ಸುಬ್ರಹ್ಮಣ್ಯ
ಸುಬ್ರಹ್ಮಣ್ಯ, ಮೇ 8: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಿವೃತ್ತ ನೌಕರ ಎಸ್.ಎನ್.ಸುಬ್ರಹ್ಮಣ್ಯ ಭಟ್(84) ಅಲ್ಪಕಾಲದ ಅಸೌಖ್ಯದಿಂದ ರವಿವಾರ ನಿಧನರಾದರು.
ಸರಳ, ಸಜ್ಜನಿಕೆಯ ಜನಾನುರಾಗಿ ವ್ಯಕ್ತಿತ್ವದ ಇವರು ಸುಮಾರು 35 ವರ್ಷಗಳ ಕಾಲ ಶ್ರೀದೇವಳದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story