿದ್ದಲ್ಲಿ ಅವರನ್ನು ಯಾವ ಜೈಲಿನಲ್ಲಿ ಇಡಲಾಗಿದೆಯೆಂದು ನಮಗೆ ತಿಳಿಸುವರೇ’’ ಎಂದು ಪ್ರಧಾನಿ ಟ್ವೀಟಿಸಿದ್ದರು.
  ರಾಜಕೀಯ ಅವಕಾಶವಾದ ಹಾಗೂ ರಾಷ್ಟ್ರೀಯವಾದಿ ಭಾವನೆಗಳನ್ನು ಉದ್ರೇಕಿಸುವುದು, ದಿಲ್ಲಿ ರಾಜಕಾರಣದ ಅತ್ಯುನ್ನತ ಆದ್ಯತೆಯಾಗಿದೆ. ನ್ಯಾಯಕ್ಕಾಗಿ ಹೋರಾಟ ಹಾಗೂ ಭಾರತ-ಇಟಲಿ ದ್ವಿಪಕ್ಷೀಯ ಬಾಂಧವ್ಯದಲ್ಲಿ ಸಹಜತೆಯನ್ನು ಮರುಸ್ಥಾಪಿಸುವ ಪ್ರಯತ್ನಗಳು, ಇದರ ಮಂದೆ ಗೌಣವಾಗಿವೆ.

ಐಟಿಎಲ್‌ಒಎಸ್‌ನ ಆದೇಶದ ಬೆನ್ನಲ್ಲೇ ಇತ್ತಂಡಗಳೂ, ಈ ವಿವಾದವನ್ನು ವಿಶ್ವಸಂಸ್ಥೆಯ ಮಧ್ಯಸ್ಥಿಕೆ ನಿರ್ಣಯ ನ್ಯಾಯಾಧಿಕರಣದಡಿ ಬಗೆಹರಿಸಿಕೊಳ್ಳಲು ಸಮ್ಮತಿಸಿದವು. ಆಗ ವಾಸ್ತವಿಕ ಪರಿಸ್ಥಿತಿಯೇನಿತ್ತೆಂದರೆ ಓರ್ವ ಆರೋಪಿ ನಾವಿಕನು, ಅನಾರೋಗ್ಯದ ಕಾರಣದಿಂದಾಗಿ ಇಟಲಿಯಲ್ಲಿದ್ದರೆ, ಇನ್ನೋರ್ವ ನಾವಿಕ (ಸಲ್ವಾದೋರ್ ಗಿರೊನ್), ಹೊಸದಿಲ್ಲಿಯ ಭಾರತೀಯ ರಾಯಭಾರಿ ಕಚೇರಿಯಲ್ಲಿ ಆಶ್ರಯ ಪಡೆದುಕೊಂಡಿದ್ದ.

 ರೋಮ್ ಮತ್ತೊಮ್ಮೆ ಅಡ್‌ಹಾಕ್ ಟ್ರಿಬ್ಯೂನಲ್‌ನ ಮೆಟ್ಟ ಲೇರಿ, ಸಾರ್ಜಂಟ್ ಸಲ್ವಾದೊರ್ ಗಿರೊನ್ ಇಟಲಿಗೆ ವಾಪಸಾಗುವುದಕ್ಕೆ ಸಾಧ್ಯವಾಗಲು, ಜಾಮೀನು ಶರತ್ತುಗಳನ್ನು ಸಡಿಲಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿತ್ತು.

  ನ್ಯಾಯಾಧಿಕರಣವು ಮೇ 3ರಂದು ಇಟಲಿಯ ಮನವಿಯನ್ನು ಸ್ವೀಕರಿಸಿತು ಹಾಗೂ ಭಾರತದಲ್ಲಿರುವ ಗಿರೋನ್ ಇಟಲಿಗೆ ಹಿಂದಿರುಗುವುದಕ್ಕೆ ಅನುಮತಿ ನೀಡಿತು. ಸಾರ್ಜಂಟ್ ಗಿರೋನ್‌ಗೆ ಜಾಮೀನು ಶರತ್ತುಗಳನ್ನು ಸಡಿಲಿಕೆ ಮಾಡುವ ನಿಟ್ಟಿನಲ್ಲಿ ಇಟಲಿ ಹಾಗೂ ಭಾರತ ಪರಸ್ಪರ ಸಹಕರಿಸಬೇಕೆಂದು ವಿಶ್ವಸಂಸ್ಥೆ ನ್ಯಾಯಾಧಿಕರಣ ತೀರ್ಪು ನೀಡಿತು.
   ಈ ಆದೇಶವು ಪ್ರಕರಣದಲ್ಲಿ ಭಾರತೀಯ ಸುಪ್ರೀಂಕೋರ್ಟ್ ಗೆ ಇರುವ ಅಧಿಕಾರದ ದೃಢೀಕರಣವೆಂದು ಭಾರತ ಸರಕಾರವು ವ್ಯಾಖ್ಯಾನಿಸಿತು. ಅದೇ ರೀತಿ ಇಟಲಿ ಸಹ ನ್ಯಾಯಾಧೀಕರಣದ ಆದೇಶವು ಇಟಲಿಯ ನಿಲುವಿನ ಸಮರ್ಥನೆಯೆಂದು ಹೇಳಿತು.
ಕೃಪೆ: ದಿ ಹಿಂದೂ

share
ಸಿ.ಉದಯ ಭಾಸ್ಕರ್
ಸಿ.ಉದಯ ಭಾಸ್ಕರ್
Next Story
X