ಮದರ್ಸ್ಡೇಯಂದೇ 1 ವರ್ಷದ ಹೆಣ್ಣಮಗುವನ್ನು ರೈಲು ಬೋಗಿಯಲ್ಲಿ ಬಿಟ್ಟುಹೋದಳಾ ಈ ಮದರ್!
ಕೋಟಾ,ಮೇ 9: ರವಿವಾರದಂದು ಇಡೀ ಜಗತ್ತು ಮದರ್ಸ್ ಡೇ ಆಚರಿಸುತ್ತಿದ್ದರೆ ಕೋಟಾದಲ್ಲಿ ತಾಯೋಬ್ಬಳು ಒಂದು ವರ್ಷದ ಮುಗ್ಧ ಹೆಣ್ಣು ಮಗುವನ್ನು ರೈಲು ಬೋಗಿಯಲ್ಲಿ ಬಿಟ್ಟು ಹೋಗಿರುವ ವಿಷಾದಕರ ಘಟನೆ ವರದಿಯಾಗಿದೆ. ಬೆಳಗ್ಗಿನ ವೇಳೆ ರೈಲ್ವೆ ಗ್ಯಾಂಗ್ಮೆನ್ಗಳಾದ ಓಂಪ್ರಕಾಶ್ ಮತ್ತು ಲೋಕೇಂದ್ರ ಸಿಂಗ್ ಎಂಬಿಬ್ಬರಿಗೆ ಬೋಗಿಯಲ್ಲಿ ಒಂದು ಮಗು ಅನಾಥವಾಗಿದ್ದುದು ಕಂಡು ಬಂದಿತ್ತು. ಕೂಡಲೇ ಅವರು ಲಾಖೆರಿಯ ಆರ್ಪಿಎಫ್ ಔಟ್ಪೋಸ್ಟ್ಗೆ ಮಾಹಿತಿ ನೀಡಿದ್ದರು.
ಲಾಖೆರಿಯಲ್ಲಿ ಇದ್ದ ಕಾನ್ಸ್ಟೇಬಲ್ ಹಂಸ್ರಾಜ್ಸಿಂಗ್ ಇಂದ್ರಗಡಕ್ಕೆ ಬಂದು ಅಲ್ಲಿಂದ ಲಾಖೆರಿಯ ಚಿಕಿತ್ಸಾಲಯವೋಂದಕ್ಕೆ ಮಗುವನ್ನು ದಾಖಲಿಸಿದ್ದಾರೆ. ಅಲ್ಲಿ ಹೆಣ್ಣುಮಗುವಿಗೆ ಪ್ರಾಥಮಿಕ ಶುಶ್ರೂಷೆ ನೀಡಲಾಗಿದ್ದು ವೈದ್ಯರು ಮಗುವಿಗೆ ಉಸಿರಾಡಲು ಕಷ್ಟವಾಗುತ್ತಿದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.
Next Story